ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿನಿ ಹಾಗೂ ಹೊನ್ನಾಳಿ ಯುವತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಪೊಲೀಸರಿಗೆ ಮಾಹಿತಿ ನೀಡಿ! ವಿವರ ಹೀಗಿದೆ

If you have any clue about the para-medical student and the Honnali girl, inform the police. The details are as follows shivamogga police, missing

ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿನಿ ಹಾಗೂ ಹೊನ್ನಾಳಿ ಯುವತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಪೊಲೀಸರಿಗೆ ಮಾಹಿತಿ ನೀಡಿ! ವಿವರ ಹೀಗಿದೆ
shivamogga police, missing

Shivamogga  Apr 5, 2024   ಈ ಫೋಟೋದಲ್ಲಿರುವ ಯುವತಿ ಹಾಗೂ ಮಹಿಳೆ ನಾಪತ್ತೆಯಾಗಿದ್ದು ಅವರ ಬಗ್ಗೆ ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಪ್ರಕಟಣೆಯನ್ನು ನೀಡಲಾಗಿದೆ. ಅದರ ವಿವರ ಹೀಗಿದೆ 

ಬೆಳಲಕಟ್ಟೆಯ ಯುವತಿ ಮಿಸ್ಸಿಂಗ್‌ 

ಶಿವಮೊಗ್ಗ ತಾಲೂಕು ಬೆಳಲಕಟ್ಟೆ ಗ್ರಾಮ ಮೇಲಿನ ಹನಸವಾಡಿ ವಾಸ ರಾಮು ಎಂಬುವವರ ಮಗಳು 18ವರ್ಷದ ಪ್ರಿಯಾ ಎಂಬ ಯುವತಿ ಮಾ. 23 ರಿಂದ ಕಾಣೆಯಾಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ.  ಈಕೆ ಸಿಮ್ಸ್ ಕಾಲೇಜಿನಲ್ಲಿ ಪ್ಯಾರ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಾಳೆ.   ಈಕೆ 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ತಮಿಳು ಮತ್ತು ಇಂಗ್ಲೀಷ್ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ತಿಳಿನೀಲಿ ಬಣ್ಣದ ಟಾಪ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಮತ್ತು ಬಿಳಿ ಕೋಟ್ ಧರಿಸಿರುತ್ತಾಳೆ.

ಈ ಯುವತಿಯ ಮಾಹಿತಿ ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414 / 9611761255 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. (ಫೋಟೋ ಲಗತ್ತಿಸಿದೆ)

ಹೊನ್ನಾಳಿ ಮಹಿಳೆ ಕಾಣೆಯಾಗಿದ್ದಾರೆ 

ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲ್ಲೂಕು ಚಿಕ್ಕ ಗೋಣಿಗೆರೆ ವಾಸಿ ಗಂಗಪ್ಪ ಬಿ.ಜಿ ಎಂಬುವವರ ಮಗಳು ಜ್ಯೋತಿ ಎಂಬ 32 ವರ್ಷದ ಯುವತಿ ಮಾ. 27 ರಿಂದ ಕಾಣೆಯಾಗಿದ್ದು, ಮಾ. 29 ರಂದು ಯಾರೋ ಅಪರಿಚಿತರು ಯುವತಿ ತಂದೆಯವರಿಗೆ ಪೊಲೀಸ್ ಮಾಡಿ ನಿಮ್ಮ ಮಗಳು ನಮ್ಮೊಂದಿಗೆ ಇರುತ್ತಾರೆಂದು ಹೇಳಿ, ಯಾಕೆ ಏನು ಎಂದು ತಿಳಿಸದೇ ಸ್ವಿಚ್‍ಆಪ್ ಮಾಡಿರುತ್ತಾರೆ. 

ಜ್ಯೋತಿ ಚಹರೆ:- 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕನ್ನಡ ತೆಲಗು ಭಾಷೆ ಮಾತನಾಡುತ್ತಾರೆ, ತೆಳು ನೀಲಿ ಬಣ್ಣದ ಜೀನ್ಸ್ ಹಾಗೂ ತೆಳು ನೀಲಿ ಬಣ್ಣದ ಟೀ ಶರ್ಟ್ ಧರಿಸಿರುತ್ತಾರೆ. ಈ ಯುವತಿಯ ಮಾಹಿತಿ ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414 / 9611761255 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.