ತೀರ್ಥಹಳ್ಳಿ ತಾಲೂಕಿನಲ್ಲಿ ವಿವಿದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಸುಹೇಲ್ ಕೋಬ್ರಾ ವಿಷ ಸೇವಿನಿ ಸಾವನ್ನಪ್ಪಿದ್ದಾನೆ. ಕೊಲೆ ಸುಲಿಗೆ, ದರೋಡೆ, ಕಳ್ಳತನ, ದೊಂಬಿ ಗಲಾಟೆ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೊಬ್ರಾ ಯಾರ ಹೆದರಿಕೆ ಅಂಜಿಕೆಯಿಲ್ಲದೆ ಇದ್ದ.

ಆದ್ರೆ ಅದ್ಯಾವಾಗ ಶಿರಸಿ ಪೊಲೀಸರು, ತೀರ್ಥಹಳ್ಳಿ ಪಟ್ಟಣಕ್ಕೆ ಕಾಲಿಟ್ಟರೋ..ಸುಹೇಲ್ ಗೆ ಭೀತಿ ಎದುರಾಗಿದೆ. ಶಿರಸಿಯ ಬಸವಾಸಿ ಬಳಿ ಅಡಿಕೆ ವ್ಯಾಪಾರಿಯಿಂದ 50 ಲಕ್ಷ ದರೋಡೆ ಮಾಡಿದ ಆಸಿಫ್ ತಂಡದಲ್ಲಿ ಕೊಬ್ರಾ ಹೆಸರು ಕೇಳಿ ಬಂದಿತ್ತು. ಶಿರಸಿ ಪೊಲೀಸರು, ತೀರ್ಥಹಳ್ಳಿಯಲ್ಲಿ ಆರೋಪಿಯೊಬ್ಬನನ್ನು ಎತ್ತಾಕಿಕೊಂಡು ಹೋಗುತ್ತಿದ್ದಂತೆ ನನ್ನ ಹೆಸರು ಎಲ್ಲಿ ಈತ ಪ್ರಸ್ಥಾಪ ಮಾಡುತ್ತಾನೆ ಎಂಬ ಭಯದಲ್ಲಿ ಕೊಬ್ರಾ ವಿಷ ಸೇವಿಸಿದ್ದ ಎಂದು ಮೂಲಗಳು ತಿಳಿಸಿವೆ. ವಿಷ ಸೇವಿಸುವುದಕ್ಕೂ ಒಂದು ವಾರ ಮೊದಲೇ ಎರಡು ವರ್ಷಗಳ ಅವಧಿಗೆ ಜಿಲ್ಲೆಯಿಂದ ಗಡಿಪಾರು ಮಾಡಿತ್ತು. ನವೆಂಬರ್ 28ರಂದು ಗಡಿಪಾರು ಆದೇಶವನ್ನು ಜಾರಿ ಮಾಡಿ ಆತನ ಮನೆಗೆ ನೋಟಿಸ್ ಕಳುಹಿಸಲಾಗಿತ್ತು.
ಗಡಿಪಾರು ಆದೇಶಕ್ಕೆ ಬೆದರದ ಸುಹೇಲ್ ಬನವಾಸಿ ಅಡಿಕೆ ಕಳ್ಳತನ ಪ್ರಕರಣದಲ್ಲಿ ನನ್ನ ಹೆಸರು ಎಲ್ಲಿ ತೇಲಿ ಬರುತ್ತೋ ಎಂಬ ಕಾರಣಕ್ಕೆ ಮನೆಯಲ್ಲಿ ವಿಷ ಸೇವಿಸಿ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಮನೆಯವರು ಆತನನ್ನು ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಸುಹೇಲ್ಗೆ ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯೆನಪೋಯಾ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ 1 ಗಂಟೆಗೆ ಸುಹೇಲ್ ಸಾವನ್ನಪ್ಪಿದ್ದಾನೆ..