ಇತ್ತೀಚೆಗಷ್ಟೆ 17 ಲಕ್ಷ ರೂಪಾಯಿಗೆ ಖರೀದಿಯಾಗಿ, ಜನರ ಹುಬ್ಬೇರುವಂತೆ ಮಾಡಿದ್ದ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಸಮನವಳ್ಳಿಯ ಹೋರಿ ಚಾಮುಂಡಿ ಎಕ್ಸ್ಪ್ರೆಸ್ ಸಾವನ್ನಪ್ಪಿದೆ. ಈ ಸುದ್ದಿ ಹೋರಿ ಓಟ (horihabba) ಸ್ಪರ್ಧೆಯ ಅಭಿಮಾನಿಗಳಲ್ಲಿ ದುಃಖ ಮೂಡಿಸಿದೆ.
ಚಾಮುಂಡಿ ಎಕ್ಸ್ಪ್ರೆಸ್ (chamundi express) ಎಂದೇ ಪ್ರಖ್ಯಾತವಾಗಿದ್ದ ಈ ಹೋರಿಯ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಜಬರ್ದಸ್ತ್ ಹಿಟ್ ಆಗಿದ್ದವು. ಸಿನಿಮಾ ಹಾಡುಗಳಿಗೆ ಈ ಹೋರಿಯ ವಿಡಿಯೋಗಳನ್ನು ಎಡಿಟ್ ಮಾಡಿ ಹರಿಬಿಡಲಾಗುತ್ತಿತ್ತು. ಮತ್ತವು ಫೇಮಸ್ ಸಹ ಆಗಿದ್ದವು.
ಇದನ್ನು ಸಹ ಓದಿ : ಸರ್ಕಾರಿ ಅಧಿಕಾರಿಗಳೇ ಹುಷಾರ್ | ರಹಸ್ಯ ಕ್ಯಾರ್ಯಾಚರಣೆ ಹೆಸರಿನಲ್ಲಿ ಹೆದರಿಸುವವರಿದ್ದಾರೆ?
ಮಲೆನಾಡು ಹಾಗು ಬಯಲು ಸೀಮೆಯಲ್ಲಿ ನಡೆಯುವ ಹೋರಿ ಬೆದರಿಸುವ ಹಬ್ಬಗಳಲ್ಲಿ ಪಾಳ್ಗೊಳ್ತಿದ್ದ ಚಾಮುಂಡಿ ಎಕ್ಸ್ಪ್ರೆಸ್ ಯಾರ ಕೈಗೂ ಸಿಗದೇ ಗುರಿ ಮುಟ್ಟುತ್ತಿತ್ತು.
ಇದನ್ನು ಸಹ ಓದಿ : ಪಿಕಪ್ಗೆ ಹೊರಟಿದ್ದ ಟೂರಿಸ್ಟ್ ಗಾಡಿ ಆಕ್ಸಿಡೆಂಟ್, ಪಲ್ಟಿಯಾಗಿ ಮೋರಿಗೆ ಬಿದ್ದ ಬಸ್
ಒಟ್ಟು 17 ಲಕ್ಷ ರೂಪಾಯಿಗೆ ಖರೀದಿಯಾಗಿದ್ದ ಚಾಮುಂಡಿ ಎಕ್ಸ್ಪ್ರೆಸ್ ರಾಜ್ಯಮಟ್ಟದಲ್ಲಿ ಸುದ್ದಿ ಮಾಡಿತ್ತು. ಇದಾದ ಬಳಿಕ ಕೆಲದಿನಗಳ ಹಿಂದಷ್ಟೆ ಚಾಮುಂಡಿ ಎಕ್ಸ್ಪ್ರೆಸ್ನ ಪ್ರಖ್ಯಾತಿ ನೋಡಿ ಮಾಸೂರಿನ ಮುತ್ತಣ್ಣರವರು 17 ಲಕ್ಷ ರೂಪಾಯಿಗೆ ಖರೀದಿಸಿದ್ದರು. ಆದರೆ ಡಿಸೆಂಬರ್ 2 ರಂದು ಸಾವನ್ನಪ್ಪಿದೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link