BREAKING NEWS / ಲೋಕಾಯುಕ್ತ ರೇಡ್​, ಫೋನ್​ ಕಾಲ್​ನಲ್ಲಿ ಲಂಚ ಕೇಳಿ ಟ್ರ್ಯಾಪ್​ ಆದ ಅಧಿಕಾರಿ! ನಡೆದಿದ್ದೇನು ಓದಿ

BREAKING NEWS/Lokayukta raid, officer trapped for asking for bribe on phone call! Read what happened

BREAKING NEWS / ಲೋಕಾಯುಕ್ತ ರೇಡ್​,  ಫೋನ್​ ಕಾಲ್​ನಲ್ಲಿ ಲಂಚ ಕೇಳಿ ಟ್ರ್ಯಾಪ್​ ಆದ ಅಧಿಕಾರಿ! ನಡೆದಿದ್ದೇನು ಓದಿ
BREAKING NEWS / ಲೋಕಾಯುಕ್ತ ರೇಡ್​, ಫೋನ್​ ಕಾಲ್​ನಲ್ಲಿ ಲಂಚ ಕೇಳಿ ಟ್ರ್ಯಾಪ್​ ಆದ ಅಧಿಕಾರಿ! ನಡೆದಿದ್ದೇನು ಓದಿ

MALENADUTODAY.COM/ SHIVAMOGGA / KARNATAKA WEB NEWS  

ಕರ್ನಾಟಕ ಲೋಕಾಯುಕ್ತ / ಶಿವಮೊಗ್ಗದಲ್ಲಿ ನಿನ್ನೆ ಮತ್ತೆ ಲೋಕಾಯುಕ್ತ ಅಧಿಕಾರಿಗಳು  ಟ್ರ್ಯಾಪ್​ ಕಾರ್ಯಾಚರಣೆ ನಡೆಸಿದ್ದಾರೆ. ಇತ್ತೀಚೆಗೆಷ್ಟೆ ಶಿವಮೊಗ್ಗ ಮಹಾ ನಗರ ಪಾಲಿಕೆಯ  ಕಂದಾಯ ನಿರೀಕ್ಷಕ ನನ್ನ ಲಂಚ ಪ್ರಕರಣದಲ್ಲಿ ಟ್ರ್ಯಾಪ್ ಮಾಡಿದ್ದ ಲೋಕಾಯುಕ್ತ  ಪೊಲೀಸರು ನಿನ್ನೆ  ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮ್ಯಾನೇಜರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Read / #siddaramaiah #rcbfan ಸಿದ್ದರಾಮಯ್ಯ/ ಮ್ಯಾಚ್​ ನೋಡಿ ಬಂದ ವಿಪಕ್ಷ ನಾಯಕ ಈ ಸಲ ಕಪ್​ ಯಾರದ್ದು ಅಂದ್ರು ನೋಡಿ!

ನಡೆದಿದ್ದೇನು?

43 ವರ್ಷದ ಟ್ಯಾಕ್ಸಿ ಚಾಲಕ, ಗಂಗಾಧರ್​ ಎಂಬವರು ಲೋಕಾಯುಕ್ತ ಪೊಲೀಸರಿಗೆ ದೂರೊಂದನ್ನ ನೀಡಿದ್ದರು.  2022-23 ನೇ ಸಾಲಿನಲ್ಲಿ ಟೂರಿಸ್ಟ್ ಟ್ಯಾಕ್ಸಿ  (tourist takxi)ಯೋಜನೆ ಅಡಿಯಲ್ಲಿ ಕಾರು ಲೋನ್ ಪಡೆಯಲು ಕರ್ನಾಟಕ ಒಕ್ಕಲಿಗರ ಸಮುದಾಯ ಅಭಿವೃದ್ಧಿ ನಿಗಮ(ನಿ) ಶಿವಮೊಗ್ಗಕ್ಕೆ ಅರ್ಜಿ ಸಲ್ಲಿಸಿದ್ದರಂತೆ

ಅಲ್ಲದೆ ಕಳೆದ ದಿನಾಂಕ:16-03-2023 ರಂದು  ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ 3,00,000/-ರೂ ಸಾಲದ ಮಂಜೂರಾತಿ ಪತ್ರವನ್ನು ಸಹ ಪಡೆದುಕೊಂಡಿದ್ದರಂತೆ. 

Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!

ಲಂಚಕ್ಕೆ ಬೇಡಿಕೆ

ಈ ಮಧ್ಯೆ  ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ (ನಿ) ಶಿವಮೊಗ್ಗದ ಜಿಲ್ಲಾ ವ್ಯವಸ್ಥಾಪಕರು ಸರ್ಕಾರದಿಂದ ಬಿಡುಗಡೆಯಾದ  ಸಹಾಯಧನದ ಮಂಜೂರಾತಿ ಪತ್ರವನ್ನು ಬ್ಯಾಂಕ್‌ಗೆ ಪತ್ರವನ್ನು ಕಳುಹಿಸಲು 5000/- ರೂಗಳನ್ನು ಕೋಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಇದೇ ಕಾರಣಕ್ಕೆ ಗಂಗಾಧರ್​​ ಲೋಕಾಯುಕ್ತರಿಗೆ ದೂರು ನೀಡಿದ್ದರು. ಅಲ್ಲದೆ ಈ ವೇಳೆ ಅಧಿಕಾರಿ ಅಜ್ಯಪ್ಪರೊಂದಿಗೆ ಮಾತನಾಡಿದ ಫೋನ್ ರೆಕಾರ್ಡಿಂಗ್​ನ್ನ ಸಹ ಲೋಕಾಯುಕ್ತರಿಗೆ ಸಲ್ಲಿಸಿದ್ದರು.

Read / Shivamogga police /  ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ ಸೀಜ್​ 

ಟ್ರ್ಯಾಪ್ ಆದ ಅಧಿಕಾರಿ

ಈ ಹಿನ್ನೆಲೆ ಲೋಕಾಯುಕ್ತ ಪೊಲೀಸ್(lokayuktha police) ದಿನಾಂಕ:18-04-2023 ರಂದು ಬೆಳಗ್ಗೆ 9-00 ಗಂಟೆಗೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ ಸಂಖ್ಯೆ :03/2023, ಕಲಂ.7(a) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988, (ತಿದ್ದುಪಡಿ ಕಾಯಿದೆ-2018) - ಪ್ರಕಾರ ಪ್ರಕರಣವನ್ನು ನೋಂದಾಯಿಸಿಕೊಂಡು ಕಾರ್ಯಾಚರಣೆ ಆರಂಭಿಸಿತ್ತು.ಈ ಟ್ರ್ಯಾಪ್​​ನಲ್ಲಿ ಗಂಗಾಧರ್​ ರಿಂದ 5 ಸಾವಿರ ರೂಪಾಯಿ ಲಂಚವನ್ನ ಪಡೆಯುತ್ತಲೇ  ಅಜ್ಯಪ್ಪ ತಮ್ಮ ಛೇಂಬರ್​ನಲ್ಲಿಯೇ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.  

Read / ಪತ್ನಿಗೆ ಸಾಲ, ಅಣ್ಣನಿಂದ ಲೋನ್/ ಸ್ವಂತ ಕಾರು ಹೊಂದಿಲ್ಲದ ಬಿ.ವೈ.ವಿಜಯೇಂದ್ರರ ಆಸ್ತಿ ಎಷ್ಟು ಗೊತ್ತಾ? 

ಆರೋಪಿ ಬಂಧನ 

ಸದ್ಯ ಅಧಿಕಾರಿಯನ್ನು ಬಂಧಿಸಿ ಮುಂದಿನ ತನಿಖೆಯನ್ನು  ಪೊಲೀಸ್ ನಿರೀಕ್ಷಕರು, ಕಲೋ,   ಹೆಚ್. ರಾಧಾಕೃಷ್ಣ  ಮುಂದುವರಿಸಿದ್ಧಾರೆ.  ಈ ಕಾರ್ಯಾಚರಣೆಯಲ್ಲಿ ಕರ್ನಾಟಕ ಲೋಕಾಯುಕ್ತ ಚಿತ್ರದುರ್ಗ ಕಛೇರಿ ಪೊಲೀಸ್‌ ಅಧೀಕ್ಷಕರಾದ ಎಸ್. ವಾಸುದೇವರಾಮ ಮತ್ತು ಉಮೇಶ ಈಶ್ವರ ನಾಯ್ಕ ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ. ಇವರ ಮಾರ್ಗದರ್ಶನದಲ್ಲಿ ಪ್ರಕರಣವನ್ನು ದಾಖಲಿಸಿ ಅಪಾಧಿತನನ್ನು ಬಂಧಿಸಲಾಗಿರುತ್ತದೆ. ಟ್ರ್ಯಾಪ್ ಕಾಲಕ್ಕೆ ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ಸಿಬ್ಬಂದಿಗಳಾದ ಬಿ. ಲೋಕೇಶಪ್ಪ ಸಿ.ಹಚ್‌.ಸಿ. ವಿ.ಎ ಮಹಂತೇಶ ಸಿ.ಹೆಚ್.ಸಿ, ಪ್ರಶಾಂತ್ ಕುಮಾರ್ ಸಿ.ಪಿ.ಸಿ ಚನ್ನೇಶ, ಸಿ.ಪಿ.ಸಿ. ರಘುನಾಯ್ಕ ಸಿ.ಪಿ.ಸಿ ಸುರೇಂದ್ರ ಸಿ.ಪಿ.ಸಿ, ಅರುಣ್ ಕುಮಾರ್ ಸಿ.ಪಿ.ಸಿ, ದೇವರಾಜ್, ಸಿ.ಪಿ.ಸಿ, ಪುಟ್ಟಮ್ಮ ಮ.ಪಿ.ಸಿ, ಸಾವಿತ್ರಮ್ಮ, ಮ.ಪಿ.ಸಿ.ಗಂಗಾಧರ ಎ.ಪಿ.ಸಿ, ಪ್ರದೀಪ್, ಎ.ಪಿ.ಸಿತರುಣ್ ಕುಮಾರ್ ಎ.ಪಿ.ಸಿ. ಜಯಂತ್, ಎ.ಪಿ.ಸಿ, ಗೋಪಿ, ವಿ. ಎ.ಪಿ.ಸಿ ಇವರುಗಳು ಹಾಜರಿದ್ದರು.

ಇದನ್ನು ಸಹ ಓದಿ

Read /BREAKING /  ಅಭ್ಯರ್ಥಿ ಕುತೂಹಲದ ನಡುವೆ ಶಿವಮೊಗ್ಗ ಕ್ಕೆ ಬಂದ ಬಿಎಸ್​ವೈ !   ಘೋಷಣೆಯಾಗುತ್ತಾ ಹೆಸರು!  ಹೆಲಿಪ್ಯಾಡ್​ಗೆ  ನೀತಿ ಸಂಹಿತೆಯ ಅಧಿಕಾರಿಗಳ  ಎಂಟ್ರಿ! ಕಾರಣ? 

Read /election interesting news/ ಜೋಡೆತ್ತಿನ ಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ

Read / Shivamogga police /  ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಡ್ಡೆ ಮೇಲೆ ಶಿವಮೊಗ್ಗ ಪೊಲೀಸರ ರೇಡ್ ! ಹೊಸಮನೆ ಸತೀಶ್​ ಸೇರಿ ಮೂವರ ಅರೆಸ್ಟ್​! 25 ಲಕ್ಷ ರೂಪಾಯಿ ಸೀಜ್​ 

Read / Karnataka election/  ಸೊರಬದಲ್ಲಿ  ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್​ ಆದ್ಮಿಯವರ ಆಸ್ತಿಯೆಷ್ಟು!



Read / ಶಿವಮೊಗ್ಗ ಬಿಜೆಪಿ ಟಿಕೆಟ್​! ಬರ್ತಿದೆ...ಬರ್ತಿದೆ..ಬರ್ತಿದೆ! ರೋಚಕ ಟ್ವಿಸ್ಟ್​ ಗೆ ಸಾಕ್ಷಿಯಾಗುತ್ತಾ ಕ್ಷೇತ್ರ! ಜೆಡಿಎಸ್​ ಟಿಕೆಟ್​ಗೆ​ ಇಬ್ಬಿಬ್ಬರ ಟವಲ್​! ಬರ್ತಾರಾ ಜೆಪಿ ನಡ್ಡಾ? 

Read / ಪತ್ನಿಗೆ ಸಾಲ, ಅಣ್ಣನಿಂದ ಲೋನ್/ ಸ್ವಂತ ಕಾರು ಹೊಂದಿಲ್ಲದ ಬಿ.ವೈ.ವಿಜಯೇಂದ್ರರ ಆಸ್ತಿ ಎಷ್ಟು ಗೊತ್ತಾ? 

Read / #siddaramaiah #rcbfan ಸಿದ್ದರಾಮಯ್ಯ/ ಮ್ಯಾಚ್​ ನೋಡಿ ಬಂದ ವಿಪಕ್ಷ ನಾಯಕ ಈ ಸಲ ಕಪ್​ ಯಾರದ್ದು ಅಂದ್ರು ನೋಡಿ!

Read/ Shivamogga bjp ticket/ಶಿವಮೊಗ್ಗ ಬಿಜೆಪಿ ಟಿಕೆಟ್​  ಅವರ್​ ಬಿಟ್ಟು ಇವರ್​ ಬಿಟ್ಟು ಇವರಿಗಾ? ಕತೂಹಲ ಮೂಡಿಸುತ್ತಿದೆ  ಕೆ.ಎಸ್​.ಈಶ್ವರಪ್ಪರವರ ನಡೆ!



ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News  #karnatakaassemblyelection2023  #KarnatakaPolitics #KarnatakaLatestnews #Karanataka #election2023 #karnatakaelections2023 #BJPGovernment #bjpkarnatakanews #bjpvscongress #BYVijayendra #BasavarajBommai #Lakshmansavadi #JagadishShettar #Modi #AmitShah #JPNadda