MALENADUTODAY.COM | SHIVAMOGGA | #KANNADANEWSWEB
ಇದು ನನ್ನ ಕೊನೆಯ ಅಧಿವೇಶನ ಎಂದ ಬಿಎಸ್‌ವೈ
ಪಕ್ಷಕ್ಕಾಗಿ ನಾನು ಇನ್ನೂ ಹೋರಾಟ ಮಾಡುತ್ತೇನೆ. ಮನೆಯಲ್ಲಿ ಕೂತುಕೊಳ್ಳುವ ಪ್ರಶ್ನೆಯೇ ಇಲ್ಲ. ನೀವು ಎಲ್ಲೆಲ್ಲಿ ಕರೆಯುತ್ತಿರೋ ಅಲ್ಲೆಲ್ಲಾ ಬರುತ್ತೇನೆ. ಇನ್ನೂ ಐದು ವರ್ಷಗಳ ಕಾಲ ದೇವರು ಕೆಲಸ ಮಾಡುವ ಶಕ್ತಿಯನ್ನು ಕೊಟ್ಟರೆ ಖಂಡಿತ, ಈ ಚುನಾವಣೆ ಹಾಗೂ ಇನ್ನೊಂದು ಚುನಾವಣೆಯಲ್ಲೂ ಶಕ್ತಿ ಮೀರಿ ಕೆಲಸ ಮಾಡುತ್ತೇನೆ! ಇದು ಬಿಜೆಪಿಯ ಹಿರಿಯ ಮುತ್ಸದ್ದಿ ಬಿಎಸ್ವೈರವರ ಭಾವುಕ ಮಾತು. ಇವತ್ತು ಅಧಿವೇಶನದಲ್ಲಿ ತಮ್ಮ ವಿದಾಯದ ಮಾತುಗಳನ್ನ ಆಡಿದ ಯಡಿಯೂರಪ್ಪನವರು, ನಾನು ಈಗಾಗಲೇ ಹೇಳಿದ್ದೇನೆ, ಚುನಾವಣೆಯಲ್ಲಿ ನಿಲ್ಲಲ್ಲ. ಹಾಗಾಗಿ ಈ ಸೌಧಕ್ಕೆ ಮತ್ತೆ ನಾನು ಬರಲು ಆಗದು.
ಆದರೆ ನರೇಂದ್ರ ಮೋದಿಯವರು ನನಗೆ ಕೊಟ್ಟಿರುವ ಗೌರವ, ಸ್ಥಾನಮಾನಗಳು. ಇದನ್ನು ನಾನು ಜೀವಮಾನದಲ್ಲೇ ಮರೆಯಲು ಸಾಧ್ಯವಿಲ್ಲ. ಹಾಗಾಗಿ ಬದುಕಿನ ಕೊನೆಯ ಉಸಿರಿರುವರೆಗೂ ಬಿಜೆಪಿಯನ್ನು ಕಟ್ಟುವುದಕ್ಕೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಕ್ಕೆ ನನ್ನ ಶಕ್ತಿ ಮೀರಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಆ ಬಗ್ಗೆ ಯಾವುದೇ ಸಂಶಯಬೇಡ ಎಂದಿದ್ದಾರೆ. ನಾನು ಕಲಾಪದ ಮಧ್ಯದಲ್ಲಿ ಯಾವುದೇ ಮಾತುಗಳನ್ನೂ ಆಡಿಲ್ಲ. ಇದು ನನ್ನ ಕಡೆಯ ಅಧಿವೇಶನ. ಯಾಕಂದ್ರೆ ನಿಮಗೆ ಈಗಾಗಲೇ ಗೊತ್ತಿದೆ, ನಾನು ಮತ್ತೆ ಚುನಾವಣೆಯಲ್ಲಿ ನಿಲ್ಲಲ್ಲ ಎಂದು ಹೇಳಿದ್ದೇನೆ. ಹೀಗಾಗಿ ನಾನು ಇವತ್ತು ಮತ್ತೊಮ್ಮೆ ಹೇಳೇನೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರೋಣ ಎಂದರು. ಅಲ್ಲದೆ ಈ ಸಂದರ್ಭದಲ್ಲಿ ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟ ಸಭಾಧ್ಯಕ್ಷರಿಗೆ, ನನ್ನೆಲ್ಲ ಸದಸ್ಯರಿಗಳಿಗೆ ಆಬಾರಿ ಆಗಿದ್ದೇನೆ ಎಂದರು.
ಸಿದ್ದರಾಮಯ್ಯರಿಗೆ ಬಿಎಸ್‌ವೈ ಸಲಹೆ
ಇನ್ನೂ ಸಿದ್ದರಾಮಯ್ಯರನ್ನು ಉದ್ದೇಶಿಸಿ, ನೀವು ಗೆದ್ದುಬದ್ದ ಕ್ಷೇತ್ರದಲ್ಲಿಯೇ ಮತ್ತೊಮ್ಮೆ ಸ್ಪರ್ದಿಸಿ, ನಿಮ್ಮನ್ನು ಗೆಲ್ಲಿಸಿದವರಿಗೆ ಇದರಿಂದ ಸಮಾಧಾನವಾಗುತ್ತದೆ. ಒಮ್ಮೆ ಗೆದ್ದು ಬಂದ ಕ್ಷೇತ್ರವನ್ನು ಬಿಟ್ಟು ಬಂದು ಬೇರೆ ಕಡೆ ಸ್ಪರ್ಧಿಸಲು ಕ್ಷೇತ್ರ ಹುಡುಕಾಟ ನಡೆಸ್ತಿದ್ದೀರಿ. ಏಕೆ? ನೀವು ಆಯ್ಕೆಯಾದ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸಲು ನಿಮಗೆ ಧೈರ್ಯವಿಲ್ಲವೇ? ಹಾಗಂದರೆ ನೀವು ಅಭಿವೃದ್ಧಿ ಕೆಲಸ ಮಾಡಿಲ್ಲವೇ? ಅಥವಾ ಸೋಲಿನ ಭೀತಿ ಇರಬೇಕು ಎಂದ ಬಿಎಸ್‌ವೈ ನೀವು ಕ್ಷೇತ್ರಗಳನ್ನ ಬದಲಾಯಿಸುವುದಾದರೆ, ಬೇರೆ ಕ್ಷೇತ್ರಗಳ ಜನರು ನಿಮ್ಮನ್ನು ಹೇಗೆ ನಂಬಬೇಕು ಎಂದು ಪ್ರಶ್ನಿಸಿದ್ರು. ಅಲ್ಲದೆ, ಸಿದ್ದರಾಮಯ್ಯನವರು ಪುನಃ ಅದೇ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಿ, ಆಯ್ಕೆಯಾಗಬೇಕು. ಇಲ್ಲವಾದರೆ ನಿಮ್ಮನ್ನು ಆಯ್ಕೆ ಮಾಡಿದ ಮತದಾರರಿಗೆ ನೀವು ದ್ರೋಹ ಮಾಡಿದಂತೆ ಆಗುತ್ತದೆ ಎಂದರು.