ವಿಜಯೇಂದ್ರ ಮಂಡ್ಯದಲ್ಲಿ ಮನೆಯನ್ನಾದರೂ ಮಾಡಲಿ, ಅರೆಮನೆಯನ್ನಾದರೂ ಮಾಡಲಿ ! ಕಾಂಗ್ರೆಸ್​ಗೆ ನಿದ್ರೆಯಲ್ಲಿಯು ಮೋದಿ ಕಾಣ್ತಾರೆ

This Article Written by / Malenadu Today / ಫೆಬ್ರವರಿ 22, 2023

MALENADUTODAY.COM | SHIVAMOGGA  | #KANNADANEWSWEB

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ನ ಪಂಚರತ್ನ ಯಾತ್ರೆಇದೀಗ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಸಾಗುತ್ತಿದೆ. ಮಾಜಿ ಸಿಎಂರ ಯಾತ್ರೆ ಪಕ್ಷದ ಅಭ್ಯರ್ಥಿ ಶಾರದಾ ಪೂರನಾಯ್ಕ ಹಾಗೂ ಜೆಡಿಎಸ್‌ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಸೇರಿದಂತೆ ನೂರಾರು ಕಾರ್ಯಕರ್ತರ ಸಾಥ್ ನೀಡುತ್ತಿದ್ದಾರೆ. 

ಇನ್ನೂ ಈ ಸಂದರ್ಭದಲ್ಲಿ ಮಾತನಾಡಿದ ಹೆಚ್​ಡಿಕೆ, ಕಾಂಗ್ರೆಸ್‌ ನಾಯಕರಿಗೆ ಮೋದಿ ಭಯ ಇದೆ ಎಂದರು.  ಜೆಡಿಎಸ್ ನಾಯಕರ ಮುಖವಾಡ ಕಳಚಿದರೆ ನರೇಂದ್ರ ಮೋದಿ ಕಾಣುತ್ತಾರೆ ಎಂಬ ಕಾಂಗ್ರೆಸ್‌ ನಾಯಕ ಸುರ್ಜಿವಾಲರವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ಸಿಗರಿಗೆ ನಿದ್ರೆಯಲ್ಲೂ ಮೋದಿಯೇ ಕಾಣುತ್ತಾರೆ, ಆಪರೇಷನ್ ಕಮಲದ ನಂತರದ ಮೊದಲ ಚುನಾವಣೆಯಲ್ಲಿ ನಿಮ್ಮ ಪ್ರತಿಪಕ್ಷ ನಾಯಕ ಎಷ್ಟಕ್ಕೆ ಸುಪಾರಿ ಪಡೆದಿದ್ದರು ಎಂಬ ಬಗ್ಗೆ ಸುರ್ಜೆವಾಲರವರು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. 

READ | ವಿಮಾನದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪನವರ ಮಕ್ಕಳು ಓಡಾಡುತ್ತಾರೆ! ಹೆಚ್​ಡಿಕೆ ವಾಗ್ದಾಳಿ! ಕಟೌಟ್ ಹರಿದಿದ್ದಕ್ಕೆ ಶಾರದಾ ಅಪ್ಪಾಜಿ ಕಣ್ಣೀರು

ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ಬಿಜೆಪಿ ಎ ಟೀಮ್, ಬಿ ಟೀಮ್ ಯಾವುದು ಎಂಬುದನ್ನು ಜನ ನಿರ್ಧರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ರು,ಆಧಾರ ರಹಿತ ಹೇಳಿಕೆಗಳು ಕಾಂಗ್ರೆಸ್​ಗೆ ಮುಳುವಾಗುತ್ತದೆ  ಜನರು ನಿಮ್ಮನ್ನು ತಿರಸ್ಕರಿಸುತ್ತಾರೆ. ಇನ್ನಾದರೂ ಎಚ್ಚರಿಕೆಯಿಂದ ಮಾತನಾಡಿ ಅಂಥಾ ಸಲಹೆ ನೀಡಿದ್ರು. 

ಪಂಚರತ್ನ ರಥಯಾತ್ರೆಗೆ ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದ ಹೆಚ್ ಡಿಕೆ, ಅಶ್ವತ್ಥ ನಾರಾಯಣ್​ ರಾಮನಗರದಲ್ಲಿ ನಡೆದುಕೊಂಡ ರೀತಿ ಸರಿಯಿಲ್ಲ, ಹೋಮ ನಡೆಯುತ್ತಿದ್ದ ಜಾಗಕ್ಕೂ ಹೋಗದೆ ವೇದಿಕೆ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದು ಸರಿಯಲ್ಲ ಎಂದರು,  ವಿಜಯೇಂದ್ರ ಮಂಡ್ಯದಲ್ಲಿ ಮನೆಯನ್ನಾದರೂ ಮಾಡಲಿ, ಅರೆಮನೆಯನ್ನಾದರೂ ಮಾಡಲಿ ಅಥವಾ ಶಿವಮೊಗ್ಗದಲ್ಲಿ ಕಟ್ಟಿರುವಂತೆ ದೊಡ್ಡ ದೊಡ್ದ ಕಟ್ಟಡವನ್ನಾದರೂ ಕಟ್ಟಲಿ ನಮಗೇನು ತೊಂದರೆ ಇಲ್ಲ ಎಂದು ವ್ಯಂಗ್ಯವಾಡಿದ್ರು. 

READ |  ಎಂಥಾ..ಎಂಥಾ ಹಾರಾನೋ? ಅಡಿಕೆ ತಟ್ಟೆ, ನೀರಿನ ಬಾಟ್ಲಿ, ಕಲ್ಲಂಗಡಿ ! ಹಾರಗಳಲ್ಲೇ ಅಭಿಮಾನ ಮೆರೆದ ಕಾರ್ಯಕರ್ತರು| ವಿಡಿಯೋ ನೋಡಿ

ಸರ್ಕಾರಿ ನೌಕರರಿಂದ ಪ್ರತಿಭಟನೆ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸರ್ಕಾರಿ ನೌಕರರಿಡ ದೊಡ್ದ ದೊಡ್ದ ಸನ್ಮಾನ ಮಾಡಿಸಿಕೊಂಡವರು ಈಗ ಎಲ್ಲಿ ಹೋದರು, ಏಳನೇ ವೇತನ ಆಯೋಗದ ಜಾರಿ ಕುರಿತಾಗಿ ನೌಕರರಿಗೆ ಅಸಮಾಧಾನ ಇದೆ. ನಿಮ್ಮ ಪರವಾಗಿ ಯಾರು ಕೆಲಸ ಮಾಡಿದ್ದರು ಎಂಬುದನ್ನು ನೌಕರರು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ರು

READ | ಕೋವಿಡ್ ಟೈಂನಲ್ಲಿ ರಜೆ ಕೇಳಿ ಹೋಗಿದ್ದ ಕಾನ್​ಸ್ಟೇಬಲ್​ ಕಾಣೆ! ಮಾಳೂರು ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾಯ್ತು ಕೇಸ್

READ |ನುಗ್ಗೆಕಾಯಿ ಕಿರಿಕ್​, ಉಣುಗೋಲಿನಿಂದ ಹಲ್ಲೆ! ಕರೆಂಟ್ ಲೈನ್ ಕೇಳಲು ಬಂದವ ದೊಣ್ಣೆಯಿಂದ ಹಲ್ಲೆ! ಕ್ರೈಂ ನ್ಯೂಸ್

SHIVAMOGGA

ಮುಂದಿನ ಸುದ್ದಿ ಒದಿ

Leave a Comment