ತನ್ನ ಕಾರನ್ನೆ ಕದ್ದ ಮಾಲೀಕ, ಕಂಪ್ಲೇಂಟು ಕೊಟ್ಟವನ್ನು ಸಣ್ಣ ಸಂಶಯದಿಂದ ಪೊಲೀಸರು ಹಿಡಿದಿದ್ದೇಗೆ ಗೊತ್ತಾ? ಸಖತ್ ಇಂಟರ್​ಸ್ಟಿಂಗ್ ಆಗಿದೆ ಸ್ಟೋರಿ

ಒಂದು ಸಣ್ಣ ಕ್ಲೂ, ಎಂತೆಹ ಪ್ಲಾನ್​ನನ್ನಾದರೂ ಮಕಾಡೆ ಮಲಗಿಸುತ್ತೆ ಎನ್ನುವುದಕ್ಕೆ ಶಿವವಮೊಗ್ಗ ನಗರದ ತುಂಗಾನಗರ ಪೊಲೀಸ್ ಸ್ಟೇಷನ್​ನಲ್ಲಿ ನಡೆದ ಒಂದು ಕೃತ್ಯವೇ ಸಾಕ್ಷಿ ಹೇಳುತ್ತಿದೆ.

ತನ್ನ ಕಾರನ್ನೆ ಕದ್ದ ಮಾಲೀಕ, ಕಂಪ್ಲೇಂಟು ಕೊಟ್ಟವನ್ನು ಸಣ್ಣ ಸಂಶಯದಿಂದ  ಪೊಲೀಸರು ಹಿಡಿದಿದ್ದೇಗೆ ಗೊತ್ತಾ? ಸಖತ್ ಇಂಟರ್​ಸ್ಟಿಂಗ್ ಆಗಿದೆ ಸ್ಟೋರಿ

ಶಿವಮೊಗ್ಗದ ತುಂಗಾ ನಗರ ಪೊಲೀಸ್ ಸ್ಟೇಷನ್​ನಲ್ಲಿ (Tunga Nagar Police Station Shivamogga District)ಕಳೆದ ವರ್ಷ  ದಿನಾಂಕಃ-06-05-2022 ರಂದು ಕಂಪ್ಲೇಟ್​ ದರ್ಜ್ ಆಗಿತ್ತು. ಅದರ ಸಾರಾಂಶ ಇಷ್ಟಿತ್ತು.  ಸೂಳೆಬೈಲಿನಲ್ಲಿ  ನಿಲ್ಲಿಸಿದ್ದ ತಮ್ಮ ಟೊಯೋಟಾ ಯಾರಿಸ್ ಕಾರನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಚಂದ್ರುಕುಮಾರ್​ ಎಂಬವರು ನೀಡಿದ್ದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0221/2022  ಕಲಂ 379 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿರುತ್ತದೆ.

ಈಶ್ವರಪ್ಪರಿಗೆ ಸಂಕಷ್ಟ? : ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪರಿಗೆ ಮತ್ತೆ ಸಂಕಷ್ಟ ಎದುರಾಗುತ್ತಾ? ಸಾಕ್ಷ್ಯ ಮಂಡಿಸಲು ಹೇಳಿದ ಕೋರ್ಟ್​?

ಶುರುವಾಗಿತ್ತು ಅನುಮಾನ

ವಿಶೇಷ ಅಂದರೆ, ಪೊಲೀಸ್ ಭಾಷೆಯಲ್ಲಿ ಹೀಗೋಂದು ಕಂಪ್ಲೆಂಟ್ ನಡಿ ದಾಖಲಾದ ಕೇಸ್​ನ ಮೇಲೆ, ಅನುಮಾನವೊಂದು ಪೊಲೀಸರಲ್ಲಿಯೇ ಆರಂಭದಲ್ಲಿಯೇ ಶುರುವಾಗಿತ್ತು. ಆ ಸಣ್ಣ ಸಂಶಯವೇ  ಮುಂದೆ ಕಾರಿನ ಮಾಲೀಕನನ್ನ ಅರೆಸ್ಟ್ ಮಾಡುವಂತೆ ಮಾಡಿತ್ತು. ಆ ಸಂಶಯವೇನು ಅಂತಾ ಹೇಳುತ್ತೇವೆ. ಆದರೆ ಪೊಲೀಸರಿಗೆ ಸಂಶಯ ಬಗೆಹರಿಯಲು ಮೊದಲು ಕಾರು ಪತ್ತೆಯಾಗಬೇಕಿತ್ತು.  ಅದಕ್ಕಾಗಿ ತುಂಗಾನಗರ ಪೊಲೀಸರು, ಕಾರಿನ ನಂಬರ್​ ಟ್ರೇಸ್ ಮಾಡಲು ಆರಂಭಿಸಿದ್ದರು, ಟೊಯೇಟಾ ಯಾರಿಸ್ ಕೆಂಪು ಕಲರ್​ನದ್ದು, ಈ ನಂಬರ್​ನದ್ದು ಎಲ್ಲಾದ್ರೂ ಟ್ರೇಸ್ ಆಗಬಹುದು ಎಂದು ಅರಸಿದ್ದಾರೆ. ಆದರೆ ಈ ಪ್ರಯತ್ನಕ್ಕೆ ಫಲ ಸಿಕ್ಕಿರಲಿಲ್ಲ. ಕಾರಣ ಕಾರಿನ ನಂಬರ್ ಪ್ಲೇಟ್ ಬದಲಾಗಿತ್ತು. 

BREAKING NEWS / ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಕೆಲ ಮಕ್ಕಳ ಆರೋಗ್ಯ ದಲ್ಲಿ ಏರುಪೇರು/ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ/ BEO ಹೇಳಿದ್ದೇನು?

ಸಿಕ್ತು ಒಂದು ಕ್ಲೂ 

ಹೀಗಿರುವಾಗಲೇ ಪೊಲೀಸರಿಗೆ ಕಳುವಾದ ಕಾರಿನ ಬಣ್ಣದ್ದೇ ಒಂದು ಕಾರು ದಾವಣಗೆರೆಯಲ್ಲಿ ಓಡಾಡ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಆ ಕ್ಲೂನ ಬೆನ್ನತ್ತಿದ್ದ ಪೊಲೀಸರಿಗೆ ಅದರ ನಂಬರ್ ಪರಿಶೀಲನೆ ವೇಳೆ ಅದು ಬೇರೆಯ ನಂಬರ್​ ಎಂಬುದು ಗೊತ್ತಾಗಿದೆ. ಇದನ್ನ ತಿಳಿಯುತ್ತಲೇ ಪೊಲೀಸರಿಗೆ ಈ ಹಿಂದೆ ತಮಗೆ ತೋಚಿದ್ದ ಸಣ್ಣ ಸಂಶಯವನ್ನು ಕೆದಕಲು ಆರಂಭಿಸಿದ್ದಾರೆ. ಸೀನ್​ ಕಟ್ ಮಾಡಿದಾಗ ಆರೋಪಿ ಪೊಲೀಸ್ ಠಾಣೆಯ ಸೆಲ್​ನಲ್ಲಿದ್ದ 

ಇದನ್ನು ಸಹ ಓದಿ ಶಿವಮೊಗ್ಗ ಕೋಮುಗಲಭೆಯ ಹಿಂದಿರೋ ತಂಡದ ಹೆಡೆಮುರಿ ಕಟ್ಟಿದ ಎಸ್​ಪಿಮಿಥುನ್​ ಕುಮಾರ್! ಏನಿದು ಕೇಸ್​? JP ಸ್ಟೋರಿ

ಇಷ್ಟಕ್ಕೂ ನಡೆದಿದ್ದು ಏನು? 

ಪ್ರಕರಣದಲ್ಲಿ ಆರೋಪಿ ಕಾರಿನ ಮಾಲೀಕನೇ ಆಗಿದ್ದ. ಈ ಅನುಮಾನ ಪೊಲೀಸರಿಗೆ ಬರೋದಕ್ಕೂ ಕಾರಣವಿತ್ತು. ಅದೇನು ಅಂದರೆ, ಪೊಲೀಸ್ ಮೂಲಗಳಿಗೆ ಒಂದು ವಿಚಾರ ಸ್ಪಷ್ಟವಾಗಿತ್ತು ಟೊಯೇಟಾ ಯಾರಿಸ್ ಕಾರು ಅದರ ಕೀ ಇಲ್ಲದೆ ಸ್ಟಾರ್ಟ್ ಆಗುವುದು ಕಷ್ಟಸಾಧ್ಯ. ಹಾಗಿದ್ರೂ ಕಳುವಾಗಿದೆ. ಮೇಲಾಗಿ ಕೀ ಎಲ್ಲಿತ್ತು ಎಂದು ಕೇಳಿದರೆ ಮಾಲೀಕ, ಕೀ ನನ್ನ ಹತ್ರವೇ ಇದೆ ಅಂದಿದ್ದ. ಇದು ಪೊಲೀಸರಿಗೆ ಮೊದಲ ಸಂಶಯವನ್ನು ಮೂಡಿಸಿತ್ತು. ಆದರೆ ಕಾರು ಪತ್ತೆಯಾಗದೇ ಮಾಲೀಕನ ಮೇಲೆಯೇ ಸಂಶಯ ಪಡುವುದು ಕಷ್ಟವಾಗಿತ್ತು. 

ಶಿವಮೊಗ್ಗ ಜಿಲ್ಲಾ ಮತದಾರರ ಪಟ್ಟಿ ಬಿಡುಗಡೆ, ಯಾವ್ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರಿದ್ದಾರೆ. ಪೂರ್ತಿ ಪಟ್ಟಿ ಇಲ್ಲಿದೆ ಓದಿ

ಹೀಗಾಗಿ ಕಾರನ್ನು ಪತ್ತೆಮಾಡಿದ ಪೊಲೀಸರು ಅಂತಿಮವಾಗಿ ಮಾಲೀಕನನ್ನು ಕರೆದು ವಿಚಾರಿಸಿದ್ದಾರೆ. ಯಾಕಪ್ಪ ತಮ್ಮ ಹೀಂಗ್ ಮಾಡಿದೆ ಎಂದು ಕೇಳಿದ್ದಾರೆ. ಪೊಲೀಸರು ಕೇಳಿದಾಗ ಸತ್ಯವನ್ನೆ ನುಡಿಯಬೇಕಲ್ಲ.. ಹೀಗಾಗಿ ಸತ್ಯ ಬಿಚ್ಚಿಟ್ಟಿದ್ಧಾನೆ. ಕಾರ್ ಮಾಲೀಕ, ಅಂದರೆ, ಕಾರ್​ ಮಾಲೀಕ ಚಂದ್ರು ಎಂಬಾತ, ಕಾರಿನ ಮೇಲಿದ್ದ ಲೋನ್ ಕಟ್ಟಿರಲಿಲ್ಲವಂತೆ.ಹಾಗಾಗಿ ಕಾರಿನ ಇನ್ಶುರೆನ್ಸ್ ಮೂಲಕ ಹಣ ಪಡೆಯಲು ತನ್ನ ಕಾರನ್ನ ಕದ್ದು ತನ್ನ ಸ್ನೇಹಿತನಿಗೆ ನೀಡಿದ್ದ, ದಾವಣಗೆರೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಎಂಬಾತನಿಗೆ ಕಾರು ಕೊಟ್ಟು ಅದರ ನಂಬರ್ ಪ್ಲೇಟ್ ಸಹ ಬದಲಾಯಿಸಿದ್ದನಂತೆ. ಸದ್ಯ ಈ ಸಂಬಂಧ ಆರೋಪಿ1)ಚಂದ್ರುಕುಮಾರ್, 28 ವರ್ಷ, ವಿಧ್ಯಾನಗರ, ಶಿವಮೊಗ್ಗ ಟೌನ್ ಮತ್ತು 2) ಪ್ರಶಾಂತ್ ಜಿ, 29 ವರ್ಷ, ಸರಸ್ವತಿ ನಗರ, ದಾವಣಗೆರೆ ರವರುಗಳನ್ನು ದಸ್ತಗಿರಿ ಮಾಡಿದ್ದಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ