ಸೆಪ್ಟೆಂಬರ್ 13 ಮತ್ತು 15 ರಂದು ಶಿವಮೊಗ್ಗದ ಈ ಪ್ರದೇಶಗಳಲ್ಲಿ ವಿದ್ಯುತ್ ಇರೋದಿಲ್ಲ! ಮೆಸ್ಕಾಂ ಪ್ರಕಟಣೆ

There is no electricity in these areas of Shimoga for two days! MESCOM ಎರಡು ದಿನ ಶಿವಮೊಗ್ಗದ ಈ ಪ್ರದೇಶಗಳಲ್ಲಿ ವಿದ್ಯುತ್ ಇರೋದಿಲ್ಲ! ಮೆಸ್ಕಾಂ ಪ್ರಕಟಣೆ

ಸೆಪ್ಟೆಂಬರ್ 13 ಮತ್ತು 15 ರಂದು ಶಿವಮೊಗ್ಗದ ಈ ಪ್ರದೇಶಗಳಲ್ಲಿ ವಿದ್ಯುತ್ ಇರೋದಿಲ್ಲ! ಮೆಸ್ಕಾಂ ಪ್ರಕಟಣೆ

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS

ಸೆ.13 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ ತಾಲೂಕು ಹೊಳೆಹೊನ್ನೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಕೆಳಕಂಡ ಗ್ರಾಮಗಳಲ್ಲಿ ಸೆ.13 ರ ಬೆಳಗ್ಗೆ 10 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಕೂಡ್ಲಿ, ಚಿಕ್ಕೂಡ್ಲಿ, ಭದ್ರಾಪುರ, ಕಾಟಿಕೆರೆ, ವೆಂಕಟಾಪುರ, ಬುಕ್ಲಾಪುರ, ಹೊಳೆಬೆಳಗಲು, ಸಕ್ರೇಬೈಲು, ಮಲ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ನಾಳೆ ಕೆಲವೆಡೆ ವಿದ್ಯುತ್ ವ್ಯತ್ಯಯ; ಸಹಕರಿಸಲು ಮನವಿ

ಶಿವಮೊಗ್ಗ ತಾಲೂಕು ತ್ಯಾವರೆಚಟ್ನಹಳ್ಳಿ ವಿವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ಸೆ.13 ರ ಬೆಳಗ್ಗೆ 9.30 ರಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಕುವೆಂಪುನಗರ, ಎನ್.ಇ.ಎಸ್. ಬಡಾವಣೆ, ಶಿವಬಸವನಗರ, ವೀರಭದ್ರೇಶ್ವರ ಬಡಾವಣೆ, ಇಂದಿರಾಗಾಂಧಿ ಬಡಾವಣೆ, ಜ್ಯೋತಿನಗರ, ಜೆ.ಎನ್.ಎನ್.ಸಿ. ಕಾಲೇಜು, ಪರ್ಫೆಕ್ಟ್ ಅಲಾಯನ್ಸ್ ಫ್ಯಾಕ್ಟರಿ, ರೆಡ್ಡಿ ಬಡಾವಣೆ, ಬೊಮ್ಮನಕಟ್ಟೆ ಎ ರಿಮದ ಹೆಚ್ ಬ್ಲಾಕ್‍ವರೆಗೆ, ಹಳೆ ಬೊಮ್ಮನಕಟ್ಟೆ, ವಿನಾಯಕ ಬಡಾವಣೆ, ದೇವಂಗಿ 2ನೇ ಹಂತದ ಬಡಾವಣೆ, ಶಾಂತಿನಗರ, ಹೊನ್ನಾಳಿ ರಸ್ತೆ, ತ್ಯಾವರೆಚಟ್ನಹಳ್ಳಿ, ಯು.ಜಿ.ಡಿ., ಶೇಷಾದ್ರಿಪುರಂ, ಲಕ್ಷ್ಮೀ ವೆಂಕಟೇಶ್ವರ ಸಾ ಮಿಲ್, ತ್ರೀಮೂರ್ತಿ ನಗರ, ನವುಲೆ, ಅಶ್ವತ್‍ನಗರ, ಎಲ್.ಬಿ.ಎಸ್. ನಗರ, ಕೀರ್ತಿನಗರ, ಬಸವೇಶ್ವರ ನಗರ, ಕೃಷಿನಗರ, ತರಳಬಾಳು ಬಡಾವಣೆ, ಸೇವಾಲಾಲ್‍ನಗರ, ಡಾಲರ್ಸ್ ಕಾಲೋನಿ, ಪವನ ಶ್ರೀ ಬಡಾವಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ

ಸೆ.15 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ ತಾಲೂಕು ಮಾಚೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಾಹಕ ಬದಲಾವಣೆ ಮತ್ತು ಮಧ್ಯಂತರ ಕಂಬಗಳನ್ನು ಅಳವಡಿಸುವ  ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಕೆಳಕಂಡ ಗ್ರಾಮಗಳಲ್ಲಿ ಸೆ.15 ರ ಬೆಳಗ್ಗೆ 11 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

 ಗುಡ್ರಕೊಪ್ಪ, ಅಮರಾವತಿ ಕ್ಯಾಂಪ್, ಶೆಟ್ಟಿಹಳ್ಳಿ, ಹಳೇಶೆಟ್ಟಿಹಳ್ಳಿ, ನವುಲೆಬಸಾಪುರ, ಹೊನ್ನವಿಲೆ, ಮತ್ತಿಘಟ್ಟ, ಹಾಥಿಕಟ್ಟೆ, ಮಾಳೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.


ಇನ್ನಷ್ಟು ಸುದ್ದಿಗಳು