SHIVAMOGGA NEWS TODAY

ಸೊಸೆಗೆ ಕಿರುಕುಳ ನೀಡಿ ಸಾವಿಗೆ ಕಾರಣರಾದ ಪತಿ ಸೇರಿ ಐವರಿಗೆ  ಕೋರ್ಟ್​ ಕೊಟ್ಟ ಶಿಕ್ಷೆ ಏನು ಗೊತ್ತಾ.?

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಭದ್ರಾವತಿ | ಮದುವೆಯಾದ ನಂತರ ಸಣ್ಣಪುಟ್ಟ ವಿಚಾರಗಳಿಗೂ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ, ಮಹಿಳೆಯೊಬ್ಬರ ಆತ್ಮಹತ್ಯೆಗೆ ಪ್ರೇರೇಪಿಸಿದ ಪ್ರಕರಣದಲ್ಲಿ ಪತಿ ಹಾಗೂ ಆತನ ಕುಟುಂಬದ ಐವರು ಸದಸ್ಯರಿಗೆ ಭದ್ರಾವತಿಯ  ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

Bhadravati Court ಆದೇಶದಲ್ಲಿ ಏನಿದೆ

ಪ್ರೇಮಾ ಎಂಬುವವರು ಮದುವೆಯಾದ ಬಳಿಕ ಪತಿ ಮತ್ತು ಆತನ ಮನೆಯವರಿಂದ ನಿರಂತರವಾಗಿ ದೌರ್ಜನ್ಯಕ್ಕೊಳಗಾಗಿದ್ದರು. ಅರೋಪಿತರು ಆಕೆಯನ್ನು ತವರು ಮನೆಗೆ ಕಳುಹಿಸಿದ್ದಲ್ಲದೆ, ಮಕ್ಕಳಿಂದಲೂ ದೂರ ಮಾಡಿದ್ದರು ಎನ್ನಲಾಗಿದೆ. ಪ್ರೇಮಾ ಅವರು ಪತಿ ಮನೆಗೆ ಮರಳಲು ಬಯಸಿದಾಗ, ನೀನು ಇಲ್ಲಿಗೆ ಬರುವುದು ಬೇಡ, ವಿಷ ಕುಡಿದು ಸಾಯಿ ಎಂದು ಅವಮಾನಿಸಿ ಧಮ್ಕಿ ಹಾಕಿದ್ದರು. ಇದರಿಂದ ಮನನೊಂದ ಪ್ರೇಮಾ ಅವರು ದಿನಾಂಕ 26-03-2017 ರಂದು ವಿಷ ಸೇವಿಸಿದ್ದರು. ನಂತರ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದರು.

ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 498(ಎ), 306 ಮತ್ತು 149 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾಗಿದ್ದ ಎಎಸ್‌ಐ ನಿಜಾಮ್ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. 

 ಈ ಹಿನ್ನೆಲೆ  4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಸರ್ಕಾರದ ಪರವಾಗಿ ಅಭಿಯೋಜಕಿ ರತ್ನಮ್ಮ ಪಿ. ಅವರು ಪ್ರಬಲ ವಾದ ಮಂಡಿಸಿದ್ದರು. ಆರೋಪಿಗಳ ವಿರುದ್ಧದ ಸಾಕ್ಷ್ಯಾಧಾರಗಳು ದೃಢಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು  ಈ ತೀರ್ಪು ಪ್ರಕಟಿಸಿದರು.

ಶಿಕ್ಷೆಗೊಳಗಾದ ಆರೋಪಿಗಳ ವಿವರ

ಮೋಹನ್ ಆರ್ (ಪತಿ),ಸರೋಜಮ್ಮ (ಅತ್ತೆ), ರಂಗಪ್ಪ (ಮಾವ),ಶೇಖರ್ (ಮೈದುನ), ಎ5 ಮೂರ್ತಿ (ಮೈದುನ)

ಸಂಕ್ಲಿಪುರ ಗ್ರಾಮದ ನಿವಾಸಿಗಳಾದ ಈ ಐವರು ಆರೋಪಿಗಳಿಗೆ ತಲಾ 3 ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ ಮತ್ತು ಒಟ್ಟು 1,50,000 ರೂಪಾಯಿಗಳ ದಂಡ ವಿಧಿಸಲಾಗಿದೆ. ಅಲ್ಲದೆ, ಮೃತ ಪ್ರೇಮಾ ಅವರ ತಾಯಿ ಚಂದ್ರಮ್ಮ ಅವರಿಗೆ ಪರಿಹಾರವಾಗಿ 1,00,000 ರೂಪಾಯಿಗಳನ್ನು ನೀಡುವಂತೆ ನ್ಯಾಯಾಲಯವು ಆದೇಶಿಸಿದೆ.

Bhadravati Court Sentences 5 People to Jail

Bhadravati Court Sentences 5 People to Jail
Bhadravati Court Sentences 5 People to Jail
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.