ಹೈ ವೊಲ್ಟೋಜ್ ಕ್ಷೇತ್ರ ಶಿಕಾರಿಪುದಲ್ಲಿ ಈ ಬಾರಿ ಕಾಂಗ್ರೇಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಸುಲಭನಾ..ಎಲೆಕ್ಷನ್ ಮಾಸ್ಟರ್ ಮೈಂಡ್ ಬಿ.ವೈ ವಿಜಯೇಂದ್ರಗೆ ಠಕ್ಕರ್ ನೀಡಿದ್ರಾ ಪಕ್ಷೇತರ ಅಭ್ಯರ್ಥಿ ಸಾಧು ಲಿಂಗಾಯಿತ ಮತಗಳು ವಿಭಜನೆಯಾದ್ರೆ...ಗೆಲುವು ಸಿಗುತ್ತಾ..ಒಳಮೀಸಲಾತಿ ವಿಚಾರದಲ್ಲಿ ಕೆಂಡಕಾರುತ್ತಿರುವ ಬಂಜಾರ ಸಮುದಾಯದ ಮತಗಳ ಗುಟ್ಟೇನು.?

ರಾಜ್ಯದಲ್ಲಿ ಹೈ ವೊಲ್ಟೇಜ್ ಕ್ಷೇತ್ರವೆಂದು ಬಿಂಬಿತವಾಗಿರುವ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆ ರಂಗೇರಿದೆ. ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಗಳ ನೇರಾನೇರ ಹಣಾಹಣಿ ಸ್ಪರ್ಧೆಯಲ್ಲಿ ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ ದೊಡ್ಡ ಠಕ್ಕರ್ ಅನ್ನೇ ನೀಡಿದ್ದಾರೆ.

ಹೈ ವೊಲ್ಟೋಜ್ ಕ್ಷೇತ್ರ ಶಿಕಾರಿಪುದಲ್ಲಿ ಈ ಬಾರಿ ಕಾಂಗ್ರೇಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಸುಲಭನಾ..ಎಲೆಕ್ಷನ್ ಮಾಸ್ಟರ್ ಮೈಂಡ್ ಬಿ.ವೈ  ವಿಜಯೇಂದ್ರಗೆ ಠಕ್ಕರ್ ನೀಡಿದ್ರಾ ಪಕ್ಷೇತರ ಅಭ್ಯರ್ಥಿ ಸಾಧು ಲಿಂಗಾಯಿತ ಮತಗಳು ವಿಭಜನೆಯಾದ್ರೆ...ಗೆಲುವು ಸಿಗುತ್ತಾ..ಒಳಮೀಸಲಾತಿ ವಿಚಾರದಲ್ಲಿ ಕೆಂಡಕಾರುತ್ತಿರುವ ಬಂಜಾರ ಸಮುದಾಯದ ಮತಗಳ ಗುಟ್ಟೇನು.?

ಹೈ ವೊಲ್ಟೋಜ್ ಕ್ಷೇತ್ರ ಶಿಕಾರಿಪುದಲ್ಲಿ ಈ ಬಾರಿ ಕಾಂಗ್ರೇಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಸುಲಭನಾ..ಎಲೆಕ್ಷನ್ ಮಾಸ್ಟರ್ ಮೈಂಡ್ ಬಿ.ವೈ  ವಿಜಯೇಂದ್ರಗೆ ಠಕ್ಕರ್ ನೀಡಿದ್ರಾ ಪಕ್ಷೇತರ ಅಭ್ಯರ್ಥಿ ಸಾಧು ಲಿಂಗಾಯಿತ ಮತಗಳು ವಿಭಜನೆಯಾದ್ರೆ...ಗೆಲುವು ಸಿಗುತ್ತಾ..ಒಳಮೀಸಲಾತಿ ವಿಚಾರದಲ್ಲಿ ಕೆಂಡಕಾರುತ್ತಿರುವ ಬಂಜಾರ ಸಮುದಾಯದ ಮತಗಳ ಗುಟ್ಟೇನು.

ಶಿಕಾರಿಪುರದಲ್ಲಿ ರಂಗೇರಿದ ಚುನಾವಣೆ ಕಾವು

ಬಿ.ವೈ ವಿಜಯೇಂದ್ರಗೆ ಠಕ್ಕರ್ ಕೊಟ್ಟ ಪಕ್ಷೇತರ ಅಭ್ಯರ್ಥಿ

ಸಾಧು ಲಿಂಗಾಯಿತ ಮತಗಳು ವಿಭಜನೆಯಾದ್ರೆ ಗೆಲುವು  ಯಾರಿಗೆ ?

ರಾಜ್ಯದಲ್ಲಿ ಹೈ ವೊಲ್ಟೇಜ್ ಕ್ಷೇತ್ರವೆಂದು ಬಿಂಬಿತವಾಗಿರುವ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆ ರಂಗೇರಿದೆ. ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷಗಳ ನೇರಾನೇರ ಹಣಾಹಣಿ ಸ್ಪರ್ಧೆಯಲ್ಲಿ ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ ದೊಡ್ಡ ಠಕ್ಕರ್ ಅನ್ನೇ ನೀಡಿದ್ದಾರೆ.

ಶಿಕಾರಿಪುರದ ಕಾಂಗ್ರೆಸ್ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ, ನಾಗರಾಜ್ ಗೌಡರಿಗೆ ಕೊನೆ ಕ್ಷಣದಲ್ಲಿ ಟಿಕೇಟ್ ಕೈತಪ್ಪಿದ್ದರಿಂದ ಅವರ ಬೆಂಬಲಿಗ ಬಳಗ ಕೆರಳಿ ಕೆಂಡವಾಗಿದೆ. ಮೊನ್ನೆ ಬೆಂಬಲಿಗರ ಸಭೆ ನಡೆಸಿದ ನಾಗರಾಜ್ ಗೌಡರಿಗೆ ಬೆಂಬಲಿಗರು ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧಿಸುವಂತೆ ಆಗ್ರಹ ಮಾಡಿದ್ದರಿಂದ ನೆನ್ನೆ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ನ ಶಾಂತವೀರಪ್ಪಗೌಡ ಜೊತೆಗಿದ್ದದ್ದನ್ನು ಗಮನಿಸಿದರೆ ಶಿಕಾರಿಪುರದಲ್ಲಿ ಕಾಂಗ್ರೇಸ್ ಇಬ್ಬಾಗವಾದಂತೆ ಕಾಣುತ್ತಿದೆ. ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರ ರಿಗೆ ಈ ಬಾರಿ ಅನಾಯಾಸವಾಗಿ ಗೆಲ್ಲುತ್ತಾರೆ ಎಂಬ ಮಾತು ಈಗ ಕಮರುತ್ತಿದೆ.

 

ಇನ್ನು ಶಿಕಾರಿಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೋಣಿ ಮಾಲತೇಶ್ ಸ್ಪರ್ಧಿಸಿದ್ದಾರೆ. ಆದರೆ ಈಗ ನಾಗರಾಜ್ ಗೌಡರು ಪಕ್ಷೇತರವಾಗಿ ಸ್ಪರ್ಧಿಸಿರುವುದು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಅಭ್ಯರ್ಥಿಗಳಿಗೂ ದೊಡ್ಡ ಸವಾಲನ್ನೊಡ್ಡಿದೆ.  ನೆನ್ನೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನೆರೆದಿದ್ದ ಜನಸ್ತೋಮ ಶಿಕಾರಿಪುರ ಚುನಾವಣೆ.ಅಷ್ಟು ಸುಲಭವಿಲ್ಲ ಎಂಬ ಸಂದೇಶ ರವಾನಿಸಿದೆ. ವಿಧಾನ ಪರಿಷತ್ ಮಾಜಿ ಸದಸ್ಯ ಶಾಂತವೀರಪ್ಪಗೌಡ ಸೇರಿದಂತೆ ತಾಲೂಕಿನ ಬಹುತೇಕ ಕಾಂಗ್ರೆಸ್ ಮುಖಂಡರು ಗಳು ನಾಮಪತ್ರ ಸಲ್ಲಿಸುವಾಗ  ಹಾಜರಿದ್ದರು. ಜೆಡಿಎಸ್‌ವರಿಷ್ಠ ಹೆಚ್ ಡಿ ಕುಮಾರಸ್ವಾಮಿ ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡಗೆ ಬಾಹ್ಯ ಬೆಂಬಲ ಘೋಷಿಸಿದ್ದಾರೆ. ಶಿಕಾರಿಪುರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ

ಒಳಮೀಸಲಾತಿ ಎಫೆಕ್ಟ್ ಡ್ಯಾಮೇಜ್ ಕಂಟ್ರೋಲ್ ಮಾಡುವರೇ ವಿಜಯೇಂದ್ರ.?

ಶಿಕಾರಿಪುರ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಂಜಾರ ಸಮುದಾಯ, ಒಳಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ತೆಗೆದುಕೊಂಡ ನಿಲುವಿಗೆ ಕೊತಕೊತ ಕುದಿಯುತ್ತಿದೆ. ತಾಂಡಾಗಳಲ್ಲಿ ಚುನಾವಣೆ ಭಹಿಷ್ಕಾರದ ಬಿಸಿ ತಟ್ಟಿದೆ. ಬಿ.ವೈ ವಿಜಯೇಂದ್ರ ತಾಂಡಗಳಿಗೆ ಭೇಟಿ ನೀಡಿದಾಗ ಅದರ ಅನುಭವ ಆಗಿದೆ. ಬಂಜಾರ ಸಮುದಾಯದ ಈ ಅಸಮಧಾನವನ್ನು ವಿಜಯೇಂದ್ರ ಹೇಗೆ ಶಮನ ಮಾಡುತ್ತಾರೆ ಎಂಬ ಕುತುಹಲ ಹಲವರಲ್ಲಿದೆ. ಚುನಾವಣಾ ಚಾಣಾಕ್ಯ ಎಂದೇ ಹೆಸರು ಮಾಡಿರುವ ವಿಜಯೇಂದ್ರ, ಸ್ವಕ್ಷೇತ್ರದಲ್ಲಿ ತನ್ನ ಗೆಲುವಿಗೆ ಅಡ್ಡವಾಗಿರುವ ಬೇಲಿಯನ್ನು ಹೇಗೆ ಕಿತ್ತೊಗೆಯುತ್ತಾರೆ ಎಂಬುದು ಸಧ್ಯದ ಕುತುಹಲ. ಇನ್ನು ಜೆಡಿಎಸ್ ನಲ್ಲಿದ್ದ ಬಳಿಗಾರ್ ಬಂಜಾರ ಸಮುದಾಯದ ಜೊತೆ ಉತ್ತಮ ನಂಟನ್ನು ಹೊಂದಿರುವುದರಿಂದ ವಿಜಯೇಂದ್ರ ಅದನ್ನು ಪ್ಲಸ್ ಪಾಯಿಂಟ್ ಮಾಡಿಕೊಳ್ಳಬಹುದಾಗಿದೆ. ಇದೆಲ್ಲದರ ನಡುವೆ ಈಗ ಕಾಂಗ್ರೇಸ್ ಟಿಕೇಟ್ ವಂಚಿತ ನಾಗರಾಜ್ ಗೌಡ ಪಕ್ಷೇತರವಾಗಿ ಸ್ಪರ್ದಿಸಿರುವುದರಿಂದ ಕಾಂಗ್ರೇಸ್ ಮತ್ತು ಬಿಜೆಪಿ ಎರಡು ಪಕ್ಷಗಳ ಮತಗಳು ವಿಭಜನೆಯಾಗಬಲ್ಲದು ಎಂಬುದನ್ನು ನೆನ್ನೆಯ ನಾಗರಾಜ್ ಗೌಡರ ಮೆರವಣಿಗೆಯಲ್ಲಿನ ದೃಷ್ಯ ಸಾಕ್ಷಿಕರಿಸುತ್ತದೆ.

 ನಾಗರಾಜಗೌಡ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಕರೆದಿದ್ದ ಬೆಂಬಲಿಗರ ಸಭೆಯಲ್ಲಿ ಕಾರ್ಯಕರ್ತರು ಸುಮಾರು 40 ಲಕ್ಷ ರೂ. ಸಂಗ್ರಹ ಮಾಡಿದ್ದಾರೆನ್ನಲಾಗಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ ಎಂಬ ಕಾರಣಕ್ಕೆ ಇದೂವರೆಗೆ ಅವರೆ ಸಹಕಾರ ನೀಡಲಾಗಿತ್ತು. ಈಗ ಅಂತಹ ಸನ್ನಿವೇಶವಿಲ್ಲ. ಮೂರು ಸಾವಿರ ಮತದಾರರಿರುವ ಬಣಜಿಗ ಲಿಂಗಾಯತರಿಗೆ ಇಷ್ಟು ವರ್ಷ ಅವಕಾಶ ನೀಡಲಾಗಿದೆ. 50 ಸಾವಿರ ಮತದಾರರಿರುವ ಸಾದರ ಲಿಂಗಾಯತರಿರುವ ಶಿಕಾರಿಪುರ ಕ್ಷೇತ್ರದಲ್ಲಿ ಅದೆ ಸಾಧು ಲಿಂಗಾಯಿತ ಸಮುದಾಯದ  ನಾಗರಾಜಗೌಡ ರನ್ನು ಯಾಕೆ ಗೆಲ್ಲಿಸಬಾರದು ಎಂಬ ಮಾತುಗಳು ಕೇಳಿಬರುತ್ತಿದೆ. ಇತ್ತ ಕಾಂಗ್ರೇಸ್ ನ ಗೋಣಿ ಮಾಲತೇಶ್ ಗೂ ಈ ಬಂಡಾಯ ಕಬ್ಬಿಣದ ಕಡಲೆಯಾಗಿದೆ. ನಾಗರಾಜ್ ಗೌಡರ ಸ್ಪರ್ಧೆಯಿದಾಂಗಿ ಕ್ಷೇತ್ರದಲ್ಲಿ ಕಾಂಗ್ರೇಸ್ ಇಬ್ಭಾಗವಾದಂತಾಗಿದೆ. ಇಲ್ಲಿ ಯಾರಿಗೆ ಗೆಲುವು ಯಾರಿಗೆ ಸೋಲು ಎಂಬುದು ಸಧ್ಯದ ಪರಿಸ್ಥಿತಿಯಲ್ಲಿ ಅನಿಶ್ಚಿತತೆಯಿಂದ ಕೂಡಿದೆ