ಎಚ್ಚರಿಕೆ ! ಸಿಕ್ಕ ಸಿಕ್ಕ ಮದ್ಯವನ್ನು ಕುಡಿಯಬೇಡಿ! ಏಕೆ ಗೊತ್ತಾ? ಇಲ್ಲಿದೆ ಕಾರಣ!

Excise department instructs people to stay away from spurious liquor/illicit liquor

ಎಚ್ಚರಿಕೆ ! ಸಿಕ್ಕ ಸಿಕ್ಕ ಮದ್ಯವನ್ನು ಕುಡಿಯಬೇಡಿ! ಏಕೆ ಗೊತ್ತಾ? ಇಲ್ಲಿದೆ ಕಾರಣ!
Excise department ,illicit liquor

Shivamogga  Mar 27, 2024  Excise department ,illicit liquor ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಅಲ್ಲದೆ ಈ ಸಂಬಂಧ ಅಬಕಾರಿ ಇಲಾಖೆ ಮಹತ್ವದ ಸೂಚನೆಯನ್ನ ನೀಡಿದೆ. ಅದರಲ್ಲಿ ಅಕ್ರಮ ಮದ್ಯವನ್ನು ಸೇವಿಸಬೇಡಿ ಎಂದು ಎಚ್ಚರಿಸಿದೆ. 

ನಕಲಿ ಮದ್ಯ/ಕಳ್ಳಭಟ್ಟಿ ಸಾರಾಯಿಯಿಂದ ದೂರವಿರುವಂತೆ ಅಬಕಾರಿ ಇಲಾಖೆಯಿಂದ ಸೂಚನೆ

ಲೋಕ ಸಭಾ ಚುನಾವಣೆ 2024ರ ಸಂದರ್ಭದಲ್ಲಿ ಸರ್ಕಾರದಿಂದ ಅದಿಕೃತವಾಗಿ  ಪರವಾನಿಗೆ ಪಡೆದ ಮದ್ಯವನ್ನಲ್ಲದೇ ಯಾವ ಕಾರಣಕ್ಕೂ ನಕಲಿ ಮದ್ಯ ಹಾಗೂ ಕಳ್ಳಭಟ್ಟಿ ಸಾರಾಯಿಗಳನ್ನು ಉಪಯೋಗಿಸಿ ಪ್ರಾಣಕ್ಕೆ ಅಪಾಯ ತಂದು ಕೊಳ್ಳಬಾರದೆಂದು ಶಿವಮೊಗ್ಗ ಜಿಲ್ಲಾ ಅಬಕಾರಿ ಇಲಾಖೆಯು ತಿಳಿಸಿದೆ. 

ಅಪರಿಚಿತರು ನೀಡುವ ಮದ್ಯವನ್ನು ಹಾಗೂ ಅನಧಿಕೃತ ಸ್ಥಳಗಳಲ್ಲಿ ದೊರೆಯುವ ಮದ್ಯ ಉಪಯೋಗಿಸಬಾರದು ಹಾಗೂ ಜಿಲ್ಲೆಯಲ್ಲಿ ಯಾವುದೇ ಅಕ್ರಮವಾಗಿ ಮದ್ಯ ದಾಸ್ತನು / ಸಾಗಣಿಕೆ/ಮಾರಾಟ/ ಹಂಚಿಕೆ ಇಂತಹ ಅಕ್ರಮಗಳು ಕಂಡುಬಂದಲ್ಲಿ ಶಿವಮೊಗ್ಗ ಜಿಲ್ಲೆ ಕಂಟ್ರೋಲ್ ರೂಂ ಸಂಖ್ಯೆ 18004254480 ಕ್ಕೆ ಮಾಹಿತಿ ನೀಡುವಂತೆ  ಅಬಕಾರಿ ಇಲಾಖೆಯ ಡೆಪ್ಯೂಟಿ ಕಮೀಷನರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.́

ಹೆಚ್ಚಿನ ಮಾಹಿತಿಗಾಗಿ ಅಬಕಾರಿ ಉಪ ಅಧೀಕ್ಷಕರು, ಶಿವಮೊಗ್ಗ ಉಪ ವಿಭಾಗ -ಶಿವಮೊಗ್ಗ ಮತ್ತು ಭದ್ರಾವತಿ – 9449597129, ಅಬಕಾರಿ  ನಿರೀಕ್ಷಕರು, ಶಿವಮೊಗ್ಗ ವಲಯ ನಂ.1 -7619343858, ಅಬಕಾರಿ  ನಿರೀಕ್ಷಕರು, ಶಿವಮೊಗ್ಗ ವಲಯ ನಂ.2 -9448977659, ಅಬಕಾರಿ  ನಿರೀಕ್ಷಕರು ಭದ್ರಾವತಿ ವಲಯ - 9964005536, ಅಬಕಾರಿ ಉಪ ಅಧೀಕ್ಷಕರು, ಸಾಗರ ಉಪ ವಿಭಾಗ- ಸಾಗರ/ಶಿಕಾರಿಪುರ/ಸೊರಬ-9449597128, ಅಬಕಾರಿ  ನಿರೀಕ್ಷಕರು, ಶಿಕಾರಿಪುರ ವಲಯ- 9901320012, ಅಬಕಾರಿ  ನಿರೀಕ್ಷಕರು, ಸಾಗರ ವಲಯ - 8971723845, ಅಬಕಾರಿ  ನಿರೀಕ್ಷಕರು, ಸೊರಬ ವಲಯ - 7760005106, ಅಬಕಾರಿ ಉಪ ಅಧೀಕ್ಷಕರು, ತೀರ್ಥಹಳ್ಳಿ ಉಪ ವಿಭಾಗ- ತೀರ್ಥಹಳ್ಳಿ ಮತ್ತು ಹೊಸನಗರ-9611322327, ಅಬಕಾರಿ  ನಿರೀಕ್ಷಕರು, ತೀರ್ಥಹಳ್ಳಿ ವಲಯ- 7619343858, ಅಬಕಾರಿ  ನಿರೀಕ್ಷಕರು, ಹೊಸನಗರ ವಲಯ- 6362549913, ಅಬಕಾರಿ ನಿರೀಕ್ಷಕರು, ಅಬಕಾರಿ ಉಪ ಆಯುಕ್ತರ ಕಚೇರಿ, ಶಿವಮೊಗ್ಗ – 9449597134 ಇವರುಗಳನ್ನು ಸಂಪರ್ಕಿಸುವುದು.