KARNATAKA NEWS/ ONLINE / Malenadu today/ Oct 12, 2023 SHIVAMOGGA NEWS
ಶಿವಮೊಗ್ಗದಲ್ಲಿ ನಡೆಯುವ ದಸರಾ ಹಬ್ಬಕ್ಕೆ ಸಕ್ರೆಬೈಲ್ ಆನೆ ಬಿಡಾರ ದಿಂದ ಆನೆಯನ್ನು ನೀಡಲು ಅರಣ್ಯ ಇಲಾಖೆ ಒಪ್ಪಿತ್ತು. ಆದರೆ ಯಾವ ಆನೆಗಳನ್ನು ಕಳುಹಿಸಿಕೊಡಲಾಗುತ್ತದೆ ಎಂಬುದು ಗೊಂದಲ ಮೂಡಿಸಿತ್ತು. ಈ ಬಗ್ಗೆ ಮಲೆನಾಡು ಟುಡೆ ನೀಡಿದ ವರದಿ ಇಲ್ಲಿದೆ ಅರಣ್ಯ ಇಲಾಖೆಯಿಂದ ಸಿಕ್ತು ಪರ್ಮಿಶನ್! ಆದರೆ ಶಿವಮೊಗ್ಗ ಜಂಬೂ ಸವಾರಿಗೆ ಬರಲು ಸಕ್ರೆಬೈಲ್ನಲ್ಲಿ ಆನೆಯದ್ದೆ ಸಮಸ್ಯೆ ! ಏನು ಗೊತ್ತಾ?
ಸದ್ಯ ಈ ವಿಚಾರದಲ್ಲಿ ಎಲ್ಲವೂ ಸರಿಯಾಗಿದ್ದು, ಸಕ್ರೆಬೈಲ್ ಆನೆ ಕ್ಯಾಂಪ್ನಲ್ಲಿ ಆನೆಗಳಿಗೆ ತಾಲೀಮು ನಡೆಯುತ್ತಿದೆ.
ನಾಡಹಬ್ಬ ದಸರಾ ಹಬ್ಬ ಹಿನ್ನೆಲೆ ಅಂಬಾರಿ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ಸಕ್ರೆಬೈಲು ಆನೆ ಬಿಡಾರದಲ್ಲಿ ತಾಲೀಮು ಶುರುವಾಗಿದೆ. ಅಂದಹಾಗೆ, ಈ ಬಾರಿ ಸಾಗರ, ನೇತ್ರಾವತಿ ಆನೆಗಳ ಜೊತೆ ಭಾನುಮತಿ ಬದಲಾಗಿ ಹೇಮಾವತಿ ಆನೆ ಹೆಜ್ಜೆ ಹಾಕಲಿದೆ.
ಶಿವಮೊಗ್ಗ ದಸರಾದಲ್ಲಿ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗುವ ಗಜಪಡೆಗೆ ಹಬ್ಬಕ್ಕೆ ಎರಡೂರು ದಿನ ಬಾಕಿ ಇರುವಾಗ ತಾಲೀಮು ಶುರು ಮಾಡುತ್ತಿದ್ದರು. ಆದರೆ, ಈ ಬಾರಿ ದಸರಾಕ್ಕೆ ಇನ್ನು 12 ದಿನಗಳು ಬಾಕಿ ಇರುವಾಗಲೇ ತಾಲೀಮು ಶುರು ಮಾಡಿರುವುದು ವಿಶೇಷ
ಸಾಗರ, ನೇತ್ರಾವತಿ, ಹೇಮಾವತಿ ಆನೆಗಳಿಗೆ ವಿಶೇಷ ತಾಲೀಮು ನೀಡಲಾಗುತ್ತಿದೆ. ಸಕ್ರೆಬೈಲ್ನಲ್ಲಿ ಆನೆಗಳ ಮೇಲ ಜನಸವಾರಿ ಮಾಡುವ ಟೇಬಲ್ನ್ನ ಬಳಸಿಕೊಂಡು ಸಾಗರ್ಗೆ ಅಂಬಾರಿ ಹೊರುವ ತಾಲೀಮು ನೀಡಲಾಗುತ್ತಿದೆ.
ಸಕ್ರೆಬೈಲು ಮುಖ್ಯ ರಸ್ತೆಗಳಲ್ಲಿ ಆನೆಗಳಿಗೆ ತರಬೇತಿ ನೀಡಲಾಗುತ್ತಿದೆ.
ಶಿವಮೊಗ್ಗದಲ್ಲಿ ಅಂಬಾರಿ ಹೊರುವ ಪರಂಪರೆ ಶುರುವಾದಾಗಿಂದ ಶಾಂತ ಸ್ವಭಾವದ ಸಾಗರ ಆನೆಯೇ ಈ ಕೆಲಸ ಮಾಡುತ್ತಿದೆ. ಈತನೊಂದಿಗೆ ಸಕ್ರೆಬೈಲು ಆನೆ ಬಿಡಾರದ ಹಿರಿಯಾನ ನೇತ್ರಾವತಿ ಮತ್ತು ಭಾನುಮತಿ ಸಾಥ್ ನೀಡುತ್ತಿದ್ದವು, ಆದರೆ, ಈ ವರ್ಷ ಭಾನುಮತಿ ಬದಲು ‘ಹೇಮಾವತಿ’ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದಾಳೆ. ಭಾನುಮತಿಗರ್ಭಿಣಿ ಆಗಿರುವುದರಿಂದ ಈ ಬಾರಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿಲ್ಲ.
ಇನ್ನಷ್ಟು ಸುದ್ದಿಗಳು
