ಅಳಿಯನ ಆತ್ಮಹತ್ಯೆ ಬಗ್ಗೆ ಮಾತನಾಡಿದ ಬಿ.ಸಿ ಪಾಟೀಲ್‌ | ಮೆಗ್ಗಾನ್‌ ಶವಾಗಾರದ ಬಳಿ ಬಿಜೆಪಿ ಮುಖಂಡರ ದೌಡು

B C Patil speaks about son-in-law's suicide | BJP leaders rush near Meggan crematorium

ಅಳಿಯನ ಆತ್ಮಹತ್ಯೆ ಬಗ್ಗೆ ಮಾತನಾಡಿದ ಬಿ.ಸಿ ಪಾಟೀಲ್‌ | ಮೆಗ್ಗಾನ್‌ ಶವಾಗಾರದ ಬಳಿ ಬಿಜೆಪಿ ಮುಖಂಡರ ದೌಡು
Former Minister B C Patil son-in-law , ಬಿ ಸಿ ಪಾಟೀಲ್‌ ಅಳಿಯ

SHIVAMOGGA | MALENADUTODAY NEWS | Jul 8, 2024  ಮಲೆನಾಡು 

ಮಾಜಿ ಸಚಿವ ಬಿಸಿ ಪಾಟೀಲ್‌ ರವರ ಅಳಿಯ ಪ್ರತಾಪ್ ಕುಮಾರ ಕೆಜಿ (41) ವಿಷ ಸೇವಿಸಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ವಿಷಕುಡಿದಿದ್ದ ಅವರನ್ನ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ. ಅದ್ಯ ಶವಾಗಾರದಲ್ಲಿ ಅವರ ಮೃತದೇಹ ಇರಿಸಲಾಗಿದೆ. 

ಶಿವಮೊಗ್ಗ ಹರಿಹರ ಹೆದ್ದಾರಿಯಲ್ಲಿ ಅವರ ಕಾರು ನಿಲ್ಲಿಸಿ ವಿಷಸೇವಿಸಿದ್ದಾರೆ ಎಂದು ತಿಳಿದುಬಂದಿದೆ. ದಾವಣಗೆರೆ ಜಿಲ್ಲೆಯ  ಹೊನ್ನಾಳಿ ಆರಣ್ಯ ಪ್ರದೇಶದಲ್ಲಿ ರಸ್ತೆ ಬದಿ ಕಾರಿನಲ್ಲಿ ಅವರು ಪತ್ತೆಯಾಗಿದ್ದಾರೆ. ಮಾಜಿ ಸಚಿವ ಬಿಸಿ ಪಾಟೀಲ್ ರವರ ಮೊದಲನೇ ಪುತ್ರಿಯ ಪತಿ  ಪ್ರತಾಪ್ ಕುಮಾರ್ ರವಾಗಿದ್ದಾರೆ

ಹೊನ್ನಾಳಿ ರಸ್ತೆಯಲ್ಲಿ ಕಾರು ನಿಲ್ಲಿಸಿ ವಿಷಕುಡಿದ ಮಾಜಿ ಸಚಿವ ಬಿಸಿ ಪಾಟೀಲ್‌ರ ಅಳಿಯ | ಮೆಗ್ಗಾನ್‌ ಆಸ್ಪತ್ರೆಗೆ ಶಿಫ್ಟ್‌, ಸಾವು

ಇನ್ನೂ ಈ ಬಗ್ಗೆ ಮಾತನಾಡಿದ ಬಿಸಿ ಪಾಟೀಲ್‌  ಮಧ್ಯಾಹ್ನ 1.45ಕ್ಕೆ ಪ್ರತಾಪ್ ರವರ ಬ್ರದರ್ ಫೋನ್ ಮಾಡಿದ್ರು, ಪ್ರತಾಪ್ ಕಾಣೆಯಾಗಿದ್ದಾರೆ ಅಂಥಾ ತಿಳಿಸಿದ್ರು. ಈ  ವಿಚಾರ ತಿಳಿದು ದಾವಣಗೆರೆ, ಶಿವಮೊಗ್ಗ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದೆ. ಆ ಬಳಿಕ ಅವರ ಲೊಕೆಶನ್ ಪತ್ತೆ ಮಾಡಲು ಟ್ರೈ ಮಾಡದ್ವಿ..ಆದರೆ ಗೊತ್ತಾಗಲಿಲ್ಲ..ಅಷ್ಟರಲ್ಲಿ ಅವರ ಪೋನ್  ಆನ್ ಆಗಿದ್ದು ಗೊತ್ತಾಗಿ ಕರೆ ಮಾಡಿದ್ವಿ..ಹೀಗೆ ಹೊನ್ನಾಳಿ ರಸ್ತೆಯಲ್ಲಿ ಇದ್ದೇನೆ ಎಂಸರು..ಅಷ್ಟರಲ್ಲಿ ಅವರ ಬ್ರದರ್ ಪ್ರತಾಪ್ ರವರ ಇರುವಿಕೆಯನ್ನ ನೋಡಿ..ಹೊನ್ನಾಳಿ ಆಸ್ಪತ್ರೆಗೆ ಕರೆದೊಯ್ದಿರು. ಜೋಳಕ್ಕೆ ಹಾಕಿದ ಔಷಧ ಕುಡಿದಿದ್ದಾರೆ ಎಂದು ತಿಳಿದು ಬಂತು, ತಕ್ಷಣ ದಾವಣಗೆರೆಗೆ ಶಿಫ್ಟ್ ಮಾಡೋಕೆ ಹೇಳಿದ್ವಿ ಆದರೆ ಶಿವಮೊಗ್ಗ ಹತ್ರ ಅಂತಾ ಇಲ್ಲಿಗೆ ಶಿಫ್ಟ್ ಮಾಡಲಾಗಿದೆ. ಅವರಿಗೆ ಮಕ್ಕಳ ವಿಚಾರದಲ್ಲಿ ಕೊರಗಿತ್ತು ..ಅಲ್ಲದೆ ಮದ್ಯಪಾನಕ್ಕೆ ಅಡಿಕ್ಟ್ ಆಗಿದ್ದರು..ಆ ಕಾರಣಕ್ಕೆ ಡಿ ಅಡಿಕ್ಷನ್ ಸೆಂಟರ್‌ನಲ್ಲಿ ಎರಡು ತಿಂಗಳು ಇದ್ದರು. ಅಲ್ಲಿ ಸರಿ ಹೋಗಿದ್ದರು ಎಂದು ತಿಳಿಸಿದ್ದರು. 

ತಮ್ಮ  ರಾಜಕೀಯ ಸೇರಿ ನಮ್ಮ ವ್ಯವಹಾರಗಳನ್ನೆಲ್ಲ ಅವರೆ ನೋಡಿಕೊಳ್ಳುತ್ತಿದ್ದರು .16 ವರ್ಷ ಆಗಿತ್ತು ಮದುವೆ ಆಗಿತ್ತು ಬೆಳಗ್ಗೆ ಜೊತೆಯಲ್ಲಿ ತಿಂಡಿ ಮಾಡಿದ್ದೆವು. ಊರಿಗೆ ಹೋಗಿ ಬರುತ್ತೀನಿ ಅಂದಿದ್ದರು.. ಕೆರೆಗಳಿಗೆ ಹೋಗಿ ಭೇಟಿ ನೀಡಿ ಬರುವಾಗ ವಿಷಯ ಗೊತ್ತಾಯ್ತು ಎಂದು ತಿಳಿಸಿದ ಅವರು ನಾಳೆ ಚನ್ನಗಿರಿ ಕತ್ತಲಗೆರೆಯಲ್ಲಿ ಅಂತ್ಯಸಂಸ್ಕಾರ ನಡೆಸಲಿದ್ದೇವೆ ಎಂದು ತಿಳಿಸಿದರು.  

ಇನ್ನೂ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಬಿವೈ ವಿಜಯೇಂದ್ರ, ಬಿವೈ ರಾಘವೇಂದ್ರ, ರೇಣುಕಾಚಾರ್ಯ ಸೇರಿದಂತೆ ವಿವಿಧ ಬಿಜೆಪಿ ಮುಖಂಡರು ಮೆಗ್ಗಾನ್‌ ಆಸ್ಪತ್ರೆಯ ಶವಾಗಾರದ ಬಳಿ ದೌಡಾಯಿಸಿದ್ದಾರೆ.