ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು (shikaripura) ಶಿರಾಳಕೊಪ್ಪದಲ್ಲಿ (shiralakoppa) JOIN CFIಎಂದು ಎಲ್ಲಾ ಕಡೆಗಳಲ್ಲಿ ಬರೆಯಲಾಗಿದೆ ಎಂಬ ಸುದ್ದಿ ಮೊನ್ನೆಯಿಂದಲೂ ಹರಿದಾಡುತ್ತಿದೆ. ನಿನ್ನೆ ಈ ಸುದ್ದಿ ರಾಜ್ಯದೆಲ್ಲಡೆ ಸುದ್ದಿ ಮಾಡಿತ್ತು. ನಿಷೇಧಿತ ಸಂಘಟನೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾಗೆ ಸೇರ್ಪಡೆಗೊಳ್ಳಿ ಎಂಬಂತಹ ಬರಹಗಳು ಯಾರದ್ದೋ ಕುಕೃತ್ಯ ಎಂದು ವರದಿಯಾಗಿತ್ತು.
ಇದನ್ನು ಸಹ ಓದಿ : ಸರ್ಕಾರಿ ಅಧಿಕಾರಿಗಳೇ ಹುಷಾರ್ | ರಹಸ್ಯ ಕ್ಯಾರ್ಯಾಚರಣೆ ಹೆಸರಿನಲ್ಲಿ ಹೆದರಿಸುವವರಿದ್ದಾರೆ?
ಆದರೆ ಈ ಬಗ್ಗೆ ಪೊಲೀಸ್ ಮೂಲಗಳು ಬೇರೆಯದ್ದೆ ಮಾಹಿತಿಯನ್ನು ನೀಡಿದೆ. ಈ ಸಂಬಂಧ ಪ್ರೆಸ್ ಗ್ರೂಪ್ನಲ್ಲಿ ಮಾಹಿತಿ ನೀಡಿರುವ ಎಸ್ಪಿ ಜಿಕೆ ಮಿಥುನ್ ಕುಮಾರ್, ಗೋಡೆಬರಹ ಪ್ರಕರಣದಲ್ಲಿ, ಕರೆಂಟ್ ಕಂಬವೊಂದರ ಮೇಲೆ ಬರೆಯಲಾದ ಬರಹ, ಆ ಸಂಘಟನೆ ನಿಷೇಧಗೊಳ್ಳುವುದಕ್ಕೂ ಹಿಂದಿನದ್ದು ಎಂದು ತಿಳಿಸಿದ್ದಾರೆ. ಅಲ್ಲದೆ ಇದಕ್ಕೆ ಪೂರಕವಾದ ಸಾಕ್ಷ್ಯಗಳು ಸಿಕ್ಕಿದ್ದು, ಅದರ ವಿವರಗಳನ್ನು ಸಹ ನೀಡಿದ್ದಾರೆ.
ಇದನ್ನು ಸಹ ಓದಿ : ಪಿಕಪ್ಗೆ ಹೊರಟಿದ್ದ ಟೂರಿಸ್ಟ್ ಗಾಡಿ ಆಕ್ಸಿಡೆಂಟ್, ಪಲ್ಟಿಯಾಗಿ ಮೋರಿಗೆ ಬಿದ್ದ ಬಸ್
ಈ ಸಂಬಂಧ ಎರಡು ವಿಡಿಯೋಗಳು ಲಭ್ಯವಾಗಿದ್ದು ಒಂದು 04/09/2022 ತಾರೀಖು ಮತ್ತೊಂದು 12/09/2022 ರಂದು ನಡೆದ ಗಣಪತಿ ವಿಸರ್ಜನಾ ಮೆರವಣಿಗೆಯ ವಿಡಿಯೋಗಳಾಗಿವೆ. ಈ ವಿಡಿಯೋಗಳಲ್ಲಿ ಸ್ಪಷ್ಟವಾಗಿ ಕರೆಂಟ್ ಕಂಬದ ಮೇಲೆ ಬರಹ ಇರುವುದು ಕಾಣುತ್ತಿದೆ.
ಹೀಗಾಗಿ ಇದು, ಈಗ ಯಾರೋ ನಡೆಸಿದ ಕುಕೃತ್ಯವಲ್ಲ, ಈ ಮೊದಲೇ ಇದ್ದ ಬರಹವಾಗಿದೆ ಎಂಬುದು ಸ್ಪಷ್ಟವಾಗಿದೆ. ಆದಾಗ್ಯು ಘಟನೆಯನ್ನು ನಿನ್ನೆ ಮೊನ್ನೆ ನಡೆದಿದೆ ಎಂಬಂತೆ ಬಿಂಬಿಸಿ ವೈರಲ್ ಮಾಡಿದ್ದು ಯಾರು? ಘಟನೆಯ ಹಿಂದಿರೋ ಉದ್ದೇಶ ಮತ್ತು ಫೋಟೋಗಳನ್ನು ಹಂಚಿದ್ದರ ಹಿಂದಿರುವ ವ್ಯಕ್ತಿಗಳ ಬಗ್ಗೆ ಪೊಲೀಸ್ ಇಲಾಖೆ ತಲಾಶ್ ನಡೆಸ್ತಿದೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
#ಶಿರಾಳಕೊಪ್ಪದಲ್ಲಿ #ಗೋಡೆಬರಹ / @Shivamogga_SP ಹೇಳಿದ್ದೇನು? / ನಡೆದಿದ್ದೇನು – https://t.co/0YIlihGKYw#shivamogga #shikaripura #shiralakoppa pic.twitter.com/28QKGO9L6O
— malenadutoday.com (@CMalenadutoday) December 5, 2022



