ಮಗ ಸರಿಯಾಗಿ ನೋಡಿಕೊಳ್ತಿಲ್ಲ | ತಂದೆಯಿಂದ ಕಂಪ್ಲೆಂಟ್‌ | ಪೊಲೀಸರಿಂದ ಕ್ವಿಕ್‌ ಆಕ್ಷನ್‌

The son is not well taken care of Complaint from father Quick action by the police. Incident at Shikaripura Shiralakoppa in Shimoga district

ಮಗ ಸರಿಯಾಗಿ ನೋಡಿಕೊಳ್ತಿಲ್ಲ | ತಂದೆಯಿಂದ ಕಂಪ್ಲೆಂಟ್‌ | ಪೊಲೀಸರಿಂದ ಕ್ವಿಕ್‌ ಆಕ್ಷನ್‌
Shikaripura, Shiralakoppa,Shimoga district

SHIVAMOGGA | MALENADUTODAY NEWS |  Apr 22, 2024  

ತನ್ನ ಸ್ವಂತ ಮಗ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಪದೇಪದೆ ಉಪದ್ರ ಕೊಡುತ್ತಿದ್ದಾನೆ ಎಂದು ಆರೋಪಿಸಿ ತಂದೆಯೊಬ್ಬರು ಪೊಲೀಸರಿಗೆ ಕರೆ ಮಾಡಿ ನೆರವು ಕೇಳಿದ್ದಾರೆ. ಈ ಘಟನೆ ಬಗ್ಗೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿ ವರದಿಯಾಗಿದೆ. 

ಹಿರಿಯ ವಯಸ್ಸಿನ ವ್ಯಕ್ತಿಯೊಬ್ಬರು ತಮ್ಮ ಮಗ ತಮಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಅಲವತ್ತುಕೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣವೇ ವಿಷಯ ಸಂಗ್ರಹಿಸಿ ಸ್ಥಳಕ್ಕೆ ಬಂದ ಪೊಲೀಸರು ಹಿರಿಯರ ಮಗನಿಗೆ ಬುದ್ದಿವಾದ ಹೇಳಿದ್ದಾರೆ. ಕಾನೂನಿನ ತಿಳುವಳಿಕೆ ನೀಡಿ, ತಂದೆಯನ್ನು ನೋಡಿಕೊಳ್ಳುವುದು ಕರ್ತವ್ಯ ಎಂದು ಮನವರಿಕೆ ಮಾಡಿದ್ದಾರೆ. ಇನ್ನು ಮುಂದೆ ಸರಿಯಾಗಿ ನೋಡಿಕೊಳ್ಳಿ ಎಂದು ಎಚ್ಚರಿಕೆಯನ್ನು ನೀಡಿ ಕೇಸನ್ನ ಅಲ್ಲಿಯೇ ಇತ್ಯರ್ಥ ಮಾಡಿದ್ದಾರೆ. 

ಪೋಷಕರು ಮಕ್ಕಳ ಅಪಸವ್ಯದ ಬಗ್ಗೆ ಹೆದರಿಕೊಳ್ಳಬೇಕಿಲ್ಲ. ಅವರು ಕೊಡುವ ನೋವುಗಳನ್ನ ನುಂಗಿ ಸಹಿಸಿಕೊಳ್ಳಬೇಕಿಲ್ಲ. ತಮ್ಮ ಹಕ್ಕನ್ನು ಮಕ್ಕಳಿಗೆ ನೀಡಿದ ಹಾಗೆ ಅವರ ಕರ್ತವ್ಯವನ್ನು ನಿಬಾಯಿಸದೇ ಇದ್ದಾಗ ಅದನ್ನ ಪ್ರತಿಭಟಿಸಬಹುದು. ಮನೆಗಳಲ್ಲಿ ಎದುರಾಗುವ ಸ್ವಂತ ಮಕ್ಕಳ ಸಮಸ್ಯೆಗೆ ಪೋಷಕರು ಪೋಲಿಸರ ನೆರವನ್ನು ಯಾಚಿಸಬಹುದು ಎಂಬುದಕ್ಕೆ ಪ್ರಕರಣವೂ ಸಾಕ್ಷಿಯಾಗಿದೆ.