ಪ್ರಸ್ತುತ ದೇಶದಲ್ಲಿ ಗೆರಿಲ್ಲಾ ಜರ್ನಲಿಸಮ್ ಅವಶ್ಯಕತೆ ಇದೆ...ಪತ್ರಕರ್ತ ಕರಪತ್ರ ಕೂಡ ಆಗಬೇಕು..ಆಕ್ಟಿವಿಸ್ಟ್ ಕೂಡ ಆಗಬೇಕು ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಅಭಿಮತ

There is a need for guerrilla journalism in the present ... Nagesh Hegde, a senior journalist

ಪ್ರಸ್ತುತ ದೇಶದಲ್ಲಿ ಗೆರಿಲ್ಲಾ ಜರ್ನಲಿಸಮ್ ಅವಶ್ಯಕತೆ ಇದೆ...ಪತ್ರಕರ್ತ ಕರಪತ್ರ ಕೂಡ ಆಗಬೇಕು..ಆಕ್ಟಿವಿಸ್ಟ್ ಕೂಡ ಆಗಬೇಕು ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಅಭಿಮತ
ಪ್ರಸ್ತುತ ದೇಶದಲ್ಲಿ ಗೆರಿಲ್ಲಾ ಜರ್ನಲಿಸಮ್ ಅವಶ್ಯಕತೆ ಇದೆ...ಪತ್ರಕರ್ತ ಕರಪತ್ರ ಕೂಡ ಆಗಬೇಕು..ಆಕ್ಟಿವಿಸ್ಟ್ ಕೂಡ ಆಗಬೇಕು ಹಿರಿಯ ಪತ್ರಕರ್ತರ ನಾಗೇಶ್ ಹೆಗಡೆ ಅಭಿಮತ

ಮಿಂಚು ಶ್ರೀನಿವಾಸ್ ಕುಟುಂಬದ ಸಾಕಾರ ಸಂಸ್ಥೆಯು ನೀಡುವ ಮಿಂಚು ಶ್ರೀನಿವಾಸ್​ ಪ್ರಶಸ್ತಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಗೇಶ್ ಹೆಗಡೆಯವರು ಭಾರತ ದೇಶದಲ್ಲಿ ಪ್ರಸ್ತುತ ಪತ್ರಿಕೋದ್ಯಮದ ಸ್ಥಿತಿಗತಿ ಬಗ್ಗೆ ಅಂಕಿ ಅಂಶಗಳ ಸಮೇತ ಅನಾವರಣಗೊಳಿಸಿದರು.

ವಿಶ್ವದ ವಿವಿಧ ದೇಶಗಳ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕವನ್ನು ಗಮನಿಸಿದರೆ, ಜಾಗತಿಕ ಮಟ್ಟದಲ್ಲಿ ಭಾರತ 106 ನೇ ಸ್ಥಾನದಲ್ಲಿದೆ. ಎರಡು ವರ್ಷದ ಹಿಂದೆ 132 ಹಾಗು ಈ ವರ್ಷ 150 ನೇ ಸ್ಥಾನಕ್ಕೆ ಕುಸಿದಿದೆ. ಉತ್ತರ ಕೊರಿಯ ಕೊನೆ ಸ್ಥಾನದಲ್ಲಿದೆ. ನಾವು ಉತ್ತರ ಕೊರಿಯಾ ಸಾಗುತ್ತಿರುವ  ಹಾದಿಯಲ್ಲಿದ್ದೇವೆ ಎಂದು ಹೇಳಿದರು.

ದೇಶದಲ್ಲಿ ಪತ್ರಿಕಾ  ಸ್ವಾತಂತ್ರ್ಯದ ಹರಣವಾಗುತ್ತಿದೆ. ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಬಾರತ 132 ಸ್ಥಾನದಲ್ಲಿದೆ . ಹಾಗೆಯೇ  ಕಾರ್ಪೋರೇಟ್ ವ್ಯವಸ್ಥೆಯ ಕೈಯಲ್ಲಿದೆ. ಇಡೀ ಭಾರತದ ಪತ್ರಿಕೋದ್ಯಮದ ಸೂತ್ರವೆಲ್ಲಾ ಅವರ ಕೈ ಸೇರಿದೆ..ಆ ವ್ಯಕ್ತಿಗಳ ಕೈಯಲ್ಲಿ ಅಗ್ರಿಕಲ್ಚರ್ ಮಾರ್ಕೇಟ್ ಇದೆ, ಸಿಮೆಂಟ್ ಉತ್ಪಾದನೆ ಅವರ  ಕೈಯಲ್ಲಿದೆ. ಸ್ಟ್ರೀಲು ಟೆಕ್ಸ್ ಟೈಲು ಸೇರಿದಂತೆ ಎಲ್ಲಾ ಕ್ಷೇತ್ರಗಳು ಅವರ ಕೈಯಲ್ಲಿದ್ದು, ಎಲ್ಲಾ ಯಜಮಾನಿಕೆಗಳು ಅವರ ಕೈಯಲ್ಲಿದೆ. ಅವರ ಕೈಯಲ್ಲಿ ಈಗ ಪತ್ರಿಕೋದ್ಯಮವೂ ಈಗ ಸಿಕ್ಕಿಹಾಕಿಕೊಂಡಿದೆ. ಹೀಗಾದರೆ ಪತ್ರಿಕೋದ್ಯಮದ ಹಾಗು ಪತ್ರಕರ್ತರ ಸ್ಥಿತಿ ಏನಾಗಬೇಡ. ಈಗಾಗಲೇ ದೇಶದಲ್ಲಿ ಪತ್ರಕರ್ತರು ಜೈಲು ಸೇರುತ್ತಿದ್ದಾರೆ. 24 ಪತ್ರಕರ್ತರು ತಿಹಾರ್ ಜೈಲಿನಲ್ಲಿದ್ದಾರೆ. ಕೇವಲ 60-70 ಪತ್ರಕರ್ತರಿಗೆ ಮಾತ್ರ ತೊಂದರೆಯಾಗಿದೆ ಎಂದು ಭಾವಿಸಿದರೆ ತಪ್ಪಾಗುತ್ತದೆ.. ಹಾಗಲ್ಲ ಉಳಿದ ಪತ್ರಕರ್ತರ ಬಾಯಿಗೆ ಭೀಗ ಹಾಕಲಾಗಿದೆ. ಇದನ್ನು ಸರ್ಕಾರ ನೇರವಾಗಿ ಮಾಡದಿದ್ದರೂ, ಔಟ್ ಸೋರ್ಸಿಂಗ್ ಮೂಲಕ ಮಾಡುತ್ತಿದೆ. ಸ್ಕ್ರೋಲ್ ಡಿಜಿಟಲ್ ಪತ್ರಿಕೆಯ ಸಂಪಾದಕನ ಉದಾಹರಣೆ ಸಾಕ್ಷಿ.

ಜನವರಿ 26 ರಂದು ಶಿವಮೊಗ್ಗ ಸ್ಪೋಟಿಸುತ್ತಾರೆ ಎಂದು ಬಂದಿದ್ದ ಫೋನ್​ ಕಾಲ್​ನಿಂದ ಪೊಲೀಸರಿಗೆ ಸಿಕ್ಕಿತ್ತು ಅಪಾರ ಸ್ಫೋಟಕ ಮತ್ತು ನಕ್ಸಲರ ಪತ್ರ! ಆದರೆ ಅವತ್ತಿನ ಘಟನೆಯಲ್ಲಿ ನಡೆದಿದ್ದೇ ಬೇರೆ!? ಜೆಪಿ ಫ್ಲ್ಯಾಶ್​ಬ್ಯಾಕ್​

ಪತ್ರಿಕಾ ಸ್ವಾತಂತ್ರ್ಯ ಹರಣ ಹೆಚ್ಚು ಆಗಿರುವುದು ಪ್ರಧಾನಿಯವರ ಕ್ಷೇತ್ರ ವಾರಣಾಸಿಯಲ್ಲಿ  ಎಂದು ಉದಾಹಣೆ ಸಮೇತ ನಾಗೇಶ್ ಹೆಗಡೆ ಉಲ್ಲೇಖಿಸಿದರು. ಬ್ರಿಟೀಷ್ ಕಾಲದ ಪ್ಯಾಂಡಮಿಕ್ ಕೇಸ್ ಗಳನ್ನ ಪತ್ರಕರ್ತರ ವಿರುದ್ಧ ಅಸ್ರ್ರವಾಗಿ ಬಳಲಾಗಿದೆ. ಇಂತಹ ಕೇಸುಗಳನ್ನು ಬ್ರಿಟೀಷರ ಕಾಲದಲ್ಲಿ ಗೋಪಾಲಕೃಷ್ಣ ಗೋಖುಲೆ ವಿರುದ್ಧ ಹಾಕಲಾಗಿತ್ತು.   ಕೊಯಮತ್ತೂರಿನ ಪತ್ರಕರ್ತನೊಬ್ಬನ ಮೇಲೆ ಈ  ಕೇಸ್ ಹಾಕಲಾಗಿದೆ. ಇಂತಹ ಸಾವಿರ ಉದಾಹರಣೆಗಳಿವೆ. ಅದನ್ನು ಹೇಳುತ್ತಾ ಹೋದರೆ ಇಂದಿನ ಯುವಪತ್ರಕರ್ತರೇ ಹೆದರಿ ಹೋಗುತ್ತಾರೆ. ಶಿವಮೊಗ್ಗದಲ್ಲಿಯೇ ರಾಜಕಾರಣಿಗಳಿಬ್ಬರ ವಿರುದ್ಧ ಸುದ್ದಿ ಪ್ರಕಟ ಮಾಡಿದ್ದಕ್ಕೆ ಕ್ರಾಂತಿದೀಪ ಪತ್ರಿಕೆ ಸಂಪಾದಕ ಎನ್. ಮಂಜುನಾಥ್ ಮೇಲೆ ಹಲ್ಲೆ ಮಾಡಿದ ಉದಾಹರಣೆ ಜೀವಂತವಾಗಿದೆ. ಹೀಗಾಗಬಾರದೆಂದರೆ ಪತ್ರಕರ್ತರು ಪ್ರಸ್ತುತ ಸಂದರ್ಭದಲ್ಲಿ ಗೆರಿಲ್ಲಾ ಜರ್ಲಲಿಸಂ ಮಾಡಬೇಕಾಗುತ್ತದೆ.

ಗೆರಿಲ್ಲಾ ಯೋಧರು ಹೇಗೆ ತೆರೆಮರೆಯಲ್ಲಿ ಯುದ್ದ ತಂತ್ರ ರೂಪಿಸುತ್ತಾರೆ ಹಾಗೆಯೇ ಇಂದಿನ ಪತ್ರಿಕೋದ್ಯಮವನ್ನು ಮುನ್ನೆಡಸಬೇಕಿದೆ. ಅಮೇರಿಕಾ ವಿಯಟ್ನಾಂ ನಂತಹ ಸಣ್ಣ ದೇಶದ ವಿರುದ್ಧ 25 ವರ್ಷಗಳ ಕಾಲ ಯುದ್ದ ಮಾಡಿ,  ವಾಪಸ್​ ಆಗಿತ್ತು. ಅಲ್ಲಿ ವಿಯಟ್ನಾಂಗೆ ನೆರವಾಗಿದ್ದು ಗೆರಿಲ್ಲಾ ತಂತ್ರ.  ಅದೇ ರೀತಿ ಜರ್ನಲಿಸಂ ನಲ್ಲೂ ಕೂಡ ಗೆರಿಲ್ಲಾ ಮಾದರಿ ವರದಿಗಳು ಬೇಕು. ಪತ್ರಕರ್ತ ಬಿಡುವಿನ ವೇಳೆಯಲ್ಲಿ ಆಕ್ಟಿವಿಸ್ಟ್ ಕೂಡ ಆಗಿರಬೇಕು. ಆ ಕೆಲಸವನ್ನು ಹಿರಿಯ ಪತ್ರಕರ್ತ ಮಿಂಚು ಶ್ರೀನಿವಾಸ್ ಮಾಡಿದ್ದರು. ರಿಪ್ಪನ್ ಪೇಟೆಯಲ್ಲಿ ಶುಂಠಿ ಬೆಳೆಗಾರರ ಹಾವಳಿ ಹೆಚ್ಚಾದಾಗ ಅಲ್ಲಿನ ರೈತರನ್ನು ಜಾಗೃತಗೊಳಿಸುವ ಕೆಲಸ ಮಾಡಿದರು. ಪತ್ರಕರ್ತ ಕರಪತ್ರ ಕೂಡ ಆಗಿರಬೇಕು. ಪತ್ರಕರ್ತ ಎಂದರೆ ಅದೊಂದು ರೀತಿಯಲ್ಲಿ ದೀಕ್ಷೆ ಪಡೆದ ರೀತಿಯಲ್ಲಿ ವೃತ್ತಿಯನ್ನು ಮಾಡಬೇಕು. ಪತ್ರಕರ್ತನ ಇಡೀ ಜೀವನದ ಆದರ್ಶವೇನೆಂದರೆ ಅಕ್ಷರಗಳ ಮೂಲಕ ದೇಶದ ರಕ್ಷಣೆ ಮತ್ತು ಸಮಾಜದ ರಕ್ಷಣೆ ಮಾಡುವುದಾಗಿದೆ ಎಂದು ನಾಗೇಶ್ ಹೆಗಡೆ ಹೇಳಿದರು.

ಇನ್ನು ಉದ್ಘಾಟನಾ ಭಾಷಣ ಮಾಡಿದ ಹಿರಿಯ ರಾಜಕಾರಣಿ,ವೈ,ಎಸ್.ವಿ ದತ್ತಾ ರಾಜಕಾರಣ ಮತ್ತು ಪತ್ರಿಕೋದ್ಯಮದ ನಡುವಿನ ಕೊಂಡಿ,,ಹೇಗೆಲ್ಲಾ ಕಳಚಿ ಹೋಗಿದೆ ಎಂಬುದನ್ನು ತಮ್ಮದೆ ಧಾಟಿಯಲ್ಲಿ ಮಾತನಾಡಿದ್ರು. ಕೋಣಂದೂರು ಲಿಂಗಪ್ಪನವರ ರಾಜಕೀಯ ಬದುಕು ನಮ್ಮಂತವರಿಗೆ ಆದರ್ಶ. ನಾಡಿಸೋಜರವರ ಸಣ್ಣ ಕಥೆಗಳು ನಮಗೆ ಸ್ಪೂರ್ತಿ. ಅವರ ಕಥೆಗಳು ಹೊಸ ಸಾಮಾಜಿಕ ಚಿಂತನೆಗೆ  ಒತ್ತುಗೊಡುವಂತೆ ಮಾಡಿದೆ. ನಾಗೇಶ್ ಹೆಗಡೆಯವರು, ಮಿಂಚು ಶ್ರೀನಿವಾಸ್ ಪ್ರಶಸ್ತಿಗೆ ಭಾಜನನಾಗಿರುವುದು ಮೆಚ್ಚುಗೆ ಗೆ ಪಾತ್ರವಾಗಿದೆ. ವಿಜ್ಞಾನ ದ ವಿಷಯಗಳನ್ನು ಸರಳವಾಗಿ ಹೇಳುವುದಲ್ಲದೆ ಸಾಹಿತ್ಯಿಕ ವಿಷಯಗಳನ್ನು ಸೇರಿಸಿ ಓದುವಂತೆ ಮಾಡುವುದು ಅವರ ಹೆಗ್ಗಳಿಕೆಯಾಗಿದೆ. ಸುಧಾ ವಾರಪತ್ರಿಕೆಯಲ್ಲಿ ಬರುತ್ತಿದ್ದ ಅವರ ಲೇಖನ ಗಳನ್ಬು ಕಾದು ಓದುತ್ತಿದ್ದೆವು. ಪತ್ರಿಕಾ ಕ್ಷೇತ್ರದ ಬಗ್ಗೆ ಮಾತನಾಡಲು ನನಗೆ ನೈತಿಕ ಹೊಣೆಗಾರಿಕೆ ಇದೆ.

ಅಂದಿನ ರಾಜಕೀಯ ವ್ಯವಸ್ಥೆಯಲ್ಲಿ ಪತ್ರಿಕೆಗಳು ವಿರೋಧ ಪಕ್ಷದ ರೀತಿಯಲ್ಲಿ ಕೆಲಸ ಮಾಡುತ್ತಿದ್ದವು. ಕಿಡಿ ಎಂಬ ಸಣ್ಣ ಪತ್ರಿಕೆಯಲ್ಲಿ ವಿಧಾನಸೌಧದಲ್ಲಿ ಭ್ರಷ್ಟಾಚಾರದ ಅಂಟಿದೆ ಎಂದು  ವರದಿ ಬಂದಾಗ,  ಸಂಪಾದಕ ಶೆಷಣ್ಣರ ಮನೆಗೆ ಅಂದಿನ ಸಿಎಂ ರಾಮಕೃಷ್ಣ ಹೆಗಡೆ ಭೇಟಿ ನೀಡಿದ್ದನ್ನು ಮೆಲಕು ಹಾಕಿದರು. ಪತ್ರಿಕಾರಂಗ ಅಂದಿನ ಕಾಲಘಟ್ಡಕ್ಕೂ ಇಂದಗೂ ಬಹಳ ಬದಲಾಗಿದೆ.  ಪ್ರಜಾಪ್ರಭುತ್ವದ ಕಾವಲು ನಾಯಿ ಎಂದು ಬಿಂಬಿತರಾಗಿದ್ದ.  ಪತ್ರಕರ್ತರು ಆಗ ನಿರ್ಭೀತಿಯಿಂದ ಬರೆಯುತ್ತಿದ್ದರು. ರಾಜಕಾರಣಿಗಳು ಅಂಜಿಕೊಳ್ಳುತ್ತಿದ್ದರು. ತಿದ್ದಿಕೊಳ್ಳುತ್ತಿದ್ದರು.ಅಂದಿನ ಸಂಪಾದಕೀಯಗಳು, ಓದುಗರ ವಾಣಿಗೆ ಮಹತ್ವವಿತ್ತು. ಇತ್ತಿಚ್ಚಿನ ದಿನಗಳಲ್ಲಿ ಪತ್ರಿಕಾ ರಂಗ  ರಿಯಲ್ ಎಸ್ಟೇಟ್ ಆಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.ಕ್ರಾಂತಿದೀಪ ಪತ್ರಿಕೆ ಸಂಪಾದಕ ಎನ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಿಂಚು ಶ್ರೀನಿವಾಸ್ ಬಗ್ಗೆ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡರು. ಪತ್ರಕರ್ತರಿಗೆ ಮಿಂಚು ಶ್ರೀನಿವಾಸ್ ಯಾವಾಗಲು ಅಧ್ಯಯನ ಶೀಲ ವ್ಯಕ್ತಿಯಾಗಿದ್ದಾರೆ. ಅವರ ಗರಡಿಯಲ್ಲಿ ನಾನು ಬೆಳೆದಿದ್ದು ಹೆಮ್ಮೆಯ ವಿಚಾರ ಎಂದು ಹೇಳಿದ್ರು.ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರಾಮಚಂದ್ರ ಗುನಾರಿ ನಾಗೇಶ್ ಹೆಗಡೆಯವರ ಪರಿಚಯವನ್ನು ಮಾಡಿಕೊಟ್ಟರು. ಹಿರಿಯ ಪತ್ರಕರ್ತ ವೈದ್ಯ ರವರು ಕಾರ್ಯಕ್ರಮ ನಿರೂಪಣೆ ಮಾಡಿದರು.

ಜನವರಿ 26 ರಂದು ಶಿವಮೊಗ್ಗ ಸ್ಪೋಟಿಸುತ್ತಾರೆ ಎಂದು ಬಂದಿದ್ದ ಫೋನ್​ ಕಾಲ್​ನಿಂದ ಪೊಲೀಸರಿಗೆ ಸಿಕ್ಕಿತ್ತು ಅಪಾರ ಸ್ಫೋಟಕ ಮತ್ತು ನಕ್ಸಲರ ಪತ್ರ! ಆದರೆ ಅವತ್ತಿನ ಘಟನೆಯಲ್ಲಿ ನಡೆದಿದ್ದೇ ಬೇರೆ!? ಜೆಪಿ ಫ್ಲ್ಯಾಶ್​ಬ್ಯಾಕ್​

*ರಾಜ್ಯದ ಕೊಡಗು-ಕೇರಳ ಬಾರ್ಡರ್​ನಲ್ಲಿ ಮತ್ತೆ ಪ್ರತ್ಯಕ್ಷವಾದ ನಕ್ಸಲ್​​ ತಂಡ*

JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!

ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com