BIG EXCLUSIVE BY JP | ಸಕ್ರೆಬೈಲ್‌ ಬಿಡಾರದ ಆನೆ ಮೇಲೆ ಕಾಡಾನೆ ದಾಳಿ | ನಡೆದಿದ್ದೇನು?

Wild elephants are posing a threat to the domesticated elephants at the Sakrebailu Elephant Camp.

BIG EXCLUSIVE BY JP | ಸಕ್ರೆಬೈಲ್‌ ಬಿಡಾರದ ಆನೆ ಮೇಲೆ ಕಾಡಾನೆ ದಾಳಿ | ನಡೆದಿದ್ದೇನು?

SHIVAMOGGA | MALENADUTODAY NEWS | Jul 8, 2024  ಮಲೆನಾಡು 

ಬಾಲಣ್ಣ ಕಾಡಾನೆ ಮೇಲೆ ಕಾಡಾನೆ ದಾಳಿ ? ಕಾಡಿನ ದೈನಂದಿನ ಪಥ ಬದಲಿಸಿದ ಮಾವುತ ಕಾವಾಡಿ.. ಕಾಡಾನೆಗಳ ದಾಳಿಯ ಭೀತಿ ಒಂದೆಡೆಯಾದ್ರೆ, ಮಾವುತರಿಗೆ ಸಾಕಾನೆಗಳನ್ನು ರಕ್ಷಿಸಿಕೊಳ್ಳುವುದು ಸವಾಲಾಗಿದೆ – ಜೆಪಿ ಬರೆಯುತ್ತಾರೆ

ಸಕ್ರೆಬೈಲು ಆನೆ ಬಿಡಾರ

ಸಕ್ರೆಬೈಲು ಬಿಡಾರದ ಸಾಕಾನೆಗಳಿಗೆ ಕಾಡಾನೆಗಳ ದಾಳಿ ಬೀತಿ ಎದುರಾಗಿದೆ. ಈಗಾಗಲೇ ಕಳೆದ ನಾಲ್ಕೈದು ವರ್ಷಗಳಲ್ಲಿ ಕಾಡಾನೆಗಳ ದಾಳಿಗೆ ಮಾವುತ ಕಾವಾಡಿಗಳು ಸಿಲುಕಿ ಗಾಯಗೊಂಡಿದ್ದಾರೆ. ಅಲ್ಲದೆ ಕಾಡಾನೆಗಳು ಬಿಡಾರದ ಸಾಕಾನೆಗಳ ಮೇಲೆ ಎರಗಿ ಸಾಯಿಸಿದ ಉದಾಹರಣೆಗಳು ಕಣ್ಣ ಮುಂದೆ ಸಾಕಷ್ಟಿದೆ. ಇಷ್ಟರ ನಡುವೆ ಮೊನ್ನೆ ಬಿಡಾರದ ಬಾಲಣ್ಣ ಎಂಬ ಹೆಸರಿನ ಸಾಕಾನೆ ಮೇಲೆ ಕಾಡಾನೆ ದಾಳಿ ಮಾಡಿದೆ, ಸದ್ಯ ಹೇಗೋ ಬಾಲಣ್ಣನ ಕಾಲಿನ ಸರಪಳಿ ತುಂಡಾಗಿದ್ದರಿಂದ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ಕ್ಯಾಂಪ್ ನತ್ತ ಬಂದಿದೆ. ರಾತ್ರಿ ಬಾಲಣ್ಣನನ್ನು ನೋಡಿದ ಮಾವುತರು ಪುನಃ ಕಾಲಿಗೆ ಬೇಡಿ ಹಾಕಿ ಬಿಟ್ಟಿದ್ದಾರೆ.  

ಸಕ್ರೆಬೈಲ್‌ಗೆ ಕಾಡಾನೆಗಳ ಭೀತಿ

ಭದ್ರಾ ಅಭಯಾರಣ್ಯದಿಂದ ಲಗ್ಗೆ ಇಟ್ಟ ಕಾಡಾನೆಗಳು ಈಗ ಆನೆ ಕ್ರಾಲ್ ಬಳಿಯೇ ಬಂದು ದಾಳಿ ಮಾಡುವಷ್ಟು ಗಟ್ಟಿತನ ತೋರುತ್ತಿವೆ. ಹೀಗಾಗಿ ಕಾಡಿಗೆ ಹೋಗಲು ಹಿಂದೇಟು ಹಾಕುತ್ತಿರುವ ಮಾವುತ ಕಾವಾಡಿಗಳು ಈಗ ದಿನನಿತ್ಯದ ಆನೆ ದಾರಿಯನ್ನೇ ಬದಲಿಸಿದ್ದಾರೆ. ನಾಲ್ಕು ದಿಕ್ಕುಗಳಿಂದ ಸಾಕಾನೆಗಳನ್ನು ಕಾಡಿಗೆ ಬಿಡಲು ಹೋಗುತ್ತಿದ್ದಾರೆ.

ಆನೆ ಬಿಡಾರದ ಮಾವುತರು.. ಕಾವಾಡಿಗಳು... ಅರಣ್ಯ ಸಿಬ್ಬಂದಿಗಳು ಜೀವದ ಹಂಗುತೊರೆದು ಕೆಲಸ ನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. 

ಶೆಟ್ಟಿಹಳ್ಳಿ ಅಭಯಾರಣ್ಯ

ಶೆಟ್ಟಿಹಳ್ಳಿ ಕಾಡಿನಲ್ಲಿ 15 ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿರುವ ಶಂಕೆಯಿದ್ದು, ಬಿಡಾರದ ಸಾಕಾನೆಗಳು ಹೋಗುವ ಕಾಡಿನ ಹಾದಿಯಲ್ಲಿ ಸುಮಾರು 15 ಹೆಚ್ಚು ಕಾಡಾನೆಗಳಿವೆ. ಈ ಕಾಡಾನೆಗಳು ಅಲ್ಲಲ್ಲಿ ಹಿಂಡಿನ ರೂಪದಲ್ಲಿ ಕಾಣಸಿಗುತ್ತಿವೆ. ಪ್ರತಿದಿನ ಕಾಡಿಗೆ ಹೋಗುವ ಬಿಡಾರದ ಆನೆಗಳಿಗೆ ಮಾವುತರು ಕಾಲಿಗೆ ಸರಪಳಿ ಕಟ್ಟಿ ಆನೆ ವೇಗವನ್ನು ಕುಗ್ಗಿಸುತ್ತಾರೆ. ಹಾಗಿದ್ದ ಸಂದರ್ಭದಲ್ಲಿ ಗುಡ್ಡದ ಮೇಲಿಂದ ಏನಾದ್ರೂ ಕಾಡಾನೆ ಬಿಡಾರದ ಸಾಕಾನೆಗೆ ದಾಳಿ ಮಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. 

ಎದುರಾಳಿಯ ಸಲಗದ ದಂತದ ತಿವಿತಕ್ಕೆ ಸಿಲುಕಿ ಬಿಡಾರದ ದೈತ್ಯ ಆನೆಗಳು ಸಾವನ್ನಪ್ಪಿವೆ ಈಗಾಗಲೇ ಮೂರು ಸಾಕಾನೆಗಳು ಕಾಡಾನೆಗಳ ದಾಳಿಗೆ ಬಲಿಯಾಗಿದೆ.ಅಷ್ಟೆ ಅಲ್ಲದೆ ಮನುಷ್ಯರ ಮೇಲೂ ಎರಗುತ್ತಿವೆ ಕಾಡಾನೆಗಳು..ಕಾಡಿಗೆ ಆನೆ ತರಲು ಹೋದ ಸಂದರ್ಭದಲ್ಲಿ ಮಾವುತರು ಕಾವಾಡಿಗಳು ಕಾಡಾನೆಗಳ ದಾಳಿಯಿಂದ ತಪ್ಪಿಸಿಕೊಂಡು ಬಂದಿದ್ದಾರೆ .ಈ ಹಿಂದೆ DRFO ಶಿವಕುಮಾರ್ ಕಾಡಾನೆಯಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದ ಉದಾಹರಣೆ ಕೂಡ ಕಣ್ಮುಂದೆ ಇದೆ. 

ಶೆಟ್ಟಿ ಹಳ್ಳಿ  ಕಾಡಿನಲ್ಲಿ ಕಾಡಾನೆಗಳಿದ್ದರೆ ಕಾಡುಗಳ್ಳರ ಕಾಟ ತಪ್ಪುತ್ತೆ. ಅಲ್ಲದೆ ಬಿಡಾರದ ಸಂತತಿಗೆ ಅನುಕೂಲವಾಗುತ್ತದೆ ಎಂದು ಅರಣ್ಯಾಧಿಕಾರಿಗಳು ಭಾವಿಸಿದ್ರು. ಸಕ್ರೆಬೈಲು ಬಿಡಾರದ ಸಾಕಾನೆಗಳಿಗೆ ಕಾಡಾನೆಗಳು ಸಂಗಾತಿಗಳಿಂತಿದ್ದರೂ. ಮದಕ್ಕೆ ಬಂದ ಸಂದರ್ಭದಲ್ಲಿ ಮದಗಜಗಳಂತೆ ಕಾಳಗ ನಡೆಸುತ್ತಿರುವುದು ಇಲಾಖೆಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಕಾಡಾನೆಗಳೊಂದಿಗಿನ ಸಂಪರ್ಕದಿಂದ ಬಿಡಾರದ ಹೆಣ್ಣಾನೆಗಳು  ಉತ್ತಮ ತಳಿಯ ಮರಿಯನ್ನು ಪಡೆಯುತ್ತವೆಯಾದ್ರೂ ಅದೇ ಕಾಡಾನೆಗಳ ದಾಳಿಗೆ ದೈತ್ಯ ಸಾಕಾನೆಗಳು ಸಾವನ್ನಪ್ಪುವಂತಾಗಿದೆ.

ಆನೆ ಬಿಡಾರ

ಕಾಡಾನೆ ಸೆರೆಹಿಡಿಯದೆ ಹೋದಲ್ಲಿ ಬಿಡಾರದ ಇನ್ನಷ್ಟು ಸಾಕಾನೆಗಳು ಕಾಡಾನೆ ದಾಳಿಗೆ ಬಲಿಯಾಗಲಿದೆ. ಏಕೆಂದರೆ ಪ್ರತಿದಿನ ಬಿಡಾರದ ಆನೆಗಳನ್ನು ಕಾಡಿಗೆ ಬಿಡುವಾಗ ಕಾಲಿಗೆ ಸರಪಳಿ ಹಾಕಲಾಗುತ್ತೆ. ಅಲ್ಲದೆ ಗಂಡಾನೆಗಳ ಮುಂದಿನ ದಂತವನ್ನು ನಿಯಮದಂತೆ ಟ್ರಿಮ್ ಮಾಡಲಾಗಿರುತ್ತೆ. ಪರಿಸ್ಥಿತಿ ಹೀಗಿರುವಾಗ ಬಲವಾದ ದಂತವನ್ನು ಹೊಂದಿರುವ ದೈತ್ಯ ಕಾಡಾನೆಗಳು ದಾಳಿ ಮಾಡಿದಾಗ ಬಿಡಾರದ ಆನೆಗಳು ಪ್ರತಿರೋಧ ಒಡ್ಡದೆ ಅಸಹಾಯಕವಾಗಿ ಬಿಡುತ್ತವೆ. ಅತ್ತ ಜೋರಾಗಿ ಓಡಲು ಆಗದೆ. ಇತ್ತ ಬಲವಾಗಿ ತಿವಿಯಲು ಸಾಧ್ಯವಿಲ್ಲದೆ. ಕಾಡಾನೆಗಳ ದಾಳಿಗೆ ಅನಾಯಾಸವಾಗಿ ಬಲಿಯಾಗಿ ಬಿಡುತ್ತವೆ. ರಾಜೇಂದ್ರ ಕಾವೇರಿ ನ್ಯೂ ಟಸ್ಕರ್ ಸಾವಿಗೆ ಕಾರಣವಾಗಿದ್ದು..ಕಾಲಿಗೆ ಕಟ್ಟಿದ ಸರಪಳಿಯೇ ಆಗಿತ್ತು...ಹೀಗಾಗಿ ಕಾಡಾನೆಗಳನ್ನು ಸೆರೆ ಹಿಡಿಯದೆ ವಿಧಿಯಿಲ್ಲ 

ಬಿಡಾರದ ಆನೆಗಳ ಸ್ವಚ್ಚಂದ ವಿಹಾರಕ್ಕೆ...ಆಹಾರಕ್ಕೆ ತಾಣವಾಗಿರುವ ಶೆಟ್ಟಿಹಳ್ಳಿ ಕಾಡು,ಸಾಕಾನೆಗಳ ಪಾಲಿಗೆ ಮೃತ್ಯೂಕೂಪವಾಗಬಾರದು,ಆನೆಗಳ ಜೀವನ ನಿರ್ವಹಣೆಗೆ ಬೇಕಾದ ನೀರು ಆಹಾರದ ಎಲ್ಲಾ ವ್ಯವಸ್ಥೆಯಿರುವ ಶೆಟ್ಟಿಹಳ್ಳಿ ಕಾಡು ಕಾಡಾನೆಗಳಿಂದ ದೊಡ್ಡ ಸಂಚಕಾರ ಎದುರಿಸುವುದಕ್ಕಿಂತ ಸಾಕಾನೆಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. 

Wild elephants are posing a threat to the domesticated elephants at the Sakrebailu Elephant Camp. I