KARNATAKA NEWS/ ONLINE / Malenadu today/ Nov 9, 2023 SHIVAMOGGA NEWS
Shivamogga | ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಗಳನ್ನು ಫಲಾನುಭವಿಗಳಿಗೆ ಆಧಾರ್ ಆಧಾರಿತ ನೇರ ಹಣ ಸಂದಾಯ (ಡಿಬಿಟಿ) ಯೋಜನೆ ಮೂಲಕ ಪಾವತಿಸಲು ಕಡ್ಡಾಯವಾಗಿ ಫಲಾನುಭವಿಗಳ ಬ್ಯಾಂಕ್/ಅಂಚೆ ಇಲಾಖೆಯ ಉಳಿತಾಯ ಖಾತೆಗೆ ಎನ್‍ಪಿಸಿಐ ಲಿಂಕ್ ಮಾಡಬೇಕಾಗಿರುತ್ತದೆ.
ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿಗಳಾದ ವೃದ್ದಾಪ್ಯ ಯೋಜನೆ, ವಿಧವಾ ಯೋಜನೆ, ಅಂಗವಿಕಲ ಯೋಜನೆ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ ಯೋಜನೆ, ಮೈತ್ರಿ ಯೋಜನೆಗಳ ಮಾಸಿಕ ಪಿಂಚಣಿಯನ್ನು ಡಿಬಿಟಿ ಮೂಲಕ ಪಾವತಿಸಲು ಸರ್ಕಾರ ನಿರ್ಧರಿಸಿರುತ್ತದೆ. ಪ್ರಯುಕ್ತ ಬ್ಯಾಂಕ್/ಅಂಚೆ ಖಾತೆಗೆ ಎನ್‍ಪಿಸಿಐ ಲಿಂಕ್ ಆಗದ ಫಲಾನುಭವಿಗಳ ಪಟ್ಟಿಯು ಆಧಾರ್ ಗ್ರಾಮ ಆಡಳಿತಾಧಿಕಾರಿ(ವಿಎ) ಕಚೇರಿಯಲ್ಲಿರುತ್ತದೆ. ಈ ಸಂಬಂಧ
ಫಲಾನುಭವಿಗಳು ವಿಎ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಲು ತಿಳಿಸಿದೆ.
ಒಂದು ವೇಳೆ ನಿಮ್ಮೆ ಖಾತೆಯು ಎನ್‍ಪಿಸಿಐ ಲಿಂಕ್ ಆಗದಿದ್ದಲ್ಲಿ ಕೂಡಲೇ ತಮ್ಮ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಪಾಸ್ ಪುಸ್ತಕದೊಂದಿಗೆ ಸಂಬಂಧಿಸಿದ ಬ್ಯಾಂಕ್/ಅಂಚೆ ಇಲಾಖೆಗೆ ನವೆಂಬರ್ ಮಾಹೆಯ ಅಂತ್ಯದೊಳಗೆ ಭೇಟಿ ನೀಡಿ ಎನ್‍ಪಿಸಿಐ ಮ್ಯಾಪಿಂಗ್ ಮಾಡಿಸಲು ಕ್ರಮ ವಹಿಸುವಂತೆ ತಿಳಿಸಿದೆ. ನವೆಂಬರ್ ಮಾಹೆಯ ಅಂತ್ಯದೊಳಗೆ ಎನ್‍ಪಿಸಿಐ ಲಿಂಕ್ ಮಾಡದಿದ್ದಲ್ಲಿ ಪಿಂಚಣಿಯನ್ನು ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಡಾ.ಸೆಲ್ವಮಣಿ ಆರ್ ತಿಳಿಸಿದ್ದಾರೆ.
READ : ಚಿಕ್ಕಮ್ಮನ ಕುತ್ತಿಗೆ ಬಿಗಿದು ಮಾಂಗಲ್ಯ ಕದ್ದಿದ್ದ ಆರೋಪಿ! 24 ಗಂಟೆಯಲ್ಲಿ ಅರೆಸ್ಟ್ !
ಇಷ್ಟಕ್ಕೂ ಎನ್‍ಪಿಸಿಐ ಅಂದರೆ ಏನು?
NCPI ಎಂದರೇ National Payments Corporation of India ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಎಂದು ಅರ್ಥ. ದೇಶದಲ್ಲಿ ಆಧಾರ್ ಆಧರಿಸಿ ಆನ್ಲೈನ್ ಪೇಮೆಂಟ್ ಮಾಡುವ ವಿಧಾನಕ್ಕೆ ಇದು ಅವಕಾಶ ಮಾಡಿಕೊಡುತ್ತದೆ. ಯುಪಿಐ ಮೂಲಕ ಪೇಮೆಂಟ್ ಮಾಡಲು ಈ ಸಿಸ್ಟಮ್ ಅಗತ್ಯವಾಗಿದೆ. ಕೇಂದ್ರ ಅಥವಾ ರಾಜ್ಯಸರ್ಕಾರದ ವಿವಿಧ ಯೋಜನೆಗಳ ಅನುಧಾನವನ್ನು ಈ ಸಿಸ್ಟಮ್ ಮೂಲಕ ಗ್ರಾಹಕರ ಅಕೌಂಟ್ಗಳಿಗೆ ನೇರವಾಗಿ ಪಾವತಿಸಲಾಗುತ್ತದೆ.
ಏನಿದು ಎನ್‍ಪಿಸಿಐ ಲಿಂಕ್ ?
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಈ ವ್ಯವಸ್ಥೆಯಲ್ಲಿ ಪೇಮೆಂಟ್ ಪಡೆಯಲು ಮಾಡಬೇಕಾದ ಮೊದಲ ಕೆಲಸವಾಗಿದೆ.
ಉಳಿತಾಯ ಖಾತೆಯ ಅಕೌಂಟ್ಗೆ ಗ್ರಾಹಕರು ಆಧಾರ್ ದಾಖಲೆ ಸಲ್ಲಿಸಿ, ಅವರ ಆಧಾರ್ ಸಂಖ್ಯೆಯೊಂದಿಗೆ ಅಕೌಂಟ್ ಮಾಡಲಾಗುತ್ತದೆ.
ಇದಾದ ಬಳಿಕ ಇದು ಗ್ರಾಹಕರು ಸಲ್ಲಿಸಿದ ಲಿಖಿತ ಒಪ್ಪಿಗೆಯ ಆಧಾರದ ಮೇಲೆ (ಕೋರ್ ಬ್ಯಾಂಕಿಂಗ್‌ನಲ್ಲಿನ ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿದ ನಂತರ) NPCI ಮ್ಯಾಪರ್ ಅನ್ನು ನವೀಕರಿಸುವ ಪ್ರಕ್ರಿಯೆ ಆರಂಭವಾಗುತ್ತದೆ.
ಗ್ರಾಹಕರು ತಮ್ಮ ಬ್ಯಾಂಕ್ ಶಾಖೆಗೆ ಹೋಗಿ ಬ್ಯಾಂಕ್ ಅಕೌಂಟ್ ಸೀಡಿಂಗ್ ಮಾಡಬೇಕು ಎನ್ನುತ್ತಾರೆ. ಅಂದರೆ ಅದಾಗಲೇ ಆಧಾರ್ ನೊಂದಿಗೆ ಲಿಂಕ್ ಆಗಿರುವ ಅಕೌಂಟ್ನ್ನ ಎನ್ಪಿಸಿಐಗೆ ಲಿಂಕ್ ಅಥವಾ ಮ್ಯಾಪ್ ಮಾಡಬೇಕಾಗುತ್ತದೆ. ಅದಕ್ಕಾಗಿ ಗ್ರಾಹಕರು ಬ್ಯಾಂಕ್ನವರಿಗೆ ಒಪ್ಪಿಗೆ ಸೂಚಿಸಬೇಕು. ಸಹಿ ಮಾಡಿ ಒಪ್ಪಿಗೆ ಸೂಚಿಸದರೆ NPCI ಮ್ಯಾಪಿಂಗ್ ಆಗುತ್ತದೆ. ಹೀಗೆ ಮಾಡಿದ್ದಲ್ಲಿ ಒಂದರೆಡು ದಿನಗಳಲ್ಲಿ ಸೀಡಿಂಗ್ ಆಗುತ್ತದೆ. ಬಳಿಕ ನಿಮ್ಮ ಅಕೌಂಟ್ಗೆ ಸರ್ಕಾರದ ಯೋಜನೆಗಳ ಹಣವೂ ನೇರವಾಗಿ ಪೇಮೆಂಟ್ ಆಗುತ್ತದೆ
