ಶಿವಮೊಗ್ಗದಷ್ಟೆ ಸ್ಪಾರ್ಟ್​ ಆಗಿದೆ ಆ ದಂಧೆ! ಸಿಟಿಯಲ್ಲಿ ಹೇಗೆ ನಡೆಯುತ್ತಿದೆ ಗೊತ್ತಾ ಹೈಟೆಕ್​ ವಹಿವಾಟು!

Do you know how high-tech prostitution is going on in Shivamogga city?

ಶಿವಮೊಗ್ಗದಷ್ಟೆ ಸ್ಪಾರ್ಟ್​ ಆಗಿದೆ  ಆ ದಂಧೆ! ಸಿಟಿಯಲ್ಲಿ ಹೇಗೆ ನಡೆಯುತ್ತಿದೆ ಗೊತ್ತಾ ಹೈಟೆಕ್​ ವಹಿವಾಟು!

KARNATAKA NEWS/ ONLINE / Malenadu today/ May 25, 2023 SHIVAMOGGA NEWS

ಕೇವಲ ಸ್ಪಾ ಗಳಷ್ಟೆ ಅಲ್ಲಾ...ಶಿವಮೊಗ್ಗ ಹೊರವಲಯದ ದೊಡ್ಡ ಮನೆಗಳಲ್ಲಿ ನಡೆಯುತ್ತಿದೆ ಹೈಟೆಕ್ ವೇಶ್ಯವಾಟಿಕೆ ದಂಧೆ. ಇದಕ್ಕೆಂದೆ ಮೀಸಲಿರುವ ಆ್ಯಪ್​ನ್ನ ಓಪನ್​ ಮಾಡಿದರೆ, ಶಿವಮೊಗ್ಗದಲ್ಲಿನ ಮೋಹಿನಿ ವಹಿವಾಟಿನ ದರ್ಶನವಾಗುತ್ತದೆ. ಅಲ್ಲದೆ ಈ ಆ್ಯಪ್  ಶಿವಮೊಗ್ಗದ ಹೈಟೆಕ್ ದಂಧೆ ಹೇಗಿದೆ ಅಂತಾ ಹೇಳುತ್ತೆ. 

ಎಸ್​ಪಿ ಗೆ ಥ್ಯಾಂಕ್ಸ್​! 

ಬಹಳ ವರ್ಷಗಳ ನಂತರ ಶಿವಮೊಗ್ಗದಲ್ಲಿ ಹೈಟೆಕ್ ಪ್ರಾಸ್ಟಿಟ್ಯೂಷನ್ ದಂಧೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಇಂತ ದಿಟ್ಟ ಕ್ರಮಕ್ಕೆ ಮುಂದಾಗಿರುವ ಎಸ್ಪಿ ಮಿಥುನ್ ಕುಮಾರ್​ರಿಗೆ ಒಂದು ಹ್ಯಾಟ್ಸಾಪ್ ಹೇಳಲೇ ಬೇಕು. ಬೇರೆ ಊರುಗಳಿಂದ ಯುವತಿಯರನ್ನು ಕರೆಸಿ ಶಿವಮೊಗ್ಗ ಹೊರವಲಯದ ದೊಡ್ಡ ದೊಡ್ಡ ಮನೆಗಳಲ್ಲಿ ಹಾಗು ಮಸಾಜ್ ಸೆಂಟರ್ ಗಳಲ್ಲಿ ದಂಧೆ ನಡೆಸುವ ಜಾಲ ಶಿವಮೊಗ್ಗದಲ್ಲಿ ಸಕ್ರೀಯವಾಗಿದೆ ಎನ್ನುವುದಕ್ಕೆ ನಿನ್ನೆಯ ಪೊಲೀಸ್ ರೇಡ್ ಸಾಕ್ಷಿಯಾಗಿದೆ. 

ಶಿವಮೊಗ್ಗದಷ್ಟೆ ಸ್ಮಾರ್ಟ್ ಆಯ್ತು ವಹಿವಾಟು!

ಶಿವಮೊಗ್ಗ ಸ್ಮಾರ್ಟ್ ಆದಂತೆ, ವೇಶ್ಯಾವಾಡಿಕೆ ದಂಧೆ ಕೂಡ ಸ್ಮಾರ್ಟ್ ಆಗಿದೆ,  ಈ ಅಕ್ರಮದಲ್ಲಿ ಬಳಕೆಯಾಗುವ ಯುವತಿಯರನ್ನ  ಎಸ್ಕಾರ್ಟ್ ಮಾಡುವವರ ಫೋನ್ ನಂಬರ್ ಗಳು  ಸಾಮಾಜಿಕ ಜಾಲತಾಣದಲ್ಲಿ  ಆ್ಯಪ್ ಗಳಲ್ಲಿ ಬಹಿರಂಗವಾಗಿ ನಮೂದಿಸಲಾಗಿದೆ.  

ಸಿಟಿ ಔಟ್​ಲೆಟ್​ ನಲ್ಲಿ ನಡೆಯುತ್ತೆ ನಿರಾತಂಕ

ಶಿವಮೊಗ್ಗದ ಹೊರವಲಯದಲ್ಲಿರುವ ಕೆಲವು ಲೇಔಟ್ ಗಳಲ್ಲಿ ದೊಡ್ಡ ಮನೆಗಳನ್ನು ಬಾಡಿಗೆ ಪಡೆದಿರೋ ದಂಧೆಕೋರರು, ಒಳಗಡೆ ಅಡಿಯಿಂದ ಮುಡಿಯುವರೆಗೂ ಕೇಳಿದ ಸೇವೆಗಳನ್ನ ಒದಗಿಸುತ್ತಿದ್ದಾರೆ. ಹೊರಜಗತ್ತಿಗೆ  ಈ ವಹಿವಾಟು ಗೊತ್ತಾಗುವ ಸನ್ನಿವೇಶಗಳೇ ಇಲ್ಲಿರೋದಿಲ್ಲ. ಏಕೆಂದರೆ, ಇಲ್ಲಿಯ ಪ್ರತಿ ವ್ಯವಹಾರಗಳು ಆ್ಯಪ್​ಗಳಲ್ಲಿ ನಡೆಯುತ್ತಿರುತ್ತವೆ. 

ವಿಷಯ ಗೊತ್ತಾದರೂ ಇಲ್ಲಾ ಟೆನ್ಶನ್​

ಹಾಗೊಂದು ವೇಳೆ ಅಕ್ಕಪಕ್ಕ ವಿಷಯ ಗೊತ್ತಾಗಿ, ವಿಷಯ ಸೀರಿಯಸ್ ಆಗುವರೆಗೂ ದಂಧೇ ಆರಾಮಾಗಿ ನಡೆಯುತ್ತಿರುತ್ತದೆ. ಅನಿವಾರ್ಯ ಎದುರಾದರೇ, ಇನ್ನೊಂದು ಮನೆಗೆ ವಹಿವಾಟು ಶಿಫ್ಟ್ ಆಗುತ್ತದೆ. ಪೊಲೀಸ್ ಇಲಾಖೆಗೆ ಈ ವ್ಯವಸ್ಥೆ ಬಗ್ಗೆ ಗೊತ್ತಿಲ್ಲವೆಂದಲ್ಲ.  ಎಸ್ಕಾರ್ಟ್​ ಸರ್ವೀಸ್​ ಹೆಸರಿನಲ್ಲಿ ನಡೆಯುವ ಹೈಟೆಕ್​ ವೇಶ್ಯಾವಾಟಿಕೆಯನ್ನು ಸುಲಭವಾಗಿ ಮುಟ್ಟುವುದು ಪೊಲೀಸರಿಗೆ ಸುಲಭದ ಕೆಲಸವಲ್ಲ. ಚೂರು ಯಾಮಾರಿದರೂ, ಪೊಲೀಸರೇ ತಪ್ಪಿತಸ್ತರಾಗುವ ಅಪಾಯವಿರುತ್ತದೆ. 

ಹೈಟೆಕ್​ …..ಮನಸ್ಸುಗಳು

ಹಿಂದೆ ಶಿವಮೊಗ್ಗದ ನೆಹರು ರೋಡ್ , ಬಿಎಚ್ ರೋಡ್​ಗಳಲ್ಲಿ ಹೊಟ್ಟೆ ಪಾಡಿಗೆ ಈ ದಂಧೆಗಿಳಿದವರು ಕಾಣ ಸಿಗುತ್ತಿದ್ದರು. ಆದರೆ ಈಗೀಗ ದಂಧೆ ಫ್ಯಾಶನ್ ಆಗಿದೆ. ಸುಲಭದ ಮನಿ ಮೇಕಿಂಗ್ ಬ್ಯುಸಿನೆಸ್ ಆಗಿದೆ. ದುಡ್ಡಿನ ಆಸೆ ತೋರಿಸಿ ಎಂತಹ ವಯಸ್ಸಿನವರನ್ನಾದರೂ ಈ ಕೃತ್ಯಕ್ಕೆ ಇಳಿಸುವ ಪ್ರಯತ್ನ ನಡೆಯುತ್ತಿದೆ. ಬಡತನ, ಆಸೆ ಮತ್ತು ದುಡ್ಡಿನ ತಾಕತ್ತಿಗೆ ಮಣಿಯುವ ಮನಸ್ಸುಗಳು, ಈ ವಹಿವಾಟಿನ ಒಂದಷ್ಟು ದಿನದ ಪಾತ್ರಗಳಾಗುತ್ತವೆ. ಆನಂತರ, ಯಾರಿಗೂ ತಿಳಿಯದಂತೆ ತಮ್ಮೂರಿಗೆ ಹೋಗಿ, ಬದುಕಿನ ದಾರಿ ನೋಡಿಕೊಳ್ಳುತ್ತಿವೆ. 

ಗ್ರಾಹಕನಿಗೂ ಇಲ್ಲ ಭಯ

ಇನ್ನೂ ಈ ವಹಿವಾಟಿನಲ್ಲಿ ಗ್ರಾಹಕನಿಗೂ ಸಹ ಭಯವಿಲ್ಲದಂತಾಗಿದೆ. ಏಕೆಂದರೆ, ವ್ಯಕ್ತಿಯೊಬ್ಬ ತನ್ನಗಿಷ್ಟ ಬಂದ ಇಂತಹ ಉದ್ದೇಶಗಳಿಗೆ ಅತಿಹೆಚ್ಚು ಬಳಕೆಯಾಗು ಎಲ್​ ಹೆಸರಿನಿಂದ ಆರಂಭವಾಗುವ ಆ್ಯಪ್​ವೊಂದನ್ನ ಬಳಸುತ್ತಾನೆ. ಇಲ್ಲವೇ ಸಿಂಪಲ್ ಆಗಿ ತನಗೆ ಸಿಕ್ಕ ನಂಬರ್​ನ ವಾಟ್ಸ್ಯಾಪ್​ನಲ್ಲಿ ಚಾಟ್ ಆರಂಭಿಸುತ್ತಾನೆ. ತನಗೆ ಬೇಕಾದ ಫೋಟೋವನ್ನು ನೋಡಿ, ರೇಟು ಚೌಕಾಸಿ ಮುಗಿಸಿ, ಪ್ರೋಗ್ರಾಮ್​ ನಿಕ್ಕಿಗೊಳಿಸುತ್ತಾನೆ. ಆನಂತರದ್ದು ಸಹ ಸಲೀಸು ಸುಗಮದ ದಾರಿ. ಹೀಗಾಗಿ ಗ್ರಾಹಕನಿಗೂ ಪೊಲೀಸರ ಕೈಗೆ ಸಿಕ್ಕಿಬೀಳುವ ಭಯವಿಲ್ಲದಂತಾಗಿದೆ. 

ಪೊಲೀಸರಿಗೆ ಕಾನೂನಿನ ತೊಡಕು

ವೇಶ್ಯವಾಟಿಕೆಯಲ್ಲಿ ಈ ಹಿಂದೆ ದಂಧೆಯಲ್ಲಿ ತೊಡಗಿಸಿಕೊಳ್ಳುವ ಯುವತಿ ಹಾಗು ದಂಧೆ ನಡೆಸುವ ಯಜಮಾನ ಇಬ್ಬರ ವಿರುದ್ಧವೂ ಕೇಸ್ ದಾಖಲಾಗುತ್ತಿತ್ತು. ದಂಧೆಗೆ ಬರುವ ಯುವತಿಯರ ಪರಿಸ್ಥಿತಿಯನ್ನು ಅರಿತೇ ಕಾನೂನಿನಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಈಗ ವೇಶ್ಯವಾಟಿಕೆ ದಂಧೆ ನಡೆಸುವ ಮಾಲೀಕನ ವಿರುದ್ಧವಷ್ಟೆ ಕೇಸ್ ದಾಖಲಾಗುತ್ತದೆ ಹೊರತು ದಾಳಿ ವೇಳೆ ಸಿಕ್ಕಿಬೀಳುವ ಯುವತಿಯರನ್ನು ಸಂತ್ರಸ್ಥರೆಂದೇ ಪರಿಗಣಿಸಬೇಕಾಗುತ್ತದೆ. . 

ಇನ್ನು ಕೆಲವೆಡೆ ದಾಳಿ ಮಾಡಿದ ಸಂದರ್ಭದಲ್ಲಿ ಯುವಕ ಯುವತಿ ಒಟ್ಟಿಗೆ ಸಿಕ್ಕಿಬಿದ್ದು,ಅದು ದಂಧೆಯಾಗಿದ್ರೂ,ಪೊಲೀಸರು ಆ ಸಂದರ್ಭದಲ್ಲಿ ಏನೂ ಮಾಡಲು ಸಾಧ್ಯವಾಗೋದಿಲ್ಲ. ಒಪ್ಪಿತ ಸಂಬಂಧ ಎಂಬ ಕಾನೂನು ಪದ, ಪೊಲೀಸರನ್ನು ಕಟ್ಟಿ ಹಾಕುತ್ತದೆ. ಹೀಗಾಗಿ ಎಲ್ಲೆಡೆ ವೇಶ್ಯವಾಟಿಕೆ ಮಗ್ಗಲು ಮುರಿಯಲು ಕಾನೂನು ಕಾಯ್ದೆಗಳು ಪೊಲೀಸರಿಗೆ ಕೆಲವೊಮ್ಮೆ ತೊಡಕಾಗಿ ಪರಿಣಮಿಸುತ್ತದೆ.

ಕೆಲವು ಆಯ್ದ ಮಸಾಜ್ ಸೆಂಟರ್ ಗಳಲ್ಲಿ ಹೊರರಾಜ್ಯ ಗಳ ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರನ್ನು ಮಸಾಜ್ ಕೆಲಸಗಳಿಗೆ ಕರೆಸಿಕೊಂಡು, ಸ್ಪಾ ಮಾಲೀಕರು ಬೇರೆಯದ್ದೆ ದಂಧೆ ಮಾಡ್ತಿದ್ದಾರೆ ಎಂಬ ದೂರುಗಳು ಮೊದಲಿನಿಂದಲೂ ಇವೆ.  ಆದ್ರೆ ಪೊಲೀಸರು ಅದ್ಯಾಕೋ ದಾಳಿ ಮಾಡುವ ಮನಸ್ಸು ಮಾಡಿರಲಿಲ್ಲ. ಆದ್ರೆ ಈ ಬಾರಿ ಹೈಟೆಕ್ ದಂಧೆಯ ಮೇಲೆ ಪೊಲೀಸರು ಕಣ್ಣು ನೆಟ್ಟಿರುವುದರಿಂದ ವ್ಯವಸ್ಥೆಯಲ್ಲಿ ಬದಲಾಗಬಹುದು ಎಂಬ ಆಶಾಭಾವ ಜನರಲ್ಲಿ ಮೂಡಿದೆ. ಕಾರ್ಯಾಚರಣೆಯ ವಿಚಾರದಲ್ಲಿ ಹಲವು ಚರ್ಚೆಗಳು ನಡೆಯುತ್ತಿವೆಯಾದರೂ,  ಎಸ್ಪಿ ಮಿಥುನ್ ಕುಮಾರ್ ಇಂತಹ ಕಾರ್ಯಚರಣೆ ನಡೆಸಿರುವುದು ಶಿವಮೊಗ್ಗದಲ್ಲಿ ದಂಧೆಯಲ್ಲಿ ಸಕ್ರೀಯವಾಗಿರುವ ಇನ್ನುಳಿದ ಎಸ್ಕಾರ್ಟ್ ಗಳಿಗೆ ಬಿಗ್ ಶಾಕ್ ನೀಡಿದಂತಾಗಿದೆ.