Shivamogga | Feb 8, 2024 | ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಪೊಲೀಸ್ರು ಬರೋಬ್ಬರಿ 10 ಲಕ್ಷ ರೂಪಾಯಿ ಮೌಲ್ಯದ ಕಳ್ಳತನ ಪ್ರಕರಣವೊಂದನ್ನ ಭೇದಿಸಿದ್ದಾರೆ. ಇತ್ತೀಚೆಗೆ ಶಿವಮೊಗ್ಗ ಖಾಸಗಿ ಫೈನಾನ್ಸ್ವೊಂದರಲ್ಲಿ ಅಡವಿಟ್ಟಿದ್ದ ಚಿನ್ನಾಭರಣಗಳು ಕದ್ದಮಾಲು ಎಂಬ ಸತ್ಯ ಹೊರಬಿದ್ದಿತ್ತು. ಆ ಸಂಬಂಧ ಖಾಸಗಿ ಫೈನಾನ್ಸ್ ಕಂಪನಿ ಪೊಲೀಸರಿಗೆ ದೂರು ನೀಡಿದ್ದರಿಂದ ಎಫ್ಐಆರ್ ಸಹ ದಾಖಲಾಗಿತ್ತು.
ಇದೀಗ ದೊಡ್ಡಪೇಟೆ ಪೊಲೀಸರು ಕದ್ದ ಮಾಲನ್ನ ಖಾಸಗಿ ಫೈನಾನ್ಸ್ನಲ್ಲಿ ಅಡವಿಟ್ಟಿದ್ದ ಆರೋಪಿಯನ್ನ ಆರೆಸ್ಟ್ ಮಾಡಿ ಆತನಿಂದ ಕಳ್ಳತನ ಪ್ರಕರಣವೊಂದನ್ನ ಭೇದಿಸಿದ್ದಾರೆ. ದಿನಾಂಕ 25-05-2022 ರಂದು ಆರ್.ಎಂ.ಎಲ್ ನಗರದ ನಿವಾಸಿಯೊಬ್ಬರ ಮನೆಯಲ್ಲಿ ಕಳ್ಳತನವಾಗಿತ್ತು. ಮನೆಯಲ್ಲಿದ್ದ ಮಹಿಳೆ ಸೌದಿ ಅರೆಬಿಯಾಕ್ಕೆ ಹೋಗಿ ವಾಪಸ್ ದಿನಾಂಕ: 06-06-2023 ರಂದು ಬಂದಿದ್ದರು. ಈ ವೇಳೆ ನೋಡಿದಾಗ ಅವರ ಮನೆಯಲ್ಲಿ ಕಳುವಾಗಿರುವುದು ಗೊತ್ತಾಗಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0172/2023 ಕಲಂ 454, 457, 380 ಐಪಿಸಿ ಅಡಿಯಲ್ಲಿ ಕೇಸ್ ದಾಖಲಾಗಿತ್ತು.
ಸದ್ಯ ಪ್ರಕರಣವನ್ನ ರವಿ ಪಾಟೀಲ್ ಪಿಐ ದೊಡ್ಡಪೇಟೆ ರವರ ನೇತೃತ್ವದ, ವಸಂತ ಹೆಚ್,ಸಿ, ಪಿಎಸ್‌ಐ, ಶ್ರೀನಿವಾಸ್ ಆರ್, ಪಿಎಸ್‌ಐ, ಮಂಜಮ್ಮ ಪಿಎಸ್‌ಐ ಹಾಗೂ ಸಿಬ್ಬಂಧಿಗಳಾದ ಹೆಚ್,ಸಿ ಲಚ್ಚಾ ನಾಯ್ಕ, ಪಾಲಾಕ್ಷನಾಯ್ಕ, ಸುರೇಶ್ ಬಿ,ಬಿ, ಸಿಪಿಸಿ ಚಂದ್ರನಾಯ್ಕ, ಪುನೀತ್ ಕುಮಾರ್, ನಿತಿನ್ ಮತ್ತು ಚಂದ್ರನಾಯ್ಕ ರವರನ್ನು ಒಳಗೊಂಡ ತಂಡ ಭೇದಿಸಿದೆ.
ಪ್ರಕರಣ ಸಂಬಂಧ ದಿನಾಂಕಃ 02-02-2024 ರಂದು ಪ್ರಕರಣದ ಆರೋಪಿತ ಸಲೀಂರನ್ನ ವಶಕ್ಕೆ ಪಡೆದು ಫೈನಾನ್ಸ್ ಗಳಲ್ಲಿ ಗಿರವಿ ಇಟ್ಟಿದ್ದಂತಹ ಅಂದಾಜು ಮೌಲ್ಯ 8,28,400/- ರೂಗಳ ಒಟ್ಟು 155 ಗ್ರಾಂ 35 ಮಿಲಿ ತೂಕದ ಬಂಗಾರದ ಆಭರಣಗಳನ್ನು ಜಪ್ತಿ ಮಾಡಿದೆ
ಅಲ್ಲದೆ ಅಂದಾಜು ಮೌಲ್ಯ 8,350/- ರೂಗಳ ಒಟ್ಟು 109 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು, ರೂ 69,000/- ಮೌಲ್ಯದ 500 ರಿಯಾಲ್ ಮುಖ ಬೆಲೆಯ 6 ಸೌದಿ ಅರೇಬಿಯಾದ ನೋಟುಗಳು ಮತ್ತು ಅಂದಾಜು ಮೌಲ್ಯ 21,400/- ರೂಗಳ ವಾಚ್ ಗಳು, ಆರ್ಟಿಫಿಷಿಯಲ್ ಒಡವೆಗಳು, ವ್ಯಾನಿಟಿ ಬ್ಯಾಗ್ ಸೇರಿ ಒಟ್ಟು 10,00,000/- ರೂ ಮೌಲ್ಯದ ಮಾಲನ್ನು ವಶಕ್ಕೆ ಪಡೆದಿದೆ. ಪ್ರಕರಣವನ್ನ ಭೇದಿಸಿದ ತನಿಖಾತಂಡಕ್ಕೆ ಶುಭ ಹಾರೈಸಿದ ಎಸ್ಪಿ ಸ್ವತಃ ದೊಡ್ಡಪೇಟೆ ಪೊಲೀಸ್ ಸ್ಟೇಷನ್ಗೆ ಬಂದು ಪ್ರಾಪರ್ಟಿ ಶೊ ಮಾಡಿದ್ದರು.
