ಭದ್ರಾ ಗೇಟ್‌ ರಿಪೇರಿ ಪೂರ್ತಿ | ನದಿಗೆ ನೀರಿನ ಹರಿವು ಬಂದ್‌ | 48 ಗಂಟೆಗಳಲ್ಲಿ ನಡೆದಿದ್ದೇನು? | ಜಲಾಶಯದ ಮಹತ್ವ ಮಾಹಿತಿ

Bhadra Dam authorities and staff have successfully stopped the water leakage

ಭದ್ರಾ ಗೇಟ್‌ ರಿಪೇರಿ ಪೂರ್ತಿ | ನದಿಗೆ ನೀರಿನ ಹರಿವು ಬಂದ್‌ |  48 ಗಂಟೆಗಳಲ್ಲಿ ನಡೆದಿದ್ದೇನು? |  ಜಲಾಶಯದ ಮಹತ್ವ ಮಾಹಿತಿ
bhadra dam water level today, ಭದ್ರಾ ಡ್ಯಾಂ, ಭದ್ರಾ ಜಲಾಶಯ,

SHIVAMOGGA | MALENADUTODAY NEWS | Jul 8, 2024  ಮಲೆನಾಡು ಟುಡೆ 

ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರ ಡ್ಯಾಮ್ ನಿಂದ ಅಪಾರ ಪ್ರಮಾಣದಲ್ಲಿ ನೀರು ನದಿಗೆ ಸೋರಿಕೆಯಾಗುತ್ತಿದ್ದನ್ನು ಮಲೆನಾಡು ಮೊದಲು ವರದಿ ಮಾಡಿತ್ತು. ಈ ವರದಿಯ ಸಂಚಲನ ರಾಜ್ಯಮಟ್ಟದಲ್ಲಾಗಿತ್ತು. ಅಲ್ಲದೆ ರೈತರು ಅಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಇದೀಗ ನೀರಿನ ಸೋರಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟುವಲ್ಲಿ ಭದ್ರ ಡ್ಯಾಮ್ ನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.  

ಭದ್ರಾ ಡ್ಯಾಂ ತುಂಬಿಲ್ಲವಾದರೂ ನದಿಗೆ ಹರಿಯುತ್ತಿದೆ ಭರಪೂರ ನೀರು? | ಕೈ ಕೊಟ್ಟ ರಿವರ್‌ ಗೇಟ್‌| ಯಡವಟ್ಟಿಗೆ ಯಾರು ಜವಾಬ್ದಾರಿ?

ನೀರು ಸೋರಿಕೆಯ ಬಗ್ಗೆ ವರದಿಯಾಗುತ್ತಲೆ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಾಗಿತ್ತು. ಜಲಾಶಯದ ಹೊಣೆಗಾರಿಕೆ ಹೊತ್ತಿದ್ದ ಅಧಿಕಾರಿಗಳು ಲಭ್ಯವಾಗುವ ಎಲ್ಲಾ ಮೂಲಗಳಿಂದಲೂ ಸ್ಲೋಯಿಸ್‌ ಗೇಟ್‌ ರಿಪೇರಿಗೆ ಸಂಪನ್ಮೂಲಗಳನ್ನ ಸಂಗ್ರಹಿಸಿ ಕಾರ್ಯಾಚರಣೆಗೆ ಇಳಿದಿದ್ದರು. ಕಳೆದ 48 ಗಂಟೆಗಳ ಕಾರ್ಯಾಚರಣೆ ಬಳಿಕ ಇದೀಗ ನೀರು ಸೋರಿಕೆ ಬಂದ್‌ ಆಗಿದೆ.  ಗುತ್ತಿಗೆದಾರ ವೇದಮೂರ್ತಿ ಹಾಗೂ ಅವರ ಅನುಭವಿ ತಾಂತ್ರಿಕ ಹೊರ ಗುತ್ತಿಗೆ ನೌಕರರ ತಂಡದಿಂದ ಕಳೆದ 48 ಗಂಟೆಗಳ ಕಾಲ ಸೋಯ್ಸ್‌ ಗೇಟ್‌ನ ರೀಪೇರಿ ಕಾರ್ಯ ಯಶಸ್ವಿಯಾಗಿದೆ. 

ಈ ನಡುವೆ ನೀರು ನಿಲ್ಲಿಸಲು ಶ್ರಮವಹಿಸಿದ ದಿನಗೂಲಿ ನೌಕರರು ನಮ್ಮ ಅನುಭವವನ್ನು ನೋಡಿಯಾದ್ರು ಸರ್ಕಾರ ನಮ್ಮನ್ನು ಖಾಯಂಗೊಳಿಸಬೇಕೆಂದು ಮನವಿ ಮಾಡಿದ್ದಾರೆ ಹಲವು ವರ್ಷಗಳಿಂದ ಡ್ಯಾಮ್ ನಲ್ಲಿಯೇ ಕೆಲಸ ಮಾಡುತ್ತಿದ್ದರು ನಮ್ಮನ್ನು ಕಾಯಂ ಗೊಳಿಸದೆ ದಿನಗೂಲಿ ನೌಕರರನ್ನಾಗಿ ನೋಡಲಾಗುತ್ತಿದೆ. 

ನಮ್ಮ ಅನುಭವವನ್ನು ಒರಗೆ ಹಚ್ಚಿ ಗೇಟ್ ಬಂದ್ ಮಾಡಿದ್ದೇವೆ ಈಗಲಾದರೂ ನಮ್ಮನ್ನು ಖಾಯಂ ಗೊಳಿಸಬೇಕೆಂದು ದಿನಗೂಲಿ ನೌಕರರು ಬೇಡಿಕೆಯನ್ನು ಮುಂದಿಟ್ಟಿದ್ದಾರೆ 

Bhadra Dam authorities and staff have successfully stopped the water leakage that Malenadu Today had previously reported. The repair work, which took 48 hours, was carried out by contractor Vedamoorthy and his team of experienced technical outsourced employees.