ದುಡ್ಡು ಮಾಡುವುದು ಹೇಗೆ ಎಂದು GOOGLE ನಲ್ಲಿ ಸರ್ಚ್​ ಮಾಡಿದಾಗ! ಕಳೆದುಕೊಂಡಿದ್ದು ಎರಡು ಕಾಲು ಲಕ್ಷ! ಚಿಕ್ಕಮಗಳೂರು ಹುಡುಗನಿಗೆ ಶಿವಮೊಗ್ಗದಲ್ಲಿ ದೋಖಾ

When searching google for how to earn money! Two and a half lakhs lost! Chikkamagaluru boy gets dhokha in Shimoga

ದುಡ್ಡು ಮಾಡುವುದು ಹೇಗೆ ಎಂದು  GOOGLE   ನಲ್ಲಿ ಸರ್ಚ್​ ಮಾಡಿದಾಗ! ಕಳೆದುಕೊಂಡಿದ್ದು ಎರಡು ಕಾಲು ಲಕ್ಷ!  ಚಿಕ್ಕಮಗಳೂರು ಹುಡುಗನಿಗೆ ಶಿವಮೊಗ್ಗದಲ್ಲಿ ದೋಖಾ
ದುಡ್ಡು ಮಾಡುವುದು ಹೇಗೆ ಎಂದು GOOGLE ನಲ್ಲಿ ಸರ್ಚ್​ ಮಾಡಿದಾಗ! ಕಳೆದುಕೊಂಡಿದ್ದು ಎರಡು ಕಾಲು ಲಕ್ಷ! ಚಿಕ್ಕಮಗಳೂರು ಹುಡುಗನಿಗೆ ಶಿವಮೊಗ್ಗದಲ್ಲಿ ದೋಖಾ

MALENADUTODAY.COM  |SHIVAMOGGA| #KANNADANEWSWEB

how to earn money  ದುಡ್ಡು ಮಾಡುವುದು ಹೇಗೆ ಎಂದು ಗೂಗಲ್​ನಲ್ಲಿ ಸರ್ಚ್ ಮಾಡಿದ ಯುವಕನೊಬ್ಬ 2 ಲಕ್ಷ ಚಿಲ್ಲರೆ ಹಣವನ್ನು ಕಳೆದುಕೊಂಡಿದ್ದಾನೆ. ದುಡ್ಡು ಮಾಡುವ ಆಸೆಯು ಪ್ರತಿಯೊಬ್ಬರಿಗೂ ಇರುತ್ತದೆ. ಕಂತೆ ಕಂತೆ ಐನೂರು ರೂಪಾಯಿ ನೋಟು ನೋಡಿದವರಿಗಂತೂ,  ಇಷ್ಟೆಲ್ಲಾ ಹೇಗೆ ಸಂಪಾದನೆ ಮಾಡಲಾಗುತ್ತೆ ಎಂದು ಕುತೂಹಲ ಮೂಡಿರುತ್ತೆ. ಅಂತಹ ಕುತೂಹಲದಲ್ಲಿ ಯುವಕನೊಬ್ಬ ಗೂಗಲ್​ನಲ್ಲಿ ದುಡ್ಡು ಮಾಡುವುದಕ್ಕೊಂದು ದಾರಿ ಸಿಗಬಹುದು ಎಂದುಕೊಂಡು, how to earn money   ಎಂದು ಸರ್ಚ್ ಕೊಟ್ಟಿದ್ದಾನೆ. ನಂತರ ನಡೆದಿದ್ದೆಲ್ಲಾ ಮುಂದೆ ಇದೆ ಓದಿ 

ಬರ್ರೋ...ನನ್ನ ಮಕ್ಕಳಾ....ಯಾರು ಬರ್ತಿರಾ ಬನ್ನಿ! ಹೀಗ್ಯಾಕೆ ಹೇಳಿದ್ರು? ಇಷ್ಟಕ್ಕೂ ಯಾರಿಗೆ ಹೇಳಿದ್ರು? ಡಾ.ಜಿ.ಪರಮೇಶ್ವರ್​

ಮೂಲತಃ ಚಿಕ್ಕಮಗಳೂರು ಜಿಲ್ಲೆ ತರಿಕೆರೆ ತಾಲ್ಲೂಕಿನ ಯುವಕ, ಶಿವಮೊಗ್ಗದಲ್ಲಿ ಓದುತ್ತಿದ್ದಾನೆ.  ತರೀಕೆರೆ ತಾಲೂಕಿನ ಅಜ್ಜಂಪುರ ಪೋಸ್ಟ್ ನ ಗ್ರಾಮವೊಂದರ ಯುವಕ ಶಿವಮೊಗ್ಗದ ಕಾಲೇಜೊಂದರಲ್ಲಿ ಕಳೆದ ಒಂಬತ್ತನೇ ತಾರೀಖು, ವಿದ್ಯಾರ್ಥಿ ಮೊಬೈಲ್ ನಲ್ಲಿ ಗೂಗಲ್ Chrome ಅಪ್ಲಿಕೇಶನ್ ಆನ್​ ಮಾಡಿ, ಅದರಲ್ಲಿ  how to earn money ಎಂದು ಸರ್ಚ್ ಮಾಡಿದ್ದಾನೆ. ತಕ್ಷಣಕ್ಕೆ ಗೂಗಲ್​ನಲ್ಲಿ  happytoearn188.club ಎಂಬ ಲಿಂಕ್ ಓಪನ್ ಆಗಿದೆ. ಅದನ್ನ ಓಪನ್​ ಮಾಡುತ್ತಿದ್ದಂತೆ. ಅದರಲ್ಲಿ ರಿಜಿಸ್ಟರ್​ ಕೇಳಿದೆ. ನಂಬರ್ ವಿಳಾಸ ನೀಡುತ್ತಿದ್ದಂತೆ ವಾಟ್ಸ್ಯಾಪ್​ಗೆ ಮೆಸೇಜ್ ಬಂದಿದೆ. ಆ ಲಿಂಕ್ ಕ್ಲಿಕ್​ ಮಾಡಿದ್ರೆ ಹಣದ ಹೂಡಿಕೆಯ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅದರಂತೆ   ಹಣವನ್ನು ಹೂಡಿಕೆ ಮಾಡಿದರೆ ಕಮಿಷನ್ ನೀಡುವುದಾಗಿ ಅದರಲ್ಲಿ ತಿಳಿಸಿತ್ತು. 

READ | ಮಗಳು ಜೀವ ಉಳಿಸಿದ್ದಳು! ತಾಯಿ ಕೊಂದಿದ್ದಳು, ತಂಗಿ ಕೇಸ್​ ಪತ್ತೆ ಮಾಡಿದ್ದಳು! 2 ವರ್ಷ ಹೂತಿಟ್ಟ ಸತ್ಯ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತು! ತೀರ್ಥಹಳ್ಳಿಯಲ್ಲಿ ಸಿಕ್ಕ ತಲೆಬುರುಡೆಯ ಮಿಸ್ಸಿಂಗ್ ಕೇಸ್​ ಮಿಸ್ಟರಿ! JP FLASHBACK ನಲ್ಲಿ!

ಅಲ್ಲಿ ತಿಳಿಸಿದ ಹಾಗೆ, ವಿದ್ಯಾರ್ಥಿಯು ತನ್ನ ಬ್ಯಾಂಕ್​ನಿಂದ  ವಿವಿಧ ಬ್ಯಾಂಕ್ ಖಾತೆಗೆ 2,38,299/- ರೂ ಹಣ ಕಳಿಸಿದ್ದಾರೆ.  ಆ ಸಮಯದಲ್ಲಿ ವಿದ್ಯಾರ್ಥಿಗೆ ನೀಡಬೇಕಾದ ಕಮಿಷನ್ ಹಣವನ್ನು  ಆನ್​ಲೈನ್​ನಲ್ಲಿ ತೋರಿಸಿದೆ. ಆದರೆ ಅದನ್ನ  Withdrawl ಮಾಡಲು ಹೋದಾಗ ಅದು Withdrawl ಆಗಿಲ್ಲ. ಹೀಗಾಗಿ ಅನುಮಅನ ಬಂದು ಪರಿಶೀಲಿಸಿದಾಗ, ಖುದ್ದು ಮೋಸಹೋಗಿರುವುದು ಗೊತ್ತಾಗಿದೆ. ಈ ಸಂಬಂಧ ಸಿಇಎನ್​ ಪೊಲೀಸ್ ಸ್ಟೇಷನ್​ಗೆ ದೂರು ನೀಡಿದ್ದಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga shivamogga,cyber crime,shivamogga news,cyber crime police,shivamogga latest news,national cyber crime,how to file a cyber crime complainant,crime story,crime,shivamogga sp,shivamogga fraud,shivamogga battle,shivamogga incident,tension in shivamogga,shivamogga today news,shimogga,shivamogga airport video