KARNATAKA NEWS/ ONLINE / Malenadu today/ Oct 6, 2023 SHIVAMOGGA NEWS
ಮೈಸೂರು ದಸರಾದ ಹಾಗೆ ಶಿವಮೊಗ್ಗದಲ್ಲಿಯು ಜಂಬು ಸವಾರಿ ಈ ಸರ್ತಿಯು ಸಕ್ರೆಬೈಲ್ ಆನೆಗಳು ಬರುವುದು ನಿಕ್ಕಿಯಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ನೀಡಿದ ಅನುಮತಿಯ ಪ್ರತಿ ಮಲೆನಾಡು ಟುಡೆಗೆ ಲಭ್ಯವಾಗಿದೆ. ಉಲ್ಲೇಖಿತ ಪತ್ರದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಡೆಯುವ ದಸರಾ ಮಹೋತ್ಸವದಲ್ಲಿ ಆನೆಗಳನ್ನು ನೀಡುವುದಕ್ಕೆ ಸಂಬಂಧಿಸಿದ ಪುಸ್ತಾವನೆಯನ್ನು ಪರಿಶೀಲಿಸಿರುವ ಅರಣ್ಯ ಇಲಾಖೆ ಮೈಸೂರು ದಸರಾ ಮಹೋತ್ಸವ ಮತ್ತು ಬೆಂಗಳೂರಿನಲ್ಲಿ ಸರ್ಕಾರದ ಮುಖ್ಯ ಸಮಾರಂಭಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜೋತ್ಸವದಲ್ಲಿ ಮೆರವಣಿಗೆ ಹಾಗೂ ಮುಖ್ಯ ಅತಿಥಿಗಳಿಗೆ ಮಾಲಾರ್ಪಣೆ ಮಾಡಲು ಮಾತ್ರ ಇಲಾಖಾ ಆನೆಗಳನ್ನು ನೀಡಲು ಅವಕಾಶವಿರುತ್ತದೆ ಎಂದು ತಿಳಿಸಿದೆ.
ಆದಾಗ್ಯು , ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ದಿನಾಂಕ: 24-10-2023 ರಂದು ನಡೆಯುವ ದಸರಾ ಮರವಣಿಗೆಗೆ ಸೂಕ್ತ ತಾಲೀಮು ಹೊಂದಿದ 03 ಪಳಗಿದ ಅಲಂಕೃತ ಆನೆಗಳನ್ನು ಸಿಬ್ಬಂದಿಗಳೊಂದಿಗೆ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಸಕ್ರೆಬೈಲು ಆನೆ ಬಿಡಾರದಿಂದ ನೀಡಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.
ಹಾಗೆ ಈ ಸಂಬಂಧ ಷರತ್ತುಗಳನ್ನು ವಿಧಿಸಿದೆ. . ಈ ಕಾರ್ಯಕ್ರಮಕ್ಕೆ ಪಳಗಿಸಿದ ಆನೆಗಳನ್ನು ಒದಗಿಸುವಾಗ ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 ಹಾಗೂ ಅದರಡಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು, ಆನೆಗಳ ನಿರ್ವಹಣೆ ಹಾಗೂ ಬಳಸಿಕೊಳ್ಳುವ ಬಗ್ಗೆ ಸರ್ಕಾರದ ಆದೇಶ ಸಂಖ್ಯೆ ಅಪಜೀ 248 ಎಫ್‌ಡಬ್ಲ್ಯೂಎಲ್ 2015, ದಿನಾಂಕ: 11-09-2017 ರ ಆದೇಶದಲ್ಲಿನ ಮಾರ್ಗಸೂಚಿ ಸಂಖ್ಯೆ: 10 ಎಫ್(ಎ) ರಿಂದ (ಐ) ರಲ್ಲಿ ಆನಗಳನು ಮರವಣೆಗೆಯಲ್ಲಿ ಬಳಸಿಕೊಳ್ಳಲು ವಿಧಿಸಿರುವ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.
ಆನೆಗಳ ಉಸ್ತುವಾರಿಯನ್ನು ನೋಡಿಕೊಳ್ಳಲು ವಲಯ ಅರಣ್ಯಾಧಿಕಾರಿಗಳ ಮಟ್ಟದ ಅಧಿಕಾರಿಯನ್ನು ನಿಯೋಜಿಸತಕ್ಕದ್ದು, ಸದರಿ ಉತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಸಾಕಾನೆಗಳಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳತಕ್ಕದ್ದು.ಆನೆಗಳನ್ನು ಬಳಸಿಕೊಂಡು ಕಾರ್ಯಕ್ರಮವನ್ನು ನಡೆಸುವಾಗ ಯಾವುದೇ ಅವಘಡಗಳು ಸಂಭವಿಸಿದಲ್ಲಿ ಕಾರ್ಯಕ್ರಮದ ಆಯೋಜಕರೇ ಸಂಪೂರ್ಣವಾಗಿ ಹೊಣೆಗಾರರಾಗಿರುತ್ತಾರೆ.
ಅಂತಹ ಘಟನೆಗಳಿಂದ ಉಂಟಾಗುವ ನ್ಯಾಯಾಲಯದ ವ್ಯಾಜ್ಯಗಳು ಮತ್ತು ನೀಡಬೇಕಾದ ಪರಿಹಾರ ಇತ್ಯಾದಿಗಳನ್ನು ಭರಿಸುವ ಜವಾಬ್ದಾರಿಯು ತಮ್ಮದಾಗಿದೆ. ಎಂದು. ಕಾರ್ಯಕ್ರಮದ ಆಯೋಜಕರು ಮುಚ್ಚಳಿಕೆ ನೀಡತಕ್ಕದ್ದು ಎಂದು ಸೂಚಿಸಿದೆ.
ಆನೆಗಳದ್ದೆ ಸಮಸ್ಯೆ! ಹೆಣ್ಣಾನೆ ಗರ್ಭಿಣಿ! ಗಂಡಾನೆಗೆ ಮದ! ಇನ್ನೂ ಮಲೆನಾಡು ಟುಡೆಗೆ ಲಭ್ಯವಾದ ಮಾಹಿತಿ ಪ್ರಕಾರ, ಶಿವಮೊಗ್ಗ ದಸರಾಕ್ಕೆ ಯಾವ ಆನೆಗಳನ್ನು ಕಳುಹಿಸಬೇಕು ಎಂಬುದು ಇನ್ನೂ ಫೈನಲ್ ಆಗಿಲ್ಲ. ಇದೇ ವಿಚಾರವಾಗಿ ಸಕ್ರೆಬೈಲ್ ಆನೆ ಬಿಡಾರದಲ್ಲಿ ಸ್ವಲ್ಪ ತಲೆಬಿಸಿಯಿದೆ.
ಏಕೆಂದರೆ ಬಾನುಮತಿ ಪ್ರೆಗ್ನೆಂಟ್ ಆಗಿದೆ. ಕುಂತಿ ಈಗಷ್ಟೆ ಮರಿ ಹಾಕಿದ್ದಾಳೆ. ಉಳಿದವಳು ನೇತ್ರಾ ಅವಳು ಸಹ ಗರ್ಭಿಣಿ ಎನ್ನಲಾಗುತ್ತಿದೆ. ಹೀಗಾಗಿ ಈ ಆನೆಗಳಲ್ಲಿ ಯಾರನ್ನು ಕಳುಹಿಸಿಬೇಕು ಎಂಬುದು ಸ್ಪಷ್ಟವಾಗಿಲ್ಲ.
ಇನ್ನೂ ಗಂಡಾನೆಗಳ ಪೈಕಿ ಸೋಮಣ್ಣ ಆನೆಗೆ ಮದ ಬಂದಿದೆ, ಹೀಗಾಗಿ ಈತನನ್ನ ಶಿವಮೊಗ್ಗಕ್ಕೆ ಕಳುಹಿಸಲು ಕಷ್ಟಸಾಧ್ಯ. ಇನ್ನೂ ಸಾಗರ್ ಆನೆ, ಬಾಲಣ್ಣ ಆನೆಗಳು ಹಾಗೂ ಹೊಸ ಆನೆಗಳಿದ್ದು, ಅವುಗಳ ನಡುವೆಯು ಅವುಗಳದ್ದೇ ಆದ ಕೆಲವೊಂದು ಸಮಸ್ಯೆಗಳಿವೆ ಹಾಗಾಗಿ ಯಾವ ಆನೆಗಳನ್ನು ಕಳುಹಿಸಿಕೊಡಲಾಗುತ್ತದೆ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.
ಇನ್ನಷ್ಟು ಸುದ್ದಿಗಳು
R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ
ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ
