ಅನ್ಯಕೋಮಿನ ಯವಕರಿಂದ ಚಾಕು ಇರಿತ! ಶಿಕಾರಿಪುರದಲ್ಲಿ ನಡೆದ ಘಟನೆ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

Stabbed by young men from other communities! What did SP Mithun Kumar say about the incident in Shikaripura?

ಅನ್ಯಕೋಮಿನ ಯವಕರಿಂದ ಚಾಕು ಇರಿತ!  ಶಿಕಾರಿಪುರದಲ್ಲಿ ನಡೆದ ಘಟನೆ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?
Stabbed by young men from other communities! What did SP Mithun Kumar say about the incident in Shikaripura?

Shivamogga | Feb 7, 2024 | ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಯುವಕನೊಬ್ಬನಿಗೆ ಚಾಕುವಿನಿಂದ ಇರಿಯಲಾಗಿದೆ. ನಿನ್ನೆ ಶಿಕಾರಿಪುರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಯುವಕ ಗಾಯಗೊಂಡಿದ್ದು, ಆತನನ್ನ ಶಿವಮೊಗ್ಗದ ಖಾಸಗಿ ಆಸತ್ರೆಗೆ ದಾಖಲಿಸಲಾಗಿದೆ. ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಚಾಕುವಿನಿಂದ ಇರಿದ ಯುವಕರು ಅನ್ಯಕೋಮಿನವರು ಎನ್ನಲಾಗಿದೆ. 

ಇನ್ನೂ ಸುಶೀಲ್ ಎಂಬ 23 ವರ್ಷದ ಯುವಕ ಘಟನೆಯಲ್ಲಿ ಗಾಯಗೊಂಡಿದ್ದಾರೆ.  ರ್ಯಾಶ್​ ಡ್ರೈವಿಂಗ್ ಮಾಡುತ್ತಿರುವುದನ್ನ ಪ್ರಶ್ನಿಸಿದ್ದಕ್ಕೆ ಈ ರೀತಿಯ ಘಟನೆಯಾಗಿದೆ ಎಂದು ಎಸ್​ಪಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ವಾಟ್ಸ್ಯಾಪ್ ಮೆಸೇಜ್ ರವಾನೆ ಮಾಡಿದ್ದಾರೆ.  

ಶಿಕಾರಿಪುರ ತಾಲ್ಲೂಕು  ಶಿಕಾರಿಪುರ ಪಟ್ಟಣದ ದೊಡ್ಡಪೇಟೆ ಮುಖ್ಯರಸ್ತೆಯ ವಿಠ್ಠಲ ದೇವಸ್ಥಾನದ ಬಳಿ ಘಟನೆ ನಡೆದಿದೆ. ಬೈಕ್​ ರ್ಯಾಶ್ ಡ್ರೈವಿಂಗ್ ಮಾಡಬೇಡ ಎಂದು ಯುವಕನೊಬ್ಬನಿಗೆ ಸುಶೀಲ್ ಹೇಳಿದ್ದಾನೆ. ಆತನ ತನ್ನ ಸಹೋದರರನ್ನ ಕರೆದುಕೊಂಡು ಬಂದು ಸುಶೀಲ್ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಚಾಕುವಿನಿಂದ ಇರಿಯಲಾಗಿದೆ. 

ಇನ್ನೂ ಘಟನೆ ಬೆನ್ನಲ್ಲೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಾಹಿತಿ ನೀಡಿರುವ ಎಸ್​ಪಿ ಮಿಥುನ್ ಕುಮಾರ್  ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ರ್ಯಾಶ್​ ಡ್ರೈವಿಂಗ್ ಪ್ರಶ್ನಿಸಿದ್ದಕ್ಕೆ ಈ ಘಟನೆ ನಡೆದಿದೆ ಎಂದು ಗೊತ್ತಾಗಿದೆ. ಈ ವಿಚಾರವಾಗಿ ಇಬ್ಬರನ್ನ ಬಂಧಿಸಲಾಗಿದೆ ಈ ಸಂಬಂಧ ತನಿಖೆ ಮುಂದುವರಿದಿದೆ ಎಂದಿದ್ದಾರೆ