ಶಿಕಾರಿಪುರದಲ್ಲಿ ಕೆಎಸ್​ ಈಶ್ವರಪ್ಪರವರ ಬೈಕ್ ಱಲಿ! ದಾಖಲಾಯ್ತು ನೀತಿ ಸಂಹಿತೆ ಉಲ್ಲಂಘನೆ ಕೇಸ್

KS Eshwarappa's bike rally in Shikaripura Case of violation of model code of conduct registered

ಶಿಕಾರಿಪುರದಲ್ಲಿ ಕೆಎಸ್​ ಈಶ್ವರಪ್ಪರವರ ಬೈಕ್  ಱಲಿ! ದಾಖಲಾಯ್ತು ನೀತಿ ಸಂಹಿತೆ ಉಲ್ಲಂಘನೆ ಕೇಸ್
KS Eshwarappa

Shivamogga  Mar 27, 2024  ಶಿವಮೊಗ್ಗ ಲೋಕಸಭಾ ಚುನಾವಣಾ ಕಣದಲ್ಲಿ ಪ್ರಚಾರ ಅಬ್ಬರ ಪಡೆದುಕೊಳ್ಳುತ್ತಿರುವಂತೆಯೇ ಅತ್ತ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯು ಹೆಚ್ಚುತ್ತಿದೆ. ಈ ಸಂಬಂಧ  ಶಿಕಾರಿಪುರ ಟೌನ್‌ ಪೊಲೀಸ್‌ ಸ್ಟೇಷನ್‌ ನಲ್ಲಿ ಚುನಾವಣಾ ಅಧಿಕಾರಿಯೊಬ್ಬರು ದೂರು ನೀಡಿದ್ದು, ಅದರ ಆಧಾರದ ಮೇಲೆ ಕೇಸ್‌ ದಾಖಲಾಗಿದೆ. 

ಕಳೆದ 24 ನೇ ತಾರೀಖು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕುನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಚುನಾವಣಾ ಪ್ರಚಾರ ನಡೆಸಿದ್ದರು. ಈ ವೇಳೆ ಬೈಕ್‌ ಱಲಿ ನಡೆಸಲಾಗಿತ್ತು. ಸದ್ಯ ಈ ಱಲಿಯಲ್ಲಿ ಅನುಮತಿಗಿಂತಲೂ ಹೆಚ್ಚು ಬೈಕ್​ಗಳನ್ನ ಬಳಸಿಕೊಂಡ ವಿಚಾರದಲ್ಲಿ ಕೇಸ್ ದಾಖಲಾಗಿದೆ. 

: REPRESENTATION OF PEOPLE ACT, 1951 & 1988 (U/s-123(3)) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ರಾಜು ಎಂಬವರ ವಿರುದ್ಧ ಎಫ್ಐಆರ್ ಆಗಿದೆ. ಈ ಬಗ್ಗೆ ಚುನಾವಣಾ ಅಧಿಕಾರಿ ಮಧು ಎಂಪಿ ಎಂಬವರು ದೂರು ನೀಡಿದ್ದಾರೆ. 

ದೂರಿನ ವಿವರವನ್ನು ನೋಡುವುದಾದರೆ, ಶಿಕಾರಿಪುರ ಪಟ್ಟಣದಲ್ಲಿ ಕೆ.ಎಸ್.ಈಶ್ವರಪ್ಪನವರ ಪರವಾಗಿ ಬೈಕ್ ಱಲಿ  ಚುನಾವಣಾ ಪ್ರಚಾರ ನಡೆಸುವ ಪ್ರಯುಕ್ತ ರಾಜು ಜಿ ರವರು ಶಿಕಾರಿಪುರ ಸಹಾಯಕ ಚುನಾವಣಾಧಿಕಾರಿಗಳೀಂದ 10 ಬೈಕ್ ಮತ್ತು 01 ಜೀಪ್​ಗೆ ಅನುಮತಿ ಪಡೆದಿದ್ದರು. 

ಆದರೆ ರಾಜು ಜಿ ರವರು 50 ಕ್ಕಿಂತ ಹೆಚ್ಚು ಬೈಕು ಮತ್ತು 04 ಕಾರುಗಳನ್ನು ಬಳಸಿ ಎಂ.ಸಿ.ಸಿ ಕಾನೂನು ಉಲ್ಲಂಘನೆ ಮಾಡಿರುತ್ತಾರೆ ಎಂದು ಆರೋಪಿಸಿದ್ದಾರೆ. 

ಅಲ್ಲದೆ  ಮತ್ತು ಬೈಕಗಳ ಮೇಲೆ ಓಂ  ಎಂಬ ಸಂಕೇತದ ಬಾವುಟಗಳನ್ನು ಕಟ್ಟಿಕೊಂಡು ಱಲಿ ಮಾಡಿ ಎಂ.ಸಿ.ಸಿ ಕಾನೂನು ಉಲ್ಲಂಘನೆ ಮಾಡಿರುತ್ತಾರೆಂದು ದೂರಲಾಗಿದೆ. 

ಈ ಸಂಬಂಧ ಕೋರ್ಟ್ ಮೂಲಕ ಅನುಮತಿ ಪಡೆದು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಶಿಕಾರಿಪುರ ಟೌನ್ ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್ ದಾಖಲಾಗಿದೆ