ಶಿಕಾರಿಪುರದಲ್ಲಿ ಜಾಫರ್ ಮರ್ಡ್​ರ್​ ಕೇಸ್ ! ಶಿವಮೊಗ್ಗದ ಇಬ್ಬರು ಸೇರಿ ಏಳು ಮಂದಿ ಅರೆಸ್ಟ್!

Zafar murder case in Shikaripura Seven persons, including two from Shivamogga, have been arrested. ಶಿಕಾರಿಪುರದಲ್ಲಿ ಜಾಫರ್ ಮರ್ಡ್​ರ್​ ಕೇಸ್ ! ಶಿವಮೊಗ್ಗದ ಇಬ್ಬರು ಸೇರಿ ಏಳು ಮಂದಿ ಅರೆಸ್ಟ್!

ಶಿಕಾರಿಪುರದಲ್ಲಿ ಜಾಫರ್ ಮರ್ಡ್​ರ್​ ಕೇಸ್ ! ಶಿವಮೊಗ್ಗದ ಇಬ್ಬರು ಸೇರಿ ಏಳು ಮಂದಿ ಅರೆಸ್ಟ್!

KARNATAKA NEWS/ ONLINE / Malenadu today/ Aug 25, 2023 SHIVAMOGGA NEWS

ಶಿಕಾರಿಪುರ ತಾಲ್ಲೂಕಿನಲ್ಲಿ ನಡೆದಿದ್ದ ಈದ್ ಮಿಲಾದ್ ಕಮಿಟಿ ವಿಚಾರದ ಗಲಾಟೆಯಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳನ್ನು ಬಂಧಿಸಿದ್ಧಾರೆ.

ಬಂದಿತರು ಯಾರು?

ಪ್ರಕರಣದಲ್ಲಿ ಸದರಿ ತನಿಖಾ ತಂಡವು ದಿನಾಂಕ: 22-08-2023 ರಂದು ಬಂಧಿಸಿರುವ ಆರೋಪಿಗಳು ಯಾರು ಎಂಬುದನ್ನು ನೋಡುವುದಾದರೆ, 

1) ಬಾಷಾ, 42 ವರ್ಷ ಸೊಸೈಟಿ ಕೇರಿ,  

 2) ರೋಷನ್, 19 ವರ್ಷ, ಸೊಸೈಟಿ ಕೇರಿ, ಶಿಕಾರಿಪುರ ಟೌನ್, ಹಾಲಿ ವಾಸ ಇಲಿಯಾಸ್‌ ನಗರ, ಶಿವಮೊಗ, ಟೌನ್,

3) ಸದಾಂ ಹುಸೇನ್, 31 ವರ್ಷ, ಸೊಸೈಟಿ ಕೇರಿ, ಶಿಕಾರಿಪುರ ಟೌನ್, ಹಾಲಿ ವಾಸ ಇಲಿಯಾಸ್‌ ನಗರ, ಶಿವಮೊಗ್ಗ ಟೌನ್, 

4) ಸಲ್ಮಾನ್ @ ಸಲೀಂ 22 ವರ್ಷ, ಸೊಸೈಟಿ ಕೇರಿ, ಶಿಕಾರಿಪುರ ಟೌನ್, 

5) ಇಮಾನ್, 30 ವರ್ಷ, ಸೊಸೈಟಿ ಕೇರಿ, ಶಿಕಾರಿಪುರ ಟೌನ್, 

6) ಆರಿಫ್ ಜಾನ್, 33 ವರ್ಷ, ಸೊಸೈಟಿ ಕೇರಿ, ಶಿಕಾರಿಪುರ ಟೌನ್, 

7) ಎಸ್‌ಎನ್ ಬಾಬು @ ಸಾಬರ್ ಅಹಮ್ಮದ್, 42 ವರ್ಷ, ವಿನಾಯಕ ನಗರ ಶಿಕಾರಿಪುರ ಟೌನ್ 

ಕೊಲೆಗೆ ಕಾರಣ?

ಈದ್​  ಮಿಲಾದ್ ಕಮಿಟಿಯಲ್ಲಿ ಪ್ರತಿವರ್ಷ ಶಿಕಾರಿಪುರದ ಗಗ್ರಿ ಏರಿಯಾದವರು ಆಯ್ಕೆಯಾಗುತ್ತಿದ್ದರು.ಈ ಸಲ ಸೊಸೈಟಿ ಕೇರಿಯವರು ಅಧ್ಯಕ್ಷರಾಗಬೇಕು ಎಂಬ ವಿಚಾರಕ್ಕೆ ಗಲಾಟೆಯಾಗಿದೆ. ಈ ವಿಚಾರದಲ್ಲಿಯೇ  ಜಾಫರ್ ಹತ್ಯೆಯಾಗಿತ್ತು. ಇದಕ್ಕೆ  ಸಂಬಂಧಿಸಿದಂತೆ  ಪುರಸಭೆಯ ಸದಸ್ಯ ದಸ್ತಗಿರ್ ದೂರು  ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದರು. ಇದೀಗ ಆರೋಪಿಗಳನ್ನ ಬಂಧಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ  


2022 ಸಾಲಿನ  ಸ್ಮಾರ್ಟ್​ ಸಿಟಿ ಪ್ರಶಸ್ತಿಯಲ್ಲಿ ಶಿವಮೊಗ್ಗಕ್ಕೆ 2ನೇ ಸ್ಥಾನ! ಏನಿದು ವಿಶೇಷ ಗೌರವ

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ 2022 ಸಾಲಿನಸ್ ಮಾರ್ಟ್‌ ಸಿಟಿ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಈ ಪೈಕಿ, ರಾಜ್ಯದ 3 ನಗರಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಗಳಿಸಿಕೊಂಡಿವೆ. 

ಶಿವಮೊಗ್ಗ, ಹುಬ್ಬಳ್ಳಿ - ಧಾರವಾಡ ಮತ್ತು ಬೆಳಗಾವಿ ನಗರಗಳು ಪ್ರಶಸ್ತಿ ಗೆದ್ದುಕೊಂಡಿವೆ. ನಗರ ಪರ್ಯಾವರಣ ವಿಭಾಗದಲ್ಲಿ ಶಿವಮೊಗ್ಗ ನಗರ 2ನೇ ಸ್ಥಾನ ಗಳಿಸಿಕೊಂಡಿದೆ. ಏನೂತನ ಆವಿಷ್ಕಾರ ವಿಭಾಗದಡಿ ಹುಬ್ಬಳ್ಳಿ ಧಾರವಾಡ ಅವಳಿ ನಗರ ಮೊದಲ ಸ್ಥಾನ ಬೆಳಗಾವಿ ಮತ್ತು ದಕ್ಷಿಣ ವಲಯ ನಗರ ವಿಭಾಗದಲ್ಲಿ ನಗರ ಪ್ರಶಸ್ತಿಯನ್ನು ಗಳಿಸಿದೆ.

ಇನ್ನು ರಾಷ್ಟ್ರೀಯ ಸ್ಮಾರ್ಟ್ ಸಿಟಿ ಪ್ರಶಸ್ತಿಯಲ್ಲಿ ಇಂದೋರ್ ಮೊದಲ ಸ್ಥಾನದಲ್ಲಿದ್ದು, ಸೂರತ್ ಹಾಗೂ ಆಗ್ರಾ ಕ್ರಮವಾಗಿ 2 ಮತ್ತು 3ನೇ ಸ್ಥಾನಗಳಲ್ಲಿವೆ. ಉತ್ತಮ ರಾಜ್ಯಗಳ ಪ್ರಶಸ್ತಿಯಲ್ಲಿ ಮಧ್ಯಪ್ರದೇಶ, ತಮಿಳುನಾಡು ಮೊದಲ 2 ಸ್ಥಾನದಲ್ಲಿದ್ದರೆ, ರಾಜಸ್ಥಾನ ಮತ್ತು ಉತ್ತರ ಪ್ರದೇಶ 3ನೇ ಸ್ಥಾನವನ್ನು ಹಂಚಿಕೊಂಡಿವೆ. ಒಟ್ಟಾರೆ 66 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ. 

 

ಇನ್ನಷ್ಟು ಸುದ್ದಿಗಳು