ಕಾರಿನ ರೀತಿ ವೇಗದಲ್ಲಿ ಹೋಗುವ ಟ್ರಾಕ್ಟರ್, ಜೆಸಿಬಿ, ಹಿಟಾಚಿಯಂತ ವಾಹನಗಳ ವೇಗಕ್ಕೆ ಕಡಿವಾಣ ಎಂದು..?

ಶಿವಮೊಗ್ಗ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಭಾರಿ ಗಾತ್ರದ ವಾಹನಗಳ ಓಡಾಟ ಸಾಮಾನ್ಯವಾಗಿದೆ. ಆದರೆ ಜನರು ಜೀವಭಯದಲ್ಲಿ ವಾಹನ ಚಲಾಯಿಸುವಂತ ಪರಿಸ್ಥಿತಿ ಎದುರಾಗಿದೆ. ವಾಹನಗಳ ಬಗ್ಗೆ ನೀಗಾ ಇಡಬೇಕಾದ ಸಾರಿಗೆ ಇಲಾಖೆ ಮಾತ್ರ ಯಾಕೊ ಕೈಕಟ್ಟಿ ಕೂತಂತಿದೆ.

ಕಾರಿನ ರೀತಿ ವೇಗದಲ್ಲಿ ಹೋಗುವ ಟ್ರಾಕ್ಟರ್, ಜೆಸಿಬಿ, ಹಿಟಾಚಿಯಂತ ವಾಹನಗಳ ವೇಗಕ್ಕೆ ಕಡಿವಾಣ ಎಂದು..?

ಶಿವಮೊಗ್ಗ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಭಾರಿ ಗಾತ್ರದ ವಾಹನಗಳ ಓಡಾಟ ಸಾಮಾನ್ಯವಾಗಿದೆ. ಆದರೆ ಜನರು ಜೀವಭಯದಲ್ಲಿ ವಾಹನ ಚಲಾಯಿಸುವಂತ ಪರಿಸ್ಥಿತಿ ಎದುರಾಗಿದೆ. ವಾಹನಗಳ ಬಗ್ಗೆ ನೀಗಾ ಇಡಬೇಕಾದ ಸಾರಿಗೆ ಇಲಾಖೆ ಮಾತ್ರ ಯಾಕೊ ಕೈಕಟ್ಟಿ ಕೂತಂತಿದೆ.

ಶಿವಮೊಗ್ಗ ನಗರದ ಹೃದಯ ಭಾಗದ ರಸ್ತೆಗಳಲ್ಲೇ ಜೆಸಿಬಿ, ಹಿಟಾಚಿ, ಟ್ರಾಕ್ಟರ್ ಟಿಪ್ಪರ್ ಗಳು ಅತೀ ವೇಗವಾಗಿ ಸಾಗುತ್ತಿವೆ. ಇನ್ನು ಕ್ರೇನ್ ವೇಗ ಕೂಡ ಕಡಿಮೆಯಾಗಿಲ್ಲ. ಮುಂಬದಿ ಉದ್ದನೆಯ ಹುಕ್ಕನ್ನು ಹಾಕಿಕೊಂಡು ಕಾರಿನ ರೀತಿ ವೇಗವಾಗಿ ಸಾಗುತ್ತಿದ್ದರೆ, ವಾಹನ ಸವಾರರು ಜೀವ ಭಯದಲ್ಲಿಯೇ ಸೈಡಿಗೆ ಸರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಟ್ರಾಕ್ಟರ್ ಚಾಲಕರಂತೂ ಯಾರಿಗೂ ಕ್ಯಾರೆ ಎನ್ನದೆ, ರಸ್ತೆಯಲ್ಲಿ ಹಿಂಬದಿ ವಾಹನ ಸವಾರರಿಗೆ ಸೈಡು ಬಿಡದೆ, ಅತೀ ವೇಗವಾಗಿ ವಾಹನ ಚಲಾಯಿಸುತ್ತಿದ್ದಾರೆ. ಮರಳು ಮಣ್ಣು ಜೆಲ್ಲಿಪುಡಿ, ಎಂ ಸ್ಯಾಂಡ್ ಸಾಗಿಸುವ ವಾಹನ ಚಾಲಕರ ವೇಗಕ್ಕೆ ಹಿಂಬದಿ ಸವಾರರು ನಲುಗಿ ಹೋಗಿದ್ದಾರೆ.

ಅತೀ ವೇಗದಿಂದ ಸಾಗುವ ಟಿಪ್ಪರ್, ಟ್ರಾಕ್ಟರ್ ಗಳಿಂದ ಹೊರಬರುವ ದೂಳು ಹಿಂಬದಿ ವಾಹನವ ಸವಾರರ ಕಣ್ಣನ್ನೇ ಬಲಿ ಪಡೆಯುವ ಸಾಧ್ಯತೆ ಹೆಚ್ಚಿದೆ.ಯಾಕೆಂದರೆ, ಮರಳು,. ಜೆಲ್ಲಿ, ಮಣ್ಣಿನ ಕಣಗಳು ಗಾಳಿಯಲ್ಲಿ ತೂರಿಬಂದು ಹಿಂಬದಿ ವಾಹನ ಸವಾರರ ಕಣ್ಣನ್ನೇ ಹೊಕ್ಕಿದ ಉದಾಹರಣೆಗಳು ಹಿಂದೆ ಸಾಕಷ್ಟು ನಡೆದಿದೆ. ಇಂತಹ ಕಚ್ಚಾ ಸಾಮಾಗ್ರಿ ಸಾಗಿಸುವಾಗ ಟಾರ್ಪಲ್ ಹಾಕಿಕೊಂಡು ಸಾಗುವ ವ್ಯವದಾನ ಚಾಲಕರಿಗೆ ಇರೋದಿಲ್ಲ. ಟ್ರಾಕ್ಟರ್ ಟಿಪ್ಪರ್ ಸೇರಿದಂತೆ ಭಾರಿ ಗಾತ್ರದ ವಾಹನಗಳ ವೇಗಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಬ್ರೇಕ್ ಹಾಕಬೇಕಿದೆ.

 

ನಗರದಲ್ಲಿ ಸಂಚರಿಸುವ ಸಿಟಿ ಬಸ್ ಗಳಿಗೆ ಬ್ರೇಕ್ ಲೈಟ್ ಇಲ್ಲ

ಇನ್ನು ಶಿವಮೊಗ್ಗ ನಗರದಲ್ಲಿ ಸಂಚರಿಸುವ ಹಲವು ಸಿಟಿ ಬಸ್ ಗಳಲ್ಲಿ ಹಿಂಬದಿ ಬ್ರೇಕ್ ಲೈಟ್ ಇಲ್ಲ. ಕೆಲವು ಸಿಟಿ ಬಸ್ ಗಳ ಸ್ಪರ್ದಾತ್ಮಕ ವೇಗ, ಹಿಂದೆ ಕೆಲವು ಜೀವಗಳನ್ನು ಬಲಿ ಪಡೆದಿದೆ. ಸಿಟಿ ಬಸ್ ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಪ್ರಯಾಣಿಕರನ್ನು ತುಂಬಲಾಗುತ್ತಿದೆ. ಇನ್ನು ಬಸ್ ಗಳ ಕಂಡಿಷನ್ ದೇವರಿಗೆ ಪ್ರೀತಿ. ಕೆಲವು ಸಿಟಿ ಬಸ್ ಗಳು ಸೂಸುವ ಹೊಗೆಗೆ ಎದುರಿನ ರಸ್ತೆಯೇ ಕಾಣಸಿಗೋದಿಲ್ಲ. ಕೆಲ ಹೊತ್ತಿನಲ್ಲಿಯೇ ಕಾರ್ಗತ್ತಲ್ಲನ್ನು ಸೃಷ್ಟಿಸಿಬಿಡುತ್ತವೆ. ಎಮ್ಮಿಷನ್ ಟೆಸ್ಟ್ ಇಂತಹ ಬಸ್ ಗಳಿಗೆ ಅಪ್ಲೆ ಅಗೋದಿಲ್ವೆನೋ ಗೊತ್ತಿಲ್ಲ. ಎಲ್ಲಾ ಸಿಟಿ ಬಸ್ ಗಳ ಕಂಡೀಷನ್ ನ್ನು ಸಾರಿಗೆ ಅಧಿಕಾರಿಗಳು ಒಮ್ಮೆ ಪರೀಕ್ಷಿಸಬೇಕು. ಅದೇ ರೀತಿ ಭಾರಿ ಗಾತ್ರದ ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕು.