ಪ್ರೀತಿಸಿದ್ದಕ್ಕೆ ಬಿತ್ತು ಕೇಸ್​! ಮದ್ಯ ಸೇವಿಸಲು ಹೋದವ ಆಕ್ಸಿಡೆಂಟ್​ನಲ್ಲಿ ಸಾವು! ತುಂಗಾನದಿಯಲ್ಲಿ ಬಾಲಕನ ದುರ್ಮರಣ! ಶಿವಮೊಗ್ಗ ಕ್ರೈಂ ನ್ಯೂಸ್​

Malenadu Today

ಖಾಸಗಿ ಬಸ್‌ ಡಿಕ್ಕಿ: ಯುವಕ ಸಾವು

shimoga crime news : ಶಿವಮೊಗ್ಗ ನಗರದ ಹೊರವಲಯದಲ್ಲಿ ಬೈಕ್‌ಗೆ ಹಿಂಬದಿಯಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಸಾಗರ ರಸ್ತೆಯಲ್ಲಿ ಶ್ರೀರಾಮ್ ಪುರದಿಂದ ಶಿವಮೊಗ್ಗದ ಕಡೆ ಬೈಕ್ ನಲ್ಲಿ ಬರುತ್ತಿದ್ದ ಜಾರ್ಖಂಡ್​ ಮೂಲದ ಯುವಕ ಅನ್ಸಾರಿ ಸಾವನ್ನಪ್ಪಿದ್ದಾರೆ. ಕಾರೊಂದನ್ನ ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಖಾಸಗಿ ಬಸ್ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಅನ್ಸಾರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 

ಮದ್ಯ ಸೇವಿಸಲು ಹೋದ ಯುವಕ ಆಕ್ಸಿಡೆಂಟ್​ನಲ್ಲಿ ಸಾವು!

ಇನ್ನೊಂದು ಘಟನೆಯಲ್ಲಿ ಶಿವಮೊಗ್ಗ ನಗರದ ರೈಲ್ವೆ ಸ್ಟೇಷನ್​ ಸಮೀಪದ ಗೂಡ್ಸ್​ಶೆಡ್​ನಲ್ಲಿ  ಸ್ನೇಹಿತನ ಜೊತೆಗೆ ಮದ್ಯ ಸೇವಿಸಿದ ಯುವಕ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ಕೇಸ್ ದಾಖಲಾಗಿದೆ. ಸ್ಥಳೀಯ ಯುವಕರಿಬ್ಬರು ಎಣ್ಣೇ ಹೊಡೆಯಲೆಂದು ಗೂಡ್​ಶೆಡ್​ಗೆ ಬಂದಿದ್ಧಾರೆ. ಬಳಿಕ ಅಲ್ಲಿಯೇ ಒಬ್ಬಾತ ಮಲಗಿದ್ದ, ಆತನ ಮೇಲೆ ಪಲ್ಸರ್​ ವೆಹಿಕಲ್​ವೊಂದು ಹರಿದಿದೆ. ತಕ್ಷಣವೇ  ಜೊತೆಯಲ್ಲಿದ್ದ ಬಂದಿದ್ದ ವ್ಯಕ್ತಿ, ಸಹಾಯಕ್ಕಾಗಿ ಅಂಗಲಾಚಿದ್ಧಾನೆ ಎನ್ನಲಾಗಿದೆ. ಆದರೆ ತುರ್ತು ಸನ್ನಿವೇಶದಲ್ಲಿ ತಕ್ಷಣ ನೆರವು ಸಿಗದೇ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆತನನ್ನು ಸುರೇಶ್ ಎಂದು ಗುರುತಿಸಲಾಗಿದೆ. 

ಜನವರಿ 26 ರಂದು ಶಿವಮೊಗ್ಗ ಸ್ಪೋಟಿಸುತ್ತಾರೆ ಎಂದು ಬಂದಿದ್ದ ಫೋನ್​ ಕಾಲ್​ನಿಂದ ಪೊಲೀಸರಿಗೆ ಸಿಕ್ಕಿತ್ತು ಅಪಾರ ಸ್ಫೋಟಕ ಮತ್ತು ನಕ್ಸಲರ ಪತ್ರ! ಆದರೆ ಅವತ್ತಿನ ಘಟನೆಯಲ್ಲಿ ನಡೆದಿದ್ದೇ ಬೇರೆ!? ಜೆಪಿ ಫ್ಲ್ಯಾಶ್​ಬ್ಯಾಕ್​

ಈಜಲು ತೆರಳಿದ್ದ ವಿದ್ಯಾರ್ಥಿ ಸಾವು!

ಸ್ನೇಹಿತರೊಂದಿಗೆ ನದಿಗೆ ಈಜಲು ಹೋದ 9 ನೇ ತರಗತಿ ವಿದ್ಯಾರ್ಥಿ ತುಂಗಾನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಟಿಪ್ಪು ನಗರ ಮೂಲದ ವಿದ್ಯಾರ್ಥಿ ತನ್ನ ಸ್ನೇಹಿತರ ಜೊತೆಗೆ ಈಜಲು ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಸ್ಥಳೀಯರು ಸೇರಿದಂತೆ ರಾಜಕೀಯ ಸಂಘಟನೆ ಸದಸ್ಯರು ಹಾಗೂ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬಾಲಕನಿಗಾಗಿ ತುಂಗಾನದಿಯಲ್ಲಿ ಹುಡುಕಾಡಿದ್ದಾರೆ. ಒಂದು ಗಂಟೆ ಕಾರ್ಯಾಚರಣೆ ಬಳಿಕ ಮೃತದೇಹ ಪತ್ತೆಯಾಗಿದ್ದು, ಈ ಸಂಬಧಂ ಕೇಸ್ ದಾಖಲಾಗಿದೆ.  ತುಂಗ ನದಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ವಕೀಲರ ಮೇಲೆ ಹಲ್ಲೆ 

ಇನ್ನು ಶಿವಮೊಗ್ಗದ ಮೆಗ್ಗಾನ್  ಆಸ್ಪತ್ರೆಯಲ್ಲಿ ಹಳೆಯ ದ್ವೇಷಕ್ಕೆ ವಕೀಲರ ಮೇಲೊಬ್ಬರ ಮೇಲೆ ಹಲ್ಲೆಆಗಿರುವ ಬಗ್ಗೆ ವರದಿಯೊಂದು ಬಂದಿದೆ. ಆಸ್ಪತ್ರೆಯಲ್ಲಿ ವಕೀಲರನ್ನ ಅಡ್ಡಗಟ್ಟಿದ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ತಮ್ಮ ವಿರುದ್ಧವೇ ಪೊಲೀಸರಿಗೆ ಕಂಪ್ಲೆಂಟ್ ಕೊಡುತ್ತೀಯಾ ಎಂದು ಆರೋಪಿಗಳು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂದ ವಕೀಲರು ಪೊಲೀಶರಿಗೆ ದೂರು ನೀಡಿದ್ದಾರೆ. ಯುವತಿಯೊಬ್ಬಳನ್ನು ಚುಡಾಯಿಸಿದ ಪ್ರಕರಣ ಸಂಬಂಧ, ವಕೀಲರು ಪೊಲೀಸ್​ ಸ್ಟೇಷನ್​ನಲ್ಲಿ ಆಕೆಯ ಪರ ಮಾತನಾಡಿದ್ದರು. ಈ ಧ್ವೇಷಕ್ಕೆ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ

ಅಪ್ರಾಪ್ತೆಗೆ ತಾಳಿ ಕಟ್ಟಿದ ಯುವಕ

ಮತ್ತೊಂದು ಘಟನೆಯಲ್ಲಿ ಅಪ್ರಾಪ್ತೆಯೊಬ್ಬಳಿಗೆ ತಾಳಿ ಕಟ್ಟಿದ ಪ್ರಕರಣವೊಂದು ದಾಖಲಾಗಿದೆ. ಒಂದೇ ಗ್ರಾಮದ ಇಬ್ಬರು ಪ್ರೀತಿಸ್ತಿದ್ದರಂತೆ. ಈ ನಡುವೆ ಮನೆಯಲ್ಲಿ ಮದುವೆ ಮಾಡಲು ಮುಂದಾಗಿದ್ದಾರೆ ಎಂಬ ಕಾರಣಕ್ಕೆ ಪ್ರಿಯಕರನ ಜೊತೆಗೆ ಹೋದ ಅಪ್ರಾಪ್ತೆಯನ್ನು ದೇವಸ್ಥಾನವೊಂದರಲ್ಲಿ ಯುವಕ ಮದುವೆಯಾಗಿದ್ಧಾನೆ. ಅಲ್ಲದೆ, ತನ್ನ ಮನೆಯಲ್ಲಿಯೇ ಇರಿಸಿಕೊಂಡಿದ್ಧಾರೆ. ಈ ಸಂಬಂಧ ಕೇಸ್ ದಾಖಲಾಗಿದ್ದು, ಆರೋಪಿ ವಿರುದ್ಧ ಕೇಸ್ ದಾಖಲಾಗಿದೆ. 

*ರಾಜ್ಯದ ಕೊಡಗು-ಕೇರಳ ಬಾರ್ಡರ್​ನಲ್ಲಿ ಮತ್ತೆ ಪ್ರತ್ಯಕ್ಷವಾದ ನಕ್ಸಲ್​​ ತಂಡ*

JP BIG EXCLUSIVE : ಸಕ್ರೆಬೈಲ್ ಅನೆ ಬಿಡಾರದಿಂದ ಮತ್ತೆ ಮೂರು ಆನೆಗಳ ಸ್ಥಳಾಂತರಕ್ಕೆ ಬೇಡಿಕೆ!

ನಂದಿನಿ ಜಂಬೋ ಪಾಕೆಟ್ ಹಾಲಿನ ದರ 3 ರೂಪಾಯಿ ಹೆಚ್ಚಳ!

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

 

Share This Article