Shivamogga | Feb 1, 2024 | weather in shivamogga today ಕಾಲದ ಅಣತಿಯಂತೆ ಶಿವಮೊಗ್ಗ ಮಂಜಿನ ಮುಸುಕು ಹೊದ್ದುಕೊಳ್ತಿದೆ. ಸೂರ್ಯನ ಬೆಳಕು ಕಾಣದ ಹಾಗೆ ಚಳಿಗಾಲದ ಮುಸುಕು ಮಲೆನಾಡನ್ನು ಬಿಳಿನಾಡಾಗಿ ಗೋಚರಿಸುವಂತೆ ಮಾಡುತ್ತಿದೆ. ಅದರಲ್ಲಿಯು ಟೂರಿಸ್ಟ್ಗಳು ವೀಕೆಂಡ್ ಪ್ರವಾಸಕ್ಕೆ ಶಿವಮೊಗ್ಗದಲ್ಲಿ ಹವಾಮಾನ ಹೇಗಿದೆ ಎಂದು ಹುಡುಕುತ್ತಿದ್ದಾರೆ.
ಸದ್ಯ ಶಿವಮೊಗ್ಗದಲ್ಲಿ ವಾತಾವರಣ ಸಖತ್ ಕೂಲ್ ಆಗಿದ್ದು, ಮುಂಜಾವಿನಲ್ಲಿ ವಾಹನ ಸಂಚಾರ ತುಸು ಕಷ್ಟವಾಗುತ್ತಿದೆ. ಫಾಗ್ನಿಂದಾಗಿ ಮುಂದಿನ ದಾರಿ ಕಾಣದೇ ವಾಹನ ಸವಾರರು ಹೆಡ್ಲೈಟ್ನೊಂದಿಗೆ ಜಾಗರುಕರಾಗಿ ವಾಹನ ಚಲಾಯಿಸುತ್ತಿದ್ದಾರೆ. ಶಿವಮೊಗ್ಗ ಸಿಟಿಯಲ್ಲಿಯೇ ಹವಾಮಾನ ಕನಿಷ್ಟ 17 ಸೆಲ್ಸಿಯಸ್ಗೆ ಇಳಿದಿದೆ.

ದಿನವಿಡಿ ಬಿಸಿಲು ಝಳವನ್ನು ತಾಕಿಸಿಕೊಳ್ಳುವ ಶಿವಮೊಗ್ಗ ರಾತ್ರಿ ಹಾಗೂ ಮುಂಜಾವಿನಲ್ಲಿ ಮಂಜಿನ ಮುಸುಕಿನಲ್ಲಿ ಕೊರೆಯುವ ಚಳಿಯ ಅನುಭವ ನೀಡುತ್ತಿದೆ. ಆಗುಂಬೆ, ಮಾಸ್ತಿಕಟ್ಟೆ, ಹುಲಿಕಲ್, ನಗರ ಹೀಗೆ ಅರಣ್ಯ ಪ್ರದೇಶಗಳಲ್ಲಿನ ದಾರಿಗಳಲ್ಲಿ ದಾರಿಯೇ ಕಾಣದಷ್ಟು ಮಂಜು ಮುಸುಕಿದೆ.
ಹವಾಮಾನ ಇಲಾಖೆಯ ಮೂಲಗಳ ಪ್ರಕಾರ ಶಿವಮೊಗ್ಗದಲ್ಲಿ ಮುಂದಿನ ಹದಿನೈದು ದಿನಗಳಲ್ಲಿ
(shimoga weather forecast 15 days )ಇದೇ ಹವಾಮಾನ ಮುಂದುವರಿಯಲಿದೆ. ಕನಿಷ್ಟ 18 ಸೆಲ್ಸಿಯಸ್ನವರೆಗೂ ಉಷ್ಣಾಂಶ ಇಳಿಯಲಿದ್ದು ಗರಿಷ್ಟ 29 ಸೆಲ್ಸಿಯಸ್ನವರೆಗೂ ತಲುಪಬಹುದು ಎನ್ನಲಾಗಿದೆ.