MALENADUTODAY.COM |SHIVAMOGGA| #KANNADANEWSWEB
ಶಿವಮೊಗ್ಗ : 2022-23 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿ ಮಾಡಲು ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗ ವತಿಯಿಂದ ವಿಶೇಷ ಕೌಂಟರ್ ತೆರೆಯಲಾಗಿದೆ.
ಮಾ.05 ರ ಭಾನುವಾರದಂದು ನಗರದ ಸಹ್ಯಾದ್ರಿ ಕಾಲೇಜ್ ಎದುರು ವಿದ್ಯಾನಗರ, ಶಾಂತಿನಗರದ ಯಲ್ಲಮ್ಮ ದೇವಸ್ಥಾನ ಚಾನಲ್ ಹತ್ತಿರ, ಮಲ್ಲಿಕಾರ್ಜುನ ನಗರ ಗಣಪತಿ ದೇವಸ್ಥಾನದ ಎದುರು 100 ಅಡಿರಸ್ತೆ, ಜಿಲ್ಲಾ ಪಂಚಾಯತ್ ಕಚೇರಿ ಹಿಂಭಾಗ ಎ.ಎನ್.ಕೆ.ರಸ್ತೆ, ಹಾಗೂ ಅಶೋಕನಗರ ನಂದಿನಿ ಬೂತ್ ಪೊಲೀಸ್ ಠಾಣೆ ಹತ್ತಿರ, ಶಿವಮೊಗ್ಗ ಈ ಸ್ಥಳಗಳಲ್ಲಿ ವಿಶೇಷ ವಸೂಲಾತಿ ಕೌಂಟರ್‍ಗಳನ್ನು ತೆರೆಯಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 
ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #
