ಡೀಸೆಲ್‌ ಖಾಲಿಯಾಗಿ ನಿಂತ ಕೆಎಸ್‌ಆರ್‌ಟಿಸಿ ಬಸ್‌ | ನಡುರಸ್ತೆಯಲ್ಲಿ ಪ್ರಯಾಣಿಕರನ್ನ ಇಳಿಸಿ ಅತಂತ್ರವಾಗಿಸಿದ ಅಧಿಕಾರಿಗಳು

A KSRTC bus stopped in the middle of the road due to running out of diesel officials dropped the passengers in the middle of the road and made them restless. Shimoga Kundapur, Hulikal Ghati, Mastikate,

ಡೀಸೆಲ್‌ ಖಾಲಿಯಾಗಿ ನಿಂತ ಕೆಎಸ್‌ಆರ್‌ಟಿಸಿ ಬಸ್‌ | ನಡುರಸ್ತೆಯಲ್ಲಿ ಪ್ರಯಾಣಿಕರನ್ನ ಇಳಿಸಿ ಅತಂತ್ರವಾಗಿಸಿದ ಅಧಿಕಾರಿಗಳು
. Shimoga Kundapur, Hulikal Ghati, Mastikate,KSRTC bus

SHIVAMOGGA | MALENADUTODAY NEWS | May 23, 2024  ಮಲೆನಾಡು ಟುಡೆ

ಕೆಎಸ್‌ಆರ್‌ಟಿಸಿ ಸಂಸ್ಥೆಯು ಜನರಿಗೆ ಸಕಾಲಕ್ಕೆ ಸೇವೆ ಸಲ್ಲಿಸುವ ಹುಮ್ಮಸ್ಸಿನಲ್ಲಿದೆ. ಆದರೆ ಅಧಿಕಾರಿಗಳು ಸಂಸ್ಥೆಯ ಮಾನ ಹರಾಜಿಗೆ ಕಾರಣವಾಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತಹ ಘಟನೆಯೊಂದು ಶಿವಮೊಗ್ಗ ಹುಲಿಕಲ್‌ ಘಾಟಿಯ ಬಳಿ ನಡೆದಿದೆ.

ಶಿವಮೊಗ್ಗದಿಂದ ಕುಂದಾಪುರಕ್ಕೆ ಹೋಗುವ ಬಸ್‌ವೊಂದು ಡೀಸೆಲ್‌ ಖಾಲಿಯಾಗಿ ನಡು ರೋಡಲ್ಲಿ ಪ್ರಯಾಣಿಕರನ್ನ ಇಳಿಸಿದ ಘಟನೆಯೊಂದು ನಡೆದಿದ್ದು ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಡೀಸೆಲ್‌ ತುಂಬಿಸಲು ದುಡ್ಡಿಲ್ವಾ ಎಂದು ಜನರು ಪ್ರಶ್ನೆ ಕೇಳುವಂತೆ ಮಾಡಿದೆ. 

ಶಿವಮೊಗ್ಗದಿಂದ ಕುಂದಾಪುರ ಹೋಗುತ್ತಿದ್ದ ಬಸ್ ನಿನ್ನೆ ಸಂಜೆ ಮಾಸ್ತಿಕಟ್ಟೆ ಸಮೀಪ ನಿಂತು ಬಿಟ್ಟಿದೆ. ಬಸ್‌ನ ಡ್ರೈವರ್‌ ಹಾಗೂ ಕಂಡಕ್ಟರ್‌ ವಿಷಯವನ್ನು ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ ಅಧಿಕಾರಿಗಳು ನಿಮ್ಮ ದುಡ್ಡಿನಲ್ಲಿ ಡೀಸೆಲ್‌ ಹಾಕಿಸಿಕೊಂಡು ಬನ್ನಿ ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ. ಇತ್ತ ಡ್ರೈವರ್‌ ಹಾಗೂ ಕಂಡಕ್ಟರ್‌ ಅಸಹಾಯಕವಾಗಿ ಪ್ರಯಾಣಿಕರತ್ತ ನೋಡುತ್ತಾ ಸುಮ್ಮನಾಗಿದ್ದಾರೆ. ಆದರೆ ಪ್ರಯಾಣಿಕರ ಸ್ಥಿತಿ ದೇವರಿಗೆ ಪ್ರೀತಿಯಾಗಿತ್ತು. 

ಹಿಂದಕ್ಕೂ ಮುಂದಕ್ಕೂ ಹೋಗಲಾಗದೇ ಸುಮಾರು ನಲವತ್ತಕ್ಕೂ ಹೆಚ್ಚು ಪ್ರಯಾಣಿಕರು ರಾತ್ರಿಯಾದರೆ ಕಥೆ ಏನು ಎಂದು ಪ್ರಶ್ನಿಸುತ್ತಿದ್ದರು. ಮಹಿಳೆಯರು ಮಕ್ಕಳು ಆತಂಕಗೊಂಡಿದ್ದರು. ಆದರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಯಾವುದಕ್ಕೂ ರೆಸ್ಪಾನ್ಸ್‌ ಮಾಡುತ್ತಿರಲಿಲ್ಲ. ಕೊನೆಗೆ ವಿಷಯ ತಿಳಿದು ಸ್ಥಳೀಯರು ಬಂದು ವಿಚಾರಿಸಿದ್ದಾರೆ. ಅಲ್ಲದೆ ಅಲ್ಲಿಗೆ ಬಂದ ಖಾಸಗಿ ಬಸ್‌ಗಳಿಗೆ ಪ್ರಯಾಣಿಕರನ್ನು ಹತ್ತಿಸಿ ಅವರವರ ಊರಿಗೆ ರವಾನಿಸಿದ್ದಾರೆ. 

ಇನ್ನೂ ಸುಮಾರು ಒಂದು ಗಂಟೆ ಕಾಲ ಬಸ್‌ ನಿಂತಿದ್ದರಿಂದ ಪ್ರಯಾಣಿಕರಲ್ಲಿ ಅಭದ್ರತೆ ಕಾಡುವಂತಾಗಿತ್ತು. ಇನ್ನೂ ಕಳೆದ ಒಂದು ತಿಂಗಳಿನಲ್ಲಿ ಇದೇ ಮಾರ್ಗದಲ್ಲಿ ಮೂರು ಸಲ ಕೆಎಸ್‌ಆರ್‌ಟಿಸಿ ಬಸ್‌ ಡೀಸೆಲ್‌ ಇಲ್ಲದೆ ನಿಂತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ ಡೀಸೆಲ್‌ ವಿಚಾರದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದಕ್ಕೆ ಪ್ರಕರಣ ಸಾಕ್ಷಿಯಾಗಿದೆ. ಈ ಬಗ್ಗೆ ಸಚಿವರ ಗಮನಕ್ಕೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

Tags :Shimoga Kundapur, Hulikal Ghati, Mastikate,KSRTC bus