ಎಮ್ಮೆಹಟ್ಟಿಗೆ ಶಿವಣ್ಣ ದಂಪತಿ ಭೇಟಿ | ವಿಧಿಯಾಟಕ್ಕೆ ಬಲಿಯಾದವರ ಕುಟುಂಬಸ್ಥರಿಗೆ 13 ಲಕ್ಷ ಕ್ಯಾಶ್‌ ನೆರವು

Shivarajkumar and his wife Geetha visited Shivamogga to offer condolences to the families of the 13 people who died in a tragic accident near Haveri. They distributed ₹13 lakhs to the families 

ಎಮ್ಮೆಹಟ್ಟಿಗೆ ಶಿವಣ್ಣ ದಂಪತಿ ಭೇಟಿ |  ವಿಧಿಯಾಟಕ್ಕೆ ಬಲಿಯಾದವರ ಕುಟುಂಬಸ್ಥರಿಗೆ 13 ಲಕ್ಷ ಕ್ಯಾಶ್‌ ನೆರವು
Shivarajkumar and his wife Geetha visited Shivamogga to offer condolences to the families of the 13 people who died in a tragic accident near Haveri.

SHIVAMOGGA | MALENADUTODAY NEWS | Jul 8, 2024  ಮಲೆನಾಡು 

ಹಾವೇರಿ ಬಳಿ ಬೀಕರ ಅಪಘಾತ ದಿಂದ 13 ಜನ ಸಾವನ್ನಪ್ಪಿದ್ದರು. ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಇವತ್ತು ಶಿವರಾಜ್‌ ಕುಮಾರ್‌ ದಂಪತಿ ಶಿವಮೊಗ್ಗಕ್ಕೆ ಬಂದಿದ್ದರು. ಭದ್ರಾವತಿ ಎಂಎಲ್‌ಎ ಸಂಗಮೇಶ್‌ ಜೊತೆಗೆ ಬಂದ ಗೀತಾ ಶಿವರಾಜ ಕುಮಾರ್‌ ಹಾಗು ಶಿವಣ್ಣ  ತಲಾ ಒಂದು ಲಕ್ಷ ರೂಪಾಯಿಯಂತೆ 13 ಲಕ್ಷ ರೂಪಾಯಿ ಕ್ಯಾಶ್‌ನ್ನ ಮೃತರ ಕುಟುಂಬಸ್ಥರಿಗೆ ವಿತರಿಸಿದರು. ಅಲ್ಲದೆ ಮೃತರ ಕುಟುಂಬಸ್ಥರನ್ನ ಆಪ್ತವಾಗಿ ಮಾತನಾಡಿ ಸಾಂತ್ವನ ಹೇಳಿದರು. ಹಾಗೂ ಅಪಘಾತದಲ್ಲಿ ಬದುಕುಳಿದ ಗಾಯಾಳು ಅರ್ಪಿತ ಳನ್ನ ಮಾತಾನಾಡಿಸಿ ಧೈರ್ಯ ತುಂಬಿದರು.  

ಇನ್ನೂ ಈ ವೇಳೆ ಮಾತನಾಡ್ತಾ ಶಿವಣ್ಣ ದಂಪತಿ ಹೃದಯ ಶೀಮಂತಿಕೆ ತೋರಿದ್ದಾರೆ, ಈ ಕಾಲದಲ್ಲಿ ಯಾರು ಸಹಾಯ ಮಾಡಲ್ಲ, ಅಂತ್ರದಲ್ಲಿ ಶಿವಣ್ಣ ಮಾಡಿದ್ದಾರೆ. ಅವರ ಹೃದಯ ಶ್ರೀಮಂತಿಕಿಗೆ ಇದು ಸಾಕ್ಷಿ ಎಂದು ಶಾಸಕ ಬಿಕೆ ಸಂಗಮೇಶ್‌ ಹೇಳಿದ್ರು. ಅವರ ಬಳಿಕ ಮಾತನಾಡಿದ ಶಿವಣ್ಣ  ದುರ್ಘಟನೆ ನೋಡಿ ಬರೋಕೆ ಧೈರ್ಯವಾಗಲಿಲ್ಲ. ಇಲ್ಲಿಗೆ ಬರುವ ದೈರ್ಯ ಮಾಡುವುದಕ್ಕೆ ತುಂಬಾನೆ ಕಷ್ಟವಾಗಿತ್ತು. ಕೇವಲ  ಒಂದು ನಿಮಿಷದಲ್ಲಿ 13 ಜನ ಸಾವನಪ್ಪಿದ್ದರು. ಸಾವಿನ ದುಃಖ ತಡೆದುಕೊಳ್ಳಲು ದೇವರು ಆ ಕುಟುಂಬಸ್ಥರಿಗೆ ಶಕ್ತಿ ಕೊಡಲಿ. ಅದರಲ್ಲಿಯು ಮಾನಸರನ್ನ ಕಳೆದುಕೊಂಡಿದ್ದು ತುಂಬಾ ದೊಡ್ಟ ನಷ್ಟವಾಗಿದೆ. ಊರಿನವರ ಜೊತೆಗೆ ಕುಟುಂಬಸ್ಥರಿಗೆ ನೆರವು ನೀಡಲು ಬಂದಿದ್ದೇನೆ.  ನಮ್ಮ ಕೈ ಯಲ್ಲಿ ಆದಷ್ಟು ಸಹಾಯ ಮಾಡಿದ್ದೇವೆ ಎಂದರು.  

ಕುಟುಂಬಸ್ಥರಿಗೆ ಸಮಾಧಾನ ಮಾಡೋದು ಕಷ್ಟ, ಊರಿನ ಗ್ರಾಮಸ್ಥರು ಆ ಕುಟುಂಬದ ಜೊತೆ ನಿಂತಿದ್ದಾರೆ ವಿಶೇಷ ಚೇತನ ಅರ್ಪಿತಾಗೆ ದೇವರು ಶಕ್ತಿ ಕೊಡಲಿ ಎಂದರು.  

Shivarajkumar and his wife Geetha visited Shivamogga to offer condolences to the families of the 13 people who died in a tragic accident near Haveri. They distributed ₹13 lakhs to the families