MALENADUTODAY.COM | SHIVAMOGGA | #KANNADANEWSWEB
ರಾಜ್ಯದಲ್ಲಿ ಎಲೆಕ್ಷನ್ ಕಾವು ಜೋರಾಗುತ್ತಿದೆ. ಜೊತೆಯಲ್ಲಿಯೇ ಬೇಸಿಗೆಯು ದಗೆಯು ಪ್ರಾರಂಭವಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲು ಬಿಸಿಲಿನ ಝಳ, ನೆಲ ಗಾಳಿಯನ್ನು ಕಾಯಿಸುತ್ತಿದೆ. ಬೇಸಿಗೆ ಧಗಧಗಿಸುವ ತಿಂಗಳುಗಳು ಸಹ ಎದುರಿನಲ್ಲಿಯೇ ಇವೆ. ಇದರ ನಡುವೆ ಆತಂಕದ ಸಂಗತಿ ಎಂದರೇ ತುಂಗಾನದಿಯಲ್ಲಿ ನೀರು ಕಮ್ಮಿಯಾಗುತ್ತಿದೆ. ಹೊಳೆನೀರು ಸದ್ಯ ಕಡಿಮೆಯಾಗುತ್ತಿರುವ ಲೆಕ್ಕದಲ್ಲಿ ನೋಡಿದರೆ, ಕಡುಬೇಸಿಗೆಯ ತಿಂಗಳಾದ ಮಾರ್ಚ್, ಎಪ್ರಿಲ್, ಮೇನಲ್ಲಿ ಕುಡಿಯುವ ನೀರಿಗೆ ಬರ ಎದುರಾಗುವ ಆತಂಕವಿದೆ.
ತೀರ್ಥಹಳ್ಳಿ- ಶಿವಮೊಗ್ಗದ ನಡುವೆ ಗಾಜನೂರಿನಲ್ಲಿ ಡ್ಯಾಂ ನಿರ್ಮಿಸಲಾಗಿದೆ. ಸದ್ಯ ಈ ಜಲಾಶಯವೇ ಶಿವಮೊಗ್ಗ ನಗರದ ನೀರಿನ ಆಶಯವಾಗಿದೆ. ಡ್ಯಾಂನಲ್ಲಿಯೇ ನೀರು ಕಡಿಮೆಯಾದರೆ, ನಗರ ಪ್ರದೇಶದಲ್ಲಿ ನೀರಿನ ಕೊರತೆ ಸಾಕಷ್ಟು ಸಮಸ್ಯೆ ತಂದೊಡ್ಡಲಿದೆ. ತೂದೂರಿನವರೆಗೂ ಆವರಿಸಿರುವ ಹಿನ್ನೀರಿನ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದು ಅಂದಾಜಿಗೆ ಸಿಗುತ್ತಿದೆ.
ನಗರದ ಪ್ರದೇಶದ ಕಥೆ ಒಂದು ಕಡೆಯಾದರೆ, ಇನ್ನೂ ತುಂಗಾನದಿಯ ನೀರನ್ನೆ ನಂಬಿಕೊಂಡಿರುವ ಪಂಚಾಯಿತಿಗಳಲ್ಲಿ ಪ್ರಮುಖವಾಗಿ ಕುಡುಮಲ್ಲಿಗೆ, ಬೆಜ್ಜವಳ್ಳಿ, ತೂದೂರು ಸೇರಿದಂತೆ ತೀರ್ಥಹಳ್ಳಿ ಭಾಗದ ಪಂಚಾಯಿತಿಗಳು ತುಂಗಾನದಿಯಿಂದಲೇ ಕುಡಿಯುವ ನೀರನ್ನು ಹರಿಸುತ್ತಿದೆ. ಆದರೆ ಈ ಭಾಗದಲ್ಲಿ ಈಗಾಗಲೇ ನದಿಯ ಬಂಡೆಗಳು ಕಾಣುತ್ತಿದ್ದು, ನೀರು ಕಳೆದ ವರ್ಷಕ್ಕಿಂತಲೂ ಹೆಚ್ಚು ಖಾಲಿಯಾಗುತ್ತಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ಧಾರೆ.
READ | ಕೋವಿಡ್ ಟೈಂನಲ್ಲಿ ರಜೆ ಕೇಳಿ ಹೋಗಿದ್ದ ಕಾನ್ಸ್ಟೇಬಲ್ ಕಾಣೆ! ಮಾಳೂರು ಪೊಲೀಸ್ ಸ್ಟೇಷನ್ನಲ್ಲಿ ದಾಖಲಾಯ್ತು ಕೇಸ್
READ |ನುಗ್ಗೆಕಾಯಿ ಕಿರಿಕ್, ಉಣುಗೋಲಿನಿಂದ ಹಲ್ಲೆ! ಕರೆಂಟ್ ಲೈನ್ ಕೇಳಲು ಬಂದವ ದೊಣ್ಣೆಯಿಂದ ಹಲ್ಲೆ! ಕ್ರೈಂ ನ್ಯೂಸ್
ಚುನಾವಣೆಯ ಎಫೆಕ್ಟೋ ಏನೋ ಎಂಬಂತೆ, ಈ ಭಾಗಗಳಲ್ಲಿ ದಿನಕ್ಕೆ 16 ಗಂಟೆ 3 ಪೇಸ್ ಪವರ್ ಸಪ್ಲೆಯಾಗುತ್ತಿದೆ. ಇದರಿಂದ ರೈತರಿಗೂ ಬೆಳೆಗಳಿಗೆ ಯಥೆಚ್ಚ ನೀರು ಹರಿಸಲು ಸಾದ್ಯವಾಗುತ್ತಿದೆ. ಆದರೆ ಸೈಡ್ ಎಫೆಕ್ಟ್ ಎಂಬಂತೆ ತುಂಗಾನದಿಯಲ್ಲಿ ನೀರು ಕಮ್ಮಿಯಾಗುತ್ತಿದೆ. ಸದ್ಯ ತೀರ್ಥಹಳ್ಳಿ ಭಾಗದ ಬಾಳ್ಗಾರು,ಮಹಿಷಿ, ತೂದೂರು, ಗಬಡಿ ಭಾಗಗಳಲ್ಲಿ ಹೊಳೆಯಲ್ಲಿ ನೀರು ಕಡಿಮೆಯಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇನ್ನೊಂದೆಡೆ ತುಂಗಾನದಿಗೆ ಹರಿಯುವ ಸಣ್ಣಪುಟ್ಟ ಹಳ್ಳಕೊಳ್ಳಗಳು ಬಹುತೇಕ ಬರಿದಾಗುವ ಹಂತವನ್ನು ತಲುಪಿವೆ. ಹೀಗಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಬರ ಎದುರಾಗುವ ಆತಂಕವನ್ನು ಈ ಭಾಗದ ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.
ಜನಪ್ರತಿನಿಧಿಗಳು ಚುನಾವಣೆ ತಯಾರಿಯಲ್ಲಿದ್ದರೇ, ಆಡಳಿತ ವ್ಯವಸ್ಥೆಯು ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸುವ ಪ್ರಕ್ರಿಯೆಗೆ ಸಿದ್ಧವಾಗುತ್ತಿದೆ. ಇದರ ನಡುವೆ ಬೇಸಿಗೆಯಲ್ಲಿ ನೀರಿನ ಬರ ಎದುರಾದರೆ ಪರಿಣಾಮವನ್ನ ಜನರು ಎದುರಿಸಬೇಕು ಎಂಬುದು ಜನರ ದೂರು ಈ ಬಗ್ಗೆ ಆಡಳಿತಾಂಗ ಈಗಲೇ ಎಚ್ಚೆತ್ತುಕೊಂಡು, ಹಿತಮಿತವಾಗಿ ನೀರು ಸರಭರಾಜಿನ ವ್ಯವಸ್ಥೆಯನ್ನು ಕೈಗೊಳ್ಳುವುದು ಉತ್ತಮ ಎಂಬುದು ಜನರ ಅಭಿಪ್ರಾಯವಾಗಿದೆ.