ಜಮೀನಿನಲ್ಲಿ ಬೋರ್‌ ಕೊರೆಸುತ್ತಿರುವ ಸಂದರ್ಭದಲ್ಲಿಯೇ ನಡೆಯಿತು ಅನಾಹುತ! ಸ್ಥಳದಲ್ಲಿಯೇ ಛತ್ತೀಸ್‌ಗಢದ ನಿವಾಸಿ ಸಾವು!

Chhattisgarh resident dies after being hit by pipe lorry while drilling borewell in field

ಜಮೀನಿನಲ್ಲಿ ಬೋರ್‌ ಕೊರೆಸುತ್ತಿರುವ ಸಂದರ್ಭದಲ್ಲಿಯೇ ನಡೆಯಿತು ಅನಾಹುತ! ಸ್ಥಳದಲ್ಲಿಯೇ ಛತ್ತೀಸ್‌ಗಢದ ನಿವಾಸಿ ಸಾವು!
Chhattisgarh resident

Shivamogga  Mar 28, 2024  Chhattisgarh resident ಜಮೀನೀನಲ್ಲಿ ಬೋರ್‌ ಕೊರೆಸುತ್ತಿದ್ದ ಸಂದರ್ಭದಲ್ಲಿ ಅನಾಹುತವೊಂದು ನಡೆದು ಓರ್ವ ಸಾವನ್ನಪ್ಪಿದ ಘಟನೆ ಬಗ್ಗೆ ಕುಂಸಿ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ನಲ್ಲಿ ನಡೆದಿದೆ. ಘಟನೆಯಲ್ಲಿ ಛತ್ತೀಸ್‌ಗಢದ ನಿವಾಸಿಯೊಬ್ಬ ಸಾವನ್ನಪ್ಪಿದ್ದಾನೆ. 

ಘಟನೆ ವಿವರ 

ಕುಂಸಿ ಸಮೀಪದ ಬಾಳೆಕೊಪ್ಪದಲ್ಲಿ ಘಟನೆ ನಡೆದಿದೆ. ಇಲ್ಲಿನ ಸ್ತಳೀಯ ನಿವಾಸಿಯೊಬ್ಬರು ತಮ್ಮ ಜಮೀನಿನಲ್ಲಿ ಬೋರ್‌ ಪಾಯಿಂಟ್‌ ಕೊರೆಸಲು ಬೋರ್‌ ಮಷಿನ್‌ ತರಿಸಿದ್ದರು. ಬೋರ್‌ವೆಲ್‌ ಏಜೆಂಟ್‌ ಮೂಲಕ ಬೋರ್‌  ಕೊರೆಸುವ ಡೀಲರ್‌ಗಳನ್ನ ಸಂಪರ್ಕಿಸಿ ಕಳೆದ 26 ನೇ ತಾರೀಖು ಹೊದಲ್ಲಿ ಬೋರ್‌ ಕೊರೆಸುವ ಕಾರ್ಯ ಕೈಗೊಂಡಿದ್ದರು. 

ಇತ್ತ ಬೋರ್‌ ಕೊರೆಯುವ ಸಂದರ್ಭದಲ್ಲಿ ಬೋರ್‌ ಪೈಪ್‌ಗಳನ್ನು ತುಂಬಿಕೊಂಡು ಬಂದಿದ್ದ ಲಾರಿಯಡಿಯಲ್ಲಿ ಕಾರ್ಮಿಕನೊಬ್ಬ ಕೆಲಸ ಮಾಡುತ್ತಿದ್ದ. ಇದೇ ವೇಳೆ ಪೈಪ್‌ ತುಂಬಿದ್ದ ಲಾರಿಯನ್ನು ಚಾಲಕ ಮುಂದಕ್ಕೆ ಚಲಾಯಿಸಿದ್ದಾನೆ. ಪರಿಣಾಮ ಲಾರಿಯಡಿಯಲ್ಲಿದ್ದ ಕಾರ್ಮಿಕ ಚಕ್ರದಡಿ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. 

ಮೃತನನ್ನ  ಲಕ್ಷ್ಮಣನ್‌ Kokiyar village,Pathhalakhan talluk Jashpur Chhattisgarh ನಿವಾಸಿ ಎಂದು ತಿಳಿದುಬಂದಿದೆ. ಈ ಸಂಬಂಧ ಜಮೀನಿನ ಮಾಲೀಕ ನೀಡಿದ ದೂರಿನನ್ವಯ ಕುಂಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.