ಜೀವ ಪರ ಸರ್ಜಿ ಬಿಜೆಪಿ ಪರ ಆಗಲು ಕಾರಣವಾಗಿದ್ದು ವಿನಯ್ ಗುರೂಜಿಯಾ?

ಹಂಚಿಕೊಳ್ಳಿ
WhatsApp Facebook X Telegram

 ಶಿವಮೊಗ್ಗ  ನಗರ ಕ್ಷೇತ್ರದಲ್ಲಿ ಖುದ್ದು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ, ಪಕ್ಷಗಳ ಟಿಕೆಟ್ ಹಾಗೂ ಸ್ವತಂತ್ರ್ಯ ಅಭ್ಯರ್ಥಿಯಾಗುವ ಹುಮ್ಮಸ್ಸು ತೋರಿದ್ದ ಡಾ. ಧನಂಜಯ್ ಸರ್ಜಿ ನಿನ್ನೆ ಅಧಿಕೃತವಾಗಿ ಬಿಜೆಪಿ ಸೇರಿದ್ಧಾರೆ. 

ಜೀವಪರ ಸರ್ಜಿ ಎಂದೇ ಟ್ಯಾಗ್​​ಲೈನ್​ ಹಾಕಿಕೊಂಡಿದ್ದ ಡಾ.ಸರ್ಜಿ ಇದೀಗ ಬಿಜೆಪಿ ಪರವಾಗಿದ್ದಾರೆ. ಉಳಿದ ಅಭ್ಯರ್ಥಿಗಳಿಗೆ ಕಾಂಪಿಟೇಶನ್​ ಕೊಡುತ್ತಾರೆ. ಹಾಗೊಂದು ವೇಳೆ ಅದೃಷ್ಟ ಕೈಗೂಡಿದರೇ, ನಗರಕ್ಕೊಂದು ಹೊಸ ಎಂಎಲ್​ಎ ಸಿಗಬಹುದು ಎಂದೇ ಜನರು ಮಾತನಾಡಿಕೊಳ್ತಿದ್ರು.

ಇದನ್ನು ಸಹ ಓದಿ : ಸರ್ಕಾರಿ ಅಧಿಕಾರಿಗಳೇ ಹುಷಾರ್ |  ರಹಸ್ಯ ಕ್ಯಾರ್ಯಾಚರಣೆ ​ ಹೆಸರಿನಲ್ಲಿ ಹೆದರಿಸುವವರಿದ್ದಾರೆ?  

ಆದರೆ ಈ ನಡುವಿನ ಸೈಲೆಂಟ್ ಆಫರೇಷನ್​ನಲ್ಲಿ ಸರ್ಜಿಯವರನ್ನ ಬಿಜೆಪಿ ಪರ ವಾಲಿಸಿಕೊಂಡಿದ್ದಾರೆ ಕೇಸರಿ ಪಕ್ಷದ ನಾಯಕರು. ಇದಕ್ಕೆ ಅವಧೂತ ಗೌರಿಗದ್ದೆಯ ವಿನಯ್​ ಗುರೂಜಿಯವರ (Sri Vinaya Guruji Ashrama – Gowrigadde) ಸಂಧಾನ ಕಾರಣವಾಯ್ತಾ ಎಂಬ ಪ್ರಶ್ನೆಗಳು ಸಹ ಇದೀಗ ಕೇಳಿಬಂದಿದೆ. 

ಇದಕ್ಕೆ ಉತ್ತರವಾಗಿ ಕೆಲವು ಮೂಲಗಳ ಪ್ರಕಾರ, ವಿನಯ್​ ಗುರೂಜಿಯವರ ಸಂಧಾನ ನಡೆದಿದ್ದು ನಿಜ ಎನ್ನಲಾಗ್ತಿದೆ.  ಕಳೆದ ವಾರವಷ್ಟೆ ಶಿವಮೊಗ್ಗಕ್ಕೆ ಬಂದಿದ್ದ ವಿನಯ್​ ಗುರೂಜಿಯವರು (vinay guruji predictions), ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪರವರನ್ನು ಸಹ ಭೇಟಿ ಮಾಡಿದ್ದರು, ಅಲ್ಲದೆ ಡಾ.ಧನಂಜಯ್ ಸರ್ಜಿಯವರ ಕುಟುಂಬವನ್ನು ಸಹ ಭೇಟಿ ಮಾಡಿದ್ದರು. 

ಇದನ್ನು ಸಹ ಓದಿ : ಶಿರಾಳಕೊಪ್ಪದಲ್ಲಿ ಗೋಡೆ ಬರಹ / ಎಸ್​ಪಿ ಹೇಳಿದ್ದೇನು? / ನಡೆದಿದ್ದೇನು?

ಈ ವೇಳೆ ಗೋಪಾಳದಲ್ಲಿರುವ ಉದ್ಯಮಿಯೊಬ್ಬರ ಮನೆಯಲ್ಲಿ ವಿನಯ್​ ಗರೂಜಿ ಸರ್ಜಿಯವರ ಜೊತೆ ಸಭೆ ನಡೆಸಿದ್ದಾರೆ. ಈ ವೇಳೆ ಅವರ ಮನವೊಲಿಸಿ, ಬಿಜೆಪಿ ಸೇರುವಂತೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಇದನ್ನು ಸಹ ಓದಿ  : ಪಿಕಪ್​ಗೆ ಹೊರಟಿದ್ದ ಟೂರಿಸ್ಟ್ ಗಾಡಿ ಆಕ್ಸಿಡೆಂಟ್​, ಪಲ್ಟಿಯಾಗಿ ಮೋರಿಗೆ ಬಿದ್ದ ಬಸ್​

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor