TODAY BIG EXCLUSIVE : ಶಿವಮೊಗ್ಗದ ಹೊಸನಗರಕ್ಕೆ ಎನ್​ಐಎ ಟೀಂ ಬಂದಿದ್ದೇಕೆ? ಕೇರಳ ಪೊಲೀಸರು ಪಡೆದ ಮಾಹಿತಿ ಏನು?

TODAY BIG EXCLUSIVE : ಶಿವಮೊಗ್ಗದ ಹೊಸನಗರಕ್ಕೆ ಎನ್​ಐಎ ಟೀಂ ಬಂದಿದ್ದೇಕೆ? ನಕ್ಸಲ್​ ಟೀಂ ‘ಕಲೆಕ್ಷನ್​’ ಇನ್ನೂ ನಡೆಯುತ್ತಿದ್ಯಾ? ಈಗೆಲ್ಲಿ ಌಕ್ಟೀವ್​ ಆಗಿದ್ದಾರೆ ಕೆಂಪು ಉಗ್ರರು!

TODAY BIG EXCLUSIVE : ಶಿವಮೊಗ್ಗದ ಹೊಸನಗರಕ್ಕೆ ಎನ್​ಐಎ ಟೀಂ ಬಂದಿದ್ದೇಕೆ? ಕೇರಳ ಪೊಲೀಸರು ಪಡೆದ ಮಾಹಿತಿ ಏನು?
Shivamogga Naxal news

TODAY BIG EXCLUSIVE :Malenadu today story / SHIVAMOGGA  ಶಿವಮೊಗ್ಗದ ಹೊಸನಗರಕ್ಕೆ ಎನ್​ಐಎ ಟೀಂ ಬಂದಿದ್ದೇಕೆ? ನಕ್ಸಲ್​ ಟೀಂ ‘ಕಲೆಕ್ಷನ್​’ ಇನ್ನೂ ನಡೆಯುತ್ತಿದ್ಯಾ? ಈಗೆಲ್ಲಿ ಌಕ್ಟೀವ್​ ಆಗಿದ್ದಾರೆ ಕೆಂಪು ಉಗ್ರರು! Shivamogga Naxal news

ಕೇರಳದ ಮಲ್ಲಾಪುರಂನ ಎಡಕ್ಕಾರಾ ಪೊಲೀಸ್​ ಠಾಣೆಯಲ್ಲಿ (2017) ನೀಲಂಬರ್​ ಫಾರೆಸ್ಟ್​ನಲ್ಲಿ ನಕ್ಸಲ್​ ಧ್ವಜವನ್ನು ಹಾರಿಸಿ ಸಭೆಯನ್ನು ನಡೆಸಿದ್ದರ ಸಂಬಂಧ ಎಫ್​ಐಆರ್​ ದಾಖಲಾಗಿರುತ್ತೆ. ಈ ಎಫ್ಐಆರ್​ನಲ್ಲಿ ಕೇರಳ ಪೊಲೀಸರು ಕಾಳಿದಾಸ, ಕೃಷ್ಣಾ, ರಾಜೇಶ್​ ಚಿಟ್ಟಿಲಪಿಲ್ಲಿ, ದೀನೇಶ್​ ಹಾಗೂ ರಾಜೀವನ್ ವಿರುದ್ಧ 2021 ರ ಮೇನಲ್ಲಿ ಜಾರ್ಜ್​ಶೀಟ್ ಹಾಕಿದ್ದರು.

ಬಳಿಕ ಈ ಪ್ರಕರಣವನ್ನು ಎನ್​ಐಎ ಕೈಗೆತ್ತಿಕೊಂಡಿತ್ತು. ಅಂದು ನಡೆದಿದ್ದ ಸಭೆಯಲ್ಲಿ ವಿಕ್ರಂಗೌಡ ಸೇರಿದಂತೆ ಇನ್ನೂ 20 ಮಂದಿ ಪಾಲ್ಗೊಂಡಿದ್ದರು ಎನ್ನುವ ಸಂಬಂಧ ರಾಷ್ಟ್ರೀಯ ತನಿಖಾ ತಂಡ ಎನ್​ಕ್ವೈರಿ ನಡೆಸುತ್ತಿದೆ. ಇದೇ ಕಾರಣಕ್ಕೆ ತಮಿಳುನಾಡಿನ ಕೊಯಮತ್ತೂರು, ಥೇಣಿ, ರಾಮನಾಥಪುರಂ, ಸೇಲಂ, ಕನ್ಯಾಕುಮಾರಿ, ಕೃಷ್ಣಗಿರಿ ಜಿಲ್ಲೆಗಳಲ್ಲಿ ಕೇರಳದ ವಯನಾಡ್, ತ್ರಿಶೂರ್ ಮತ್ತು ಕಣ್ಣೂರಿನಲ್ಲಿ ದಾಳಿ ನಡೆಸಿ ತನಿಖೆ ನಡೆಸಿದ್ದಾರೆ ಎನ್ನುವ ಮಾಹಿತಿ ಸ್ಪಷ್ಟವಾಗಿದೆ. ಇದರ ಜೊತೆಯಲ್ಲಿ ಕರ್ನಾಟಕದಲ್ಲಿ ಚಿಕ್ಕಮಗಳೂರು,ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳಲ್ಲಿಯು ಎನ್​ಐಎ ತಂಡ ಪರಿಶೀಲನೆ ನಡೆಸಿದ್ದಾಗಿ ಸ್ವತಃ ಎನ್​ಐಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಆದಾಗ್ಯು ಇಲ್ಲಿ ಎನ್​ಐಎ ತಂಡದ ಪರಿಶೀಲನೆಗೆ ಇನ್ನಷ್ಟು ಕಾರಣಗಳಿವೆ ಎನ್ನಲಾಗುತ್ತಿದೆ. ಮುಖ್ಯವಾಗಿ ಕೇರಳ ಪೊಲೀಸರು ನಡೆಸಿದ ಎನ್​ಕೌಂಟರ್​ಗಳಲ್ಲಿ ಸಿಕ್ಕ ದಾಖಲೆಗಳು ಎನ್​ಐಎ ಪರಿಶೀಲನೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಕೇರಳದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಮೂರಕ್ಕೂ ಹೆಚ್ಚು ಎನ್​ಕೌಂಟರ್​ಗಳು ನಡೆದಿದ್ದರ ಬಗ್ಗೆ ವರದಿಯಾಗಿತ್ತು.

ವೇಲುಮುರಗನ್​, ಜಲೀಲ್​ ಹಾಗೂ 2019 ರಲ್ಲಿ ಚಿಕ್ಕಮಗಳೂರು ಮೂಲದವರು ಎನ್ನಲಾದ ಮೂವರ ಎನ್​ಕೌಂಟರ್ ನಡೆದಿತ್ತು. ಇದರ ನಡುವೆ ಕರ್ನಾಟಕ, ತಮಿಳುನಾಡು, ಕೇರಳ ಬಾರ್ಡರ್​ಗಳು ಕೂಡಿಕೊಳ್ಳುವಂತಹ ಪ್ರದೇಶದಲ್ಲಿ ನಕ್ಸಲರು ಕೇರಳದ ಌಂಟಿ ನಕ್ಸಲ್​ ಟೀಂ ಥಂಡರ್​ ಬೋಲ್ಟ್​ಗೆ ಎದುರಾಗಿದ್ದ ಬಗ್ಗೆ ಹಲವು ವರದಿಗಳಾಗಿದ್ದವು. ಈ ಪೈಕಿ ವಯನಾಡು ಜಿಲ್ಲೆಯ ಕಲಾಪೆಟ್ಟ ಪ್ರದೇಶದಲ್ಲಿ ನಡೆದಿದ್ದ ಜಲೀಲ್​ ಎನ್ಕೌಂಟರ್​ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈತನ ಬಳಿ ಸಿಕ್ಕ ದಾಖಲೆಗಳನ್ನು ಆಧರಿಸಿ ಕೇರಳ ಪೊಲೀಸರು ಒಂದಷ್ಟು ತನಿಖೆ ನಡೆಸಿದ್ದರು.

ಮಲೆಯಾಳಿ ಆಕ್ಟಿವಿಸ್ಟ್ ಜಲೀಲ್​ ಹಾಗೂ ತಮಿಳುನಾಡಿನ ನಕ್ಸಲ್​ ವೇಲುಮುರುಗನ್​ ಎನ್​ಕೌಂಟರ್​ ನ ಸಂದರ್ಭದಲ್ಲಿ ಕೇರಳ ಪೊಲೀಸರಿಗೆ ಸಾಕಷ್ಟು ಸಪೋರ್ಟಿಂಗ್​ ಡಾಕ್ಯುಮೆಂಟ್​ಗಳು ಸಿಕ್ಕಿದ್ದವು. ಅಲ್ಲದೆ ಕೇರಳ ಮಲ್ಲಾಪುರಂ ವೈನಾಡು ಮತ್ತು ಪಲಕ್ಕಾಡ್​ ಜಿಲ್ಲೆಗಳಲ್ಲಿ ನಕ್ಸಲ್​ ಚಟುವಟಿಕೆ ತೀವ್ರವಾಗಿದ್ದು, ಕರ್ನಾಟಕ ಹಾಗೂ ತಮಿಳುನಾಡು ಮೂಲದ ನಕ್ಸಲರು ಕಾರ್ಯಾಚರಣೆ ತೊಡಗಿದ್ದಾರೆ ಎಂದಿತ್ತು.

ನಕ್ಸಲ್​ ಪ್ಯಾಕೇಜ್​ ಘೋಷಣೆ ಮಾಡಿದ ಬೆನ್ನಲ್ಲೆ , ಅಲ್ಲಿನ ಥಂಡರ್ ಬೋಲ್ಟ್​ ತಂಡ ಎನ್​ಕೌಂಟರ್​ನಲ್ಲಿ ಆರಕ್ಕೂ ಹೆಚ್ಚು ಮಂದಿಯನ್ನ ಗನ್​ಡೌನ್​ ಮಾಡಿತ್ತು. ಇವೆಲ್ಲದರ ನಡುವೆ ಬನ್ಸೂರ ಕಾಡುಗಳಲ್ಲಿ ನಕ್ಸಲ್​ ಮೂಮೆಂಟ್​ ಇರುವ ಬಗ್ಗೆ ಇವತ್ತಿಗೂ ಅಲ್ಲಿಯ ಸ್ಥಳೀಯ ಸುದ್ದಿವಾಹಿನಿಗಳು ವರದಿ ಮಾಡುತ್ತಿವೆ.

ನಕ್ಸಲ್​ ನಿರ್ನಾಮಕ್ಕೆ ಸೂಚನೆ ಕೊಟ್ಟಿದ್ದು ಅಮಿತ್ ಶಾ/ ಮೇಲುಸಂಕಕ್ಕೆ ಬಂದಿದ್ದು ಯಾರು?

ಈ ಎಲ್ಲಾ ಮಾಹಿತಿ ನಡುವೆ ಕೇಂದ್ರ ಗೃಹಸಚಿವ ಅಮಿತ್ ಶಾ ಕಳೆದ ಸೆಪ್ಟೆಂಬರ್​ನಲ್ಲಿ ನಕ್ಸಲ್​ ಪೀಡಿತ ರಾಜ್ಯಗಳ ಸಭೆ ನಡೆಸಿ ಕೆಂಪು ಉಗ್ರರನ್ನ ಹತ್ತಿಕ್ಕುವ ಸಂಬಂಧ ಒಂದು ವರ್ಷದ ಡೆಡ್​ಲೈನ್​ ನೀಡಿದ್ದರು. ಸದ್ಯ ಎನ್​ಐಎ ನಡೆಸುತ್ತಿರುವ ದಾಳಿ ಹಾಗೂ ಪರಿಶೀಲನೆಗಳು ಗೃಹಸಚಿವರ ಸೂಚನೆಗೆ ಪೂರಕವಾದ ಕಾರ್ಯಾಚರಣೆ ಎನ್ನಲಾಗುತ್ತಿದೆ.

ಇದಿಷ್ಟು ಬ್ಯಾಕ್​ಅಪ್​ ವಿಚಾರವಾದರೆ, ಇನ್ನೂ ಕರ್ನಾಟಕದಲ್ಲಿ ಅದರಲ್ಲೂ ಪ್ರಮುಖವಾಗಿ ಶಿವಮೊಗ್ಗದಲ್ಲಿ ಎನ್​ಐಎ ಟೀಂ ಎಲ್ಲಿಗೆ ಭೇಟಿಕೊಟ್ಟು ಪರಿಶೀಲನೆ/ದಾಳಿ ನಡೆಸಿತ್ತು ಎನ್ನುವುದು ಸ್ಥಳೀಯ ಪೊಲೀಸ್​ ಇಲಾಖೆಗೂ ಸ್ಪಷ್ಟಮಾಹಿತಿಯಿಲ್ಲ. ಆಯ್ದ ಮೂಲಗಳ ಪ್ರಕಾರ, ಕೇರಳ ಪೊಲೀಸರು ಮೇಲುಸಂಕಕ್ಕೆ ಬಂದುಹೋಗಿದ್ದರ ಬಗ್ಗೆ ಮಾಹಿತಿ ಸಿಕ್ಕಿದೆ.

ಇನ್ನೂ ಎನ್​ಐಎ ಟೀಂ ಬಂದು ಹೋಗಿರುವುದು ಮೇಲುಸಂಕಕ್ಕೆ ಎನ್ನಲಾಗುತ್ತಿದೆ. ಬಂಧಿತ ಕೆಲ ನಕ್ಸಲರ ವಿಚಾರವಾಗಿ ಕೇರಳ ಪೊಲೀಸ್​ ಹಾಗೂ ಎನ್​ಐಎ ತಂಡ ಮಾಹಿತಿ ಪಡೆದಿದೆ ಎನ್ನಲಾಗುತ್ತಿದೆ. ಇದಲ್ಲದೆ ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿಯೂ ಎನ್​ಐಎ ತಂಡ ಭೇಟಿಕೊಟ್ಟಿದ್ದು, ವಿಕ್ರಂಗೌಡ ಸೇರಿದಂತೆ ಹಲವರ ಬಗ್ಗೆ ಮಾಹಿತಿ ಪಡೆದುಕೊಂಡು, ಮೊಬೈಲ್​ ಫೋನ್​, ಸಿಮ್​ಕಾರ್ಡ್​, ಮಾನಿಫ್ಯಾಸ್ಟೋ, ಬುಕ್ಸ್​ ಮತ್ತು ಕೆಲವೊಂದು ಅನುಮಾನಸ್ಥದ ವಸ್ತುಗಳನ್ನ ವಶಕ್ಕೆ ಪಡೆದುಕೊಂಡು ಹೋಗಿದೆ.

ಕೇರಳ ಬಾರ್ಡರ್​ನಲ್ಲಿ ನಕ್ಸಲ್​ ಮೂಮೆಂಟ್​/ ಚಿಕ್ಕಮಗಳೂರಿನಲ್ಲಿ ನಡಿತಿದ್ಯಾ ಕಲೆಕ್ಷನ್​ ?

‘ಈ ಮಧ್ಯೆ ಮಲೆನಾಡಿಗೆ ಹೊಂದಿಕೊಂಡಿರುವ ಪಶ್ಚಿಮಘಟ್ಟದಲ್ಲಿ ನಕ್ಸಲ್​ ಚಟುವಟಿಕೆ ಕ್ಷೀಣವಾಗಿದೆ. ಆದರೆ ಕಳೆದ ಮೂರು ನಾಲ್ಕು ವರ್ಷಗಳಿಂದ ಈ ಚಟುವಟಿಕೆ ಮೂರು ರಾಜ್ಯಗಳನ್ನು ಕೂಡಿಕೊಳ್ಳುವ ಅರಣ್ಯ ಪ್ರದೇಶದಲ್ಲಿ ಸಕ್ರಿಯವಾಗಿದೆ ಎನ್ನುತ್ತಿದೆ ಪೊಲೀಸ್ ಮೂಲಗಳು. ಈ ಕಾರಣಕ್ಕೆ ಮಡಿಕೇರಿ, ಚಾಮರಾಜನಗರ, ಗುಂಡ್ಲುಪೇಟೆ, ಮೈಸೂರಿನಲ್ಲಿ ಎಎನ್​ಎಫ್​ ಸ್ಕ್ಯಾಡ್​ಗಳು ಬೀಡುಬಿಟ್ಟಿವೆ. ಇಷ್ಟೆ ಅಲ್ಲದೆ ನಕ್ಸಲ್​ ಮೂಲಗಳು, ಕಾಫಿನಾಡಿನ ಕೆಲ ಆಯ್ದ ಸ್ಥಳ ಹಾಗೂ ಆಯ್ದ ವ್ಯಕ್ತಿಗಳ ಬಳಿ, ಕಲೆಕ್ಷನ್​ಗಾಗಿ ಬಂದು ಹೋಗುತ್ತಿದ್ದಾರೆ ಎನ್ನುವುದು ಪೊಲೀಸ್​ ಮೂಲಗಳಿಗೆ ತಿಳಿದುಬಂದಿದೆ.