ಊರು ಬಿಟ್ಟು ಬಂದ ಮೇಲೂ ಊರಿನ ಮಕ್ಕಳ ಶಿಕ್ಷಣ ಮರೆಯದ ಉದ್ಯಮಿ/ 17 ವರ್ಷಗಳಿಂದ ಪುಸ್ತಕ ವಿತರಣೆ

ಇವತ್ತು ಶಿವಮೊಗ್ಗ ತಾಲ್ಲೂಕಿನ ಕುಂಸಿಯ ಸರ್ಕಾರಿ ಶಾಲೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.ಸುತ್ತಮುತ್ತಲಿನ ಹಳ್ಳಿಗಳ ಶಾಲೆಗಳ ಮಕ್ಕಳು ಸಾವಿರಾರು ಸಂಖೆಯಲ್ಲಿ ಅಲ್ಲಿ ಜಮಾಯಿಸಿದ್ದರು...ಎಲ್ಲಾ ಮಕ್ಕಳಿಗೂ ಅಲ್ಲಿ ಉಚಿತವಾಗಿ ಪುಸ್ತಕನ್ನು ವಿತರಿಸಲಾಯಿತು

ಊರು ಬಿಟ್ಟು ಬಂದ ಮೇಲೂ ಊರಿನ ಮಕ್ಕಳ ಶಿಕ್ಷಣ ಮರೆಯದ ಉದ್ಯಮಿ/ 17 ವರ್ಷಗಳಿಂದ ಪುಸ್ತಕ ವಿತರಣೆ

.ಬಡವ ಶ್ರೀಮಂತ ಎಂಬ ಭೇದವಿಲ್ಲದೆ...ಸರ್ಕಾರಿ ಶಾಲೆಗಳ ಎಲ್ಲಾ ಮಕ್ಕಳಿಗೂ ವರ್ಷಪೂರ್ತಿ ಸಾಕಾಗುವಷ್ಟು ಪುಸ್ತಕ,ಮತ್ತು ಸಾಮಾಗ್ರಿಯನ್ನು ವಿತರಿಸಿ ಸಾರ್ಥಕತೆ ಮೆರೆದಿದ್ದ ಆ ಅವಿದ್ಯಾವಂತ ಯುವಕ. ಅಂದು ಬಡತನದಿಂದ ಬೇಸೆತ್ತು ಓದಿಗೆ ಗುಡ್ ಬೈ ಹೇಳಿದ ಯುವಕ..ಇಂದು ಗ್ರಾಮದ ಯಾವೊಬ್ಬ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಎಲ್ಲರಿಗೂ ಉಚಿತವಾಗಿ ಪುಸ್ತಕ ನೀಡುತ್ತಿದ್ದಾನೆ. 

BREAKING NEWS / ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಕೆಲ ಮಕ್ಕಳ ಆರೋಗ್ಯ ದಲ್ಲಿ ಏರುಪೇರು/ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ/ BEO ಹೇಳಿದ್ದೇನು?

ಅಂದು ಓದಿಗೆ ಗುಡ್ ಬೈ ಹೇಳಿದವನು/ ಇಂದು ಮಾಡುತ್ತಿದ್ದಾನೆ ಕ್ರಾಂತಿ.

ಆ ವ್ಯಕ್ತಿಯ  ಹೆಸರು ಆರ್.ಚಂದ್ರು. ಶಿವಮೊಗ್ಗ ತಾಲ್ಲೂಕಿನ ಕುಂಸಿ ಗ್ರಾಮದ ವಾಸಿ. ಚಂದ್ರು ಬಾಲ್ಯದಲ್ಲಿದ್ದಾಗ ತುತ್ತು ಅನ್ನಕ್ಕೂ ಪರಿತಪಿಸಬೇಕಾದ ಸ್ಥಿತಿ ಕುಟುಂಬದಲ್ಲಿತ್ತು. ಇನ್ನು ಇವರಿಗೆ ಓದು ಎನ್ನುವುದು ಮರಿಚಿಕೆಯಾಗಿತ್ತು. ಹೀಗಾಗಿ ಚಂದ್ರು ನಾಲ್ಕನೇ ತರಗತಿಯಲ್ಲೇ ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳಿ ಸಣ್ಣ ವಯಸ್ಸಿನಲ್ಲಿಯೇ ಬೆಂಗಳೂರು ಸೇರಿಕೊಂಡಿದ್ದ. ಬಾಲ್ಯದಿಂದಲೇ ಬೆಂಗಳೂರಿನಲ್ಲಿ ಕಷ್ಟು ಪಟ್ಟು ದುಡಿಯಲು ಆರಂಭಿಸಿದ ಚಂದ್ರು ಇದೀಗ ಆರ್ಥಿಕವಾಗಿ ಸದೃಢರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ತಾವು ಬಾಲ್ಯದಲ್ಲಿ ಅನುಭವಿಸಿದ ನೋವನ್ನು ತಮ್ಮ ಗ್ರಾಮದ ಯಾವೊಬ್ಬ ವಿದ್ಯಾರ್ಥಿಯೂ ಕೂಡ ಅನುಭವಿಸಬಾರದೆಂಬ ಉದ್ದೇಶದಿಂದ, ಚಂದ್ರು ತಾನು ಹುಟ್ಟಿ ಬೆಳೆದ ಕುಂಸಿ ಗ್ರಾಮದ ಹೋಬಳಿ ವ್ಯಾಪ್ತಿಯ ಎಲ್ಲಾ  ಶಾಲೆಯ ಮಕ್ಕಳಿಗೆ ಉಚಿತವಾಗಿ ಪುಸ್ತಕವಾಗಿ ನೀಡುತ್ತಾ ಬಂದಿದ್ದಾರೆ.

ಇದನ್ನು ಸಹ ಓದಿ ಶಿವಮೊಗ್ಗ ಕೋಮುಗಲಭೆಯ ಹಿಂದಿರೋ ತಂಡದ ಹೆಡೆಮುರಿ ಕಟ್ಟಿದ ಎಸ್​ಪಿಮಿಥುನ್​ ಕುಮಾರ್! ಏನಿದು ಕೇಸ್​? JP ಸ್ಟೋರಿ

17 ವರ್ಷಗಳಿಂದ ಶಿಕ್ಷಣ ಸೇವೆ

ಕಳೆದ 17 ವರ್ಷಗಳಿಂದ ಈ ಸೇವೆ ಮಾಡುತ್ತಿರುವ ಚಂದ್ರು ಕುಂಸಿ ಹೋಬಳಿ ಸುತ್ತಮುತ್ತವಿರುವ  ಶಾಲೆಗಳ ಸುಮಾರು ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ,ಪೆನ್ನು,ಪೆನ್ನಿಲ್,ರಬ್ಬರ್,ಕಾಂಪೋಸ್ ಬಾಕ್ಸ್ ಸೇರಿದಂತೆ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಪಠ್ಯೋಪಕರಣಗಳನ್ನು ನೀಡುತ್ತಾ ಬಂದಿದ್ದಾರೆ. ಇದರಿಂದಾಗಿ ಕುಂಸಿ ಹೋಬಳಿಯ ಬಡ ಮಕ್ಕಳಿಗೆ ಅನುಕೂಲವಾಗಲಿದ್ದು, ಎಲ್ಲಾ ಮಕ್ಕಳು ಕೂಡ ವಿದ್ಯಾವಂತರಾಗುತ್ತಾರೆ ಎಂಬ ಉದ್ದೇಶ ಚಂದ್ರು ಅವರದ್ದಾಗಿದೆ. ತಮ್ಮ ಕೈಲಾಗುವವರೆಗೂ ನಿರಂತವಾಗಿ ಪುಸ್ತಕಗಳನ್ನು ಮಕ್ಕಳಿಗೆ ಉಚಿತವಾಗಿ ನೀಡುವ ಇಂಗಿತವನ್ನು ಚಂದ್ರು ಹಾಗೂ ಅವರ ಸಹೋದರ ಹುಲಿಗಪ್ಪ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಮತದಾರರ ಪಟ್ಟಿ ಬಿಡುಗಡೆ, ಯಾವ್ಯಾವ ಕ್ಷೇತ್ರದಲ್ಲಿ ಎಷ್ಟು ಮತದಾರರಿದ್ದಾರೆ. ಪೂರ್ತಿ ಪಟ್ಟಿ ಇಲ್ಲಿದೆ ಓದಿ

ಕುಂಸಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಆರ್.ಚಂದ್ರು ಅವರ ಅನುಪಸ್ಥಿತಿಯಲ್ಲಿ ಅವರ ಕುಟುಂಬದವರು ಶಾಲಾ ಮಕ್ಕಳಿಗೆ ನೋಟ್ ಬುಕ್ ನೀಡುವ ಮೂಲಕ, ವಿತರಣಾ ಕಾರ್ಯಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಾರದಾ ರಂಗನಾಥ್ ಅವರು ಮಾತನಾಡಿ, ಆರ್. ಚಂದ್ರು ಅವರು ತಾವು ಹುಟ್ಟಿ ಬೆಳೆದ ಹಳ್ಳಿಯ ಮಕ್ಕಳಿಗೆ ಪ್ರತಿ ವರ್ಷ ನೋಟ್ ಬುಕ್ ವಿತರಣೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.

ಶಿವಮೊಗ್ಗದ ಹೋಟೆಲ್ ಉದ್ಯಮಿ ಹಾಗೂ ಆರ್. ಚಂದ್ರು ಅವರ ಸ್ನೇಹಿತ ಎನ್.ರಾಜೇಂದ್ರ ಅವರು ಮಾತನಾಡಿ, ಮೂಲತಃ ಕುಂಸಿ ಗ್ರಾಮದವರಾದ ಆರ್.ಚಂದ್ರು ಅವರು ಕಳೆದ 17 ವರ್ಷಗಳಿಂದ ಕುಂಸಿ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಿಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ವರ್ಷ ಕೂಡ ನೋಟ್ ಬುಕ್ ವಿತರಣೆ ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ ಎಂದು ಹೇಳಿದರು. ಆರ್.ಚಂದ್ರು ಸಹೋದರ ಹುಲಿಗೆಪ್ಪ ಅವರು ಮಾತನಾಡಿ, ಕುಂಸಿ ಸುತ್ತಮುತ್ತಲಿನ ಎಲ್ಲ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಮಾಡಲಾಗುವುದು. ಆಯಾ ಶಾಲೆಗಳಿಗೆ ನೋಟ್ ಬುಕ್ ತಲುಪಿಸುವ ಕಾರ್ಯ ನಡೆಸಲಾಗುವುದು ಎಂದು ತಿಳಿಸಿದರು.

ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪರಿಗೆ ಮತ್ತೆ ಸಂಕಷ್ಟ ಎದುರಾಗುತ್ತಾ? ಸಾಕ್ಷ್ಯ ಮಂಡಿಸಲು ಹೇಳಿದ ಕೋರ್ಟ್​?

ಸಮಾರಂಭದಲ್ಲಿ ಹುಲಿಗೆಪ್ಪ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕುಂಸಿ ಗ್ರಾಪಂ ಉಪಾಧ್ಯಕ್ಷೆ ರೂಪ ಪ್ರಭಾಕರ್, ಯುವ ಮುಖಂಡ ಪ್ರದೀಪ್, ಉದ್ಯಮಿ ರಾಘವೇಂದ್ರ, ಶಿಕ್ಷಕರ ಸಂಘದ ಜಯಣ್ಣ ಸೇರಿದಂತೆ ಮೊದಲಾದವರಿದ್ದರುಪುಸ್ತಕಗಳನ್ನು ಖುಷಿಯಾಗಿ ಸ್ವೀಕರಿಸಿದ ಮಕ್ಕಳು ಸರ್ಕಾರ ತಮಗೆ ಓದಲು ಪುಸ್ತಕಗಳನ್ನು ಮಾತ್ರ ನೀಡುತ್ತಿದೆ. ಆದರೆ ಬಡ ಮಕ್ಕಳಿಗೆ ಬರೆಯಲು ಪುಸ್ತಕ ಪೆನ್ನುಗಳೇ ಇಲ್ಲ, ಆದರೆ ಚಂದ್ರು ಅವರು ಕುಂಸಿ ಹೋಬಳಿಯ ಸರ್ಕಾರಿ ಶಾಲೆಗಳಲ್ಲಿ ನೋಟು ಪುಸ್ತಕಗಳನ್ನು ನೀಡುತ್ತಿದ್ದು ಓದುವ ಮಕ್ಕಳಿಗೆ ಬರವಣಿಗೆಗೆ ಬೇಕಾರ ಎಲ್ಲಾ ವಸ್ತುಗಳನ್ನು ನೀಡಿದ್ದಾರೆ.ಇದು ಶಾಲಾ ಮಕ್ಕಳಲ್ಲಿ ಸಂತಸ ಮೂಡಿಸಿದೆ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ