KARNATAKA NEWS/ ONLINE / Malenadu today/ Oct 1, 2023 SHIVAMOGGA NEWS’
ಶಿವಮೊಗ್ಗ ನಗರ ರಾಗಿಗುಡ್ಡದ ಬಳಿ ಇರುವ ಚಾನಲ್ ಸಮೀಪ ಹಾಕಲಾಗಿದ್ದ ಪ್ಲೆಕ್ಸ್ ವಿಚಾರವಾಗಿ ಸ್ಥಳದಲ್ಲಿ ಕೆಲಕಾಲ ಗೊಂದಲ ಉಂಟಾಗಿತ್ತು. ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ಭೇಟಿಕೊಟ್ಟ ಎಸ್ಪಿ ಮಿಥುನ್ ಕುಮಾರ್, ಮುಖಂಡರ ಮನವೊಲಿಸಿ ಗೊಂದಲ ಬಗೆಹರಿಸಿದ್ದಾರೆ
ರಾಗಿಗುಡ್ಡದ ಚಾನಲ್ ಬಳಿಯಲ್ಲಿ ಹಾಕಲಾಗಿದ್ದ ಫ್ಲೆಕ್ಸ್ವೊಂದರ ಒಂದು ಭಾಗಕ್ಕೆ ಬಿಳಿ ಬಣ್ಣವನ್ನು ಬಳಿಯಲಾಗಿತ್ತು. ಇದನ್ನ ವಿರೋಧಿಸಿ ರಾಗಿಗುಡ್ಡದ ಮುಸ್ಲಿಮರು ಪ್ರತಿಭಟನೆ ನಡೆಸಿದರು. ರಸ್ತೆ ತಡೆ ನಡೆಸಿದರು.
ಇನ್ನೂ ವಿಚಾರ ತಿಳಿದು ಸ್ಥಳಕ್ಕೆ ಬಂದ ಎಸ್ಪಿ ಮಿಥುನ್ ಕುಮಾರ್ ಮುಖಂಡರ ಜೊತೆ ಮಾತನಾಡಿದ್ದಾರೆ, ಫ್ಲೆಕ್ಸ್ ನಲ್ಲಿ ಆಗಿದ್ದ ಗೊಂದಲವನ್ನು ಬಗೆಹರಿಸಿದ ಅವರು, ಯಾವುದೇ ವದಂತಿಗೆ ಕಿವಿಗೊಡಬೇಡಿ, ಅದ್ದೂರಿಯಾಗಿ ಈದ್ ಮಿಲಾದ್ ನಡೆಯಲು ಬೇಕಾಗಿರುವ ಅವಶ್ಯಕ ಸಿಬ್ಬಂದಿ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ರಾಗಿಗುಡ್ಡದಲ್ಲಿ ಪರಿಸ್ಥಿತಿ ಶಾಂತವಾಗಿದೆ , ಯಾವುದೇ ಸಮಸ್ಯೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
ರಾಷ್ಟ್ರೀಯ ಹೆದ್ದಾರಿ 169 A ನಲ್ಲಿ ಬೆಳಗಿನ ಜಾವ ಧಗಧಗ ಹೊತ್ತಿ ಉರಿದ ಮರ! ಏನಿದು ಘಟನೆ
ಸಿಗಂದೂರು ಚೌಡೇಶ್ವರಿ ದರ್ಶನ ಪಡೆದು ಬೆಂಗಳೂರಿಗೆ ಹೋಗುತ್ತಿದ್ದಾಗ ಶಾಕ್! ಸೂಡೂರು ಸಮೀಪ ಆಕ್ಸಿಡೆಂಟ್!
