ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ತಾನ | GOOGLE ರೂಟ್ ಮ್ಯಾಪ್​ ಬದಲಾಗುತ್ತಾ?| ಬೆಂಗಳೂರಿಗರಿಗೆ ದಾರಿ ತಪ್ತಿದ್ಯಾ?

Sri Sigandur Choudeshwari Devasthan, Shimoga District, Sigandur, Anandpur, Holebagilu Kalasavalli, Sigandur, Shimogga-Hosanagar, Nittoor, ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ತಾನ, ಶಿವಮೊಗ್ಗ ಜಿಲ್ಲೆ, ಸಿಗಂದೂರು, ಆನಂದಪುರ, ಹೊಳೆಬಾಗಿಲು ಕಳಸವಳ್ಳಿ, ಸಿಗಂದೂರು, ಶಿವಮೊಗ್ಗ-ಹೊಸನಗರ, ನಿಟ್ಟೂರು

ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ತಾನ | GOOGLE ರೂಟ್ ಮ್ಯಾಪ್​ ಬದಲಾಗುತ್ತಾ?| ಬೆಂಗಳೂರಿಗರಿಗೆ ದಾರಿ ತಪ್ತಿದ್ಯಾ?

KARNATAKA NEWS/ ONLINE / Malenadu today/ Oct 30, 2023 SHIVAMOGGA NEWS

HOSANAGARA|  ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ  (siganduru chowdeshwari temple ) ಹೋಗಲು ಎರಡು ಮಾರ್ಗಗಳಿವೆ ಒಂದು ಮಾರ್ಗ ಶಿವಮೊಗ್ಗ-ಹೊಸನಗರ ನಗರ-ನಿಟ್ಟೂರು-ಸಿಗಂದೂರು. ಇನ್ನೊಂದು ಮಾರ್ಗ ಶಿವಮೊಗ್ಗ-ಆನಂದಪುರ-ಸಾಗರ ಕಳಸವಳ್ಳಿ ಹೊಳೆಬಾಗಿಲು ಸಿಗಂದೂರು ಮಾರ್ಗ. ಮೊದಲನೆಯದ್ದು ರಸ್ತೆಮಾರ್ಗವಾದರೆ, ಎರಡನೆಯ ರಸ್ತೆ ಮಾರ್ಗದಲ್ಲಿ ಹೊಳೆಯನ್ನು ಲಾಂಜ್​ ಮೂಲಕ ದಾಟುವ ಪ್ರಮೇಯ ಬರುತ್ತದೆ. ಆದಾಗ್ಯು ಈ ಮಾರ್ಗದಲ್ಲಿಯೇ ಅತಿಹೆಚ್ಚು ವಾಹನಗಳ ಸಂಚಾರ ಕಾಣ ಸಿಗುತ್ತದೆ. 

ಈ ಮಧ್ಯೆ ಮಳೆಯಿಲ್ಲದೇ ಶರಾವತಿ ಹಿನ್ನೀರಿನಲ್ಲಿ ನೀರು ಇಲ್ಲ. ಇರುವ ನೀರು ಕಡಿಮೆಯಾದರೆ, ಆ ಮಾರ್ಗ ಬಂದ್ ಆಗುತ್ತದೆ. ಹಾಗಾಗಿ ಗೂಗಲ್​ನಲ್ಲಿ ತೋರಿಸುತ್ತಿರುವ ಪ್ರಸ್ತುತ ರೂಟ್ ಮ್ಯಾಪ್ ಬದಲಾಗಬೇಕು ಎಂದು ಹೊಸನಗರ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಸುಧಾಕರ್ ಎಂಬವರು ಆಗ್ರಹಿಸಿದ್ದಾರೆ. 




READ : ಇಸ್ರೇಲ್​ನಿಂದ ಮಧು ಬಂಗಾರಪ್ಪರಿಗೆ ವಿಡಿಯೋ ಕಾಲ್ | ಶಿವಮೊಗ್ಗದ ವ್ಯಕ್ತಿಗೆ ಸಚಿವರ ಸಹಾಯ!

 

ಶ್ರೀ ದೇವಿ ಸಿಗಂದೂರು ದೇವಸ್ತಾನಕ್ಕೆ ಹೊಸನಗರದಿಂದ 78ಕಿ.ಮೀಟರ್ ರಸ್ತೆ ಮಾರ್ಗವಿದ್ದು, ಬೆಂಗಳೂರು -ಶಿವಮೊಗ್ಗ- ಹೊಸ ನಗರ-ನಗರ ನಿಟ್ಟೂರು ಮಾರ್ಗದ ಮೂಲಕ ದೇವಸ್ತಾನಕ್ಕೆ ಹೋಗಬಹುದಾಗಿದೆ. ಅಲ್ಲದೆ ಎಲ್ಲಿಯೂ ಹೊಳೆ ದಾಟುವ ಪ್ರಮೇಯವಿಲ್ಲ. ಆದರೆ ಗೂಗಲ್ ಮ್ಯಾಪ್‌ನಲ್ಲಿ ಬೆಂಗಳೂರು ಶಿವಮೊಗ್ಗ ಆನಂದಪುರ ಮಾರ್ಗ ವಾಗಿ ಕಳಸವಳ್ಳಿ ಹೊಳೆಬಾಗಿಲು ಮಾರ್ಗ ತೋರಿಸಿದೆ.

ಈ ವರ್ಷ ಬರಗಾಲ ಹಾಗೂ ಹೊಳೆಬಾಗಿಲು ಸೇತುವೆಯಲ್ಲಿ ನೀರು ಇಲ್ಲದ ಕಾರಣ ಲಾಂಚ್‌ಗಳು ಸರಿಯಾದ ಸಮಯಕ್ಕೆ ಸಿಗದೇ ಇರುವುದರಿಂದ ಹೊಳೆಬಾಗಿಲಿಗೆ ಹೋದ ಪ್ರಯಾಣಿಕರು ಮುನ: ಹೊಸನಗರಕ್ಕೆ ಬಂದು ಹಳೆಯ ದಾರಿಯಲ್ಲಿ ಸಿಗಂದೂರಿಗೆ ಹೋಗುವಂತಾಗಿದೆ. ಈ  ಮೂಲಕ ಗೂಗಲ್​ ಮ್ಯಾಪ್ ದಾರಿತಪ್ಪಿಸುತ್ತಿದೆ ಎಂದವರು ಆರೋಪಿಸಿದ್ದಾರೆ. ಅಲ್ಲದೆ ಇದು ಬದಲಾಗಬೇಕು ಎಂದು ಒತ್ತಾಯಿಸಿದ್ದಾರೆ