ಗಾಳಿ ಮಳೆಗೆ ರೋಡ್‌ ಮೇಲೆ ಬಿದ್ದ ವಿದ್ಯುತ್‌ ಕಂಬ | ಸ್ವಲ್ಪದರಲ್ಲಿಯೇ ತಪ್ಪಿದ ಅಪಾಯ

Electric pole fell on the road due to wind and rain

ಗಾಳಿ ಮಳೆಗೆ ರೋಡ್‌ ಮೇಲೆ ಬಿದ್ದ ವಿದ್ಯುತ್‌ ಕಂಬ | ಸ್ವಲ್ಪದರಲ್ಲಿಯೇ ತಪ್ಪಿದ ಅಪಾಯ
Electric pole

SHIVAMOGGA | MALENADUTODAY NEWS |  Apr 22, 2024  

ಶಿವಮೊಗ್ಗದಲ್ಲಿ  ಸುರಿದ ಮಳೆಯಿಂದಾಗಿ ವಿದ್ಯುತ್‌ ಕಂಬವೊಂದು  (Electric pole) ರಸ್ತೆಯ ಮೇಲೆಯೇ ಉರುಳಿ ಬಿದ್ದ ಘಟನೆಯೊಂದರ ಬಗ್ಗೆ ವರದಿಯಾಗಿದೆ. ಶಿವಮೊಗ್ಗದ ತುಂಗಾನಗರ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ  ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಅದೃಷ್ಟಕ್ಕೆ ಯಾರಿಗೂ ಅಪಾಯ ಉಂಟಾಗಿಲ್ಲ. ಕಂಬ ರಸ್ತೆಗೆ ಉರುಳುತ್ತಲೇ ಪವರ್‌ ಟ್ರಿಪ್‌ ಆಗಿ ವಿದ್ಯುತ್‌ ಸಂಚಾರ ಸ್ಥಗಿತಗೊಂಡಿದೆ. 

ವಿಪರೀತ ಗಾಳಿಯಿಂದಾಗಿ ವಿದ್ಯುತ್‌ ಕಂಬ ನೆಲಕ್ಕೆ ಉರುಳಿದೆ. ಇನ್ನೂ ಈ ಬಗ್ಗೆ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಪೊಲೀಸ್‌ ಸಿಬ್ಬಂದಿ , ಮೆಸ್ಕಾಂ ಸಿಬ್ಬಂದಿ ದೌಡಾಯಿಸಿದ್ದಾರೆ. ಅಲ್ಲದೆ ವಿದ್ಯುತ್‌ ಕಂಬವನ್ನ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸಿಬ್ಬಂದಿ ಹಾಗೂ ಇಲಾಖೆಯ ತ್ವರಿತ ಸ್ಪಂದನೆ ಸ್ಥಳೀಯರಲ್ಲಿ ಖುಷಿ ತಂದಿತ್ತು.