Shivamogga today news | ಸಾಗರ ಕೋಳಿಪಡೆ, ಶಿವಮೊಗ್ಗ ಒಸಿ, ಇಸ್ಪೀಟು ರೇಡ್​ | ಆಯನೂರುನಲ್ಲಿ ಅಪಘಾತ | ದೊಡ್ಡಪೇಟೆಯಲ್ಲಿ ಕಳ್ಳತನ

Shivamogga today news | Sagar Kolipade, Shivamogga OC, Card Raid | Accident in Ayanur | Theft in Doddapet

Shivamogga today news |  ಸಾಗರ ಕೋಳಿಪಡೆ, ಶಿವಮೊಗ್ಗ ಒಸಿ, ಇಸ್ಪೀಟು ರೇಡ್​ |  ಆಯನೂರುನಲ್ಲಿ ಅಪಘಾತ | ದೊಡ್ಡಪೇಟೆಯಲ್ಲಿ ಕಳ್ಳತನ
Shivamogga today news

Shivamogga Feb 14, 2024 |  ಶಿವಮೊಗ್ಗ ಜಿಲ್ಲೆಯ ವಿವಿದೆಡೆ ಪೊಲೀಸರು ದಾಳಿ ನಡೆಸಿ ಕೋಳಿಪಡೆ ,  ಓಸಿ ಹಾಗೂ ಜೂಜಾಟವನ್ನ ಬಂದ್  ಮಾಡಿಸಿದ್ದಾರೆ. ಅಲ್ಲದೆ ಈ ಸಂಬಂಧ ಕೇಸ್ ಸಹ ದಾಖಲಿಸಿದ್ದಾರೆ. 

ಸಾಗರದಲ್ಲಿ ಕೋಳಿಪಡೆ

  1) Sagar Rural PS  Cr NO:0029/2024  KARNATAKA POLICE ACT, 1963 (U/s-87)

ಸಾಗರ ತಾಲ್ಲೂಕು ಚಿಕ್ಕಮತ್ತೂರು ಗ್ರಾಮದ ಸರ್ಕಾರಿ ಅರಣ್ಯ ಪ್ರದೇಶದೊಳಗಿನ 6-7 ಜನರು ಕಾನೂನು ಬಾಹಿರವಾಗಿ ಕೋಳಿ ಪಡೆ ಜೂಜಾಟ ನಡೆಸುತ್ತಿರುವ ಮಾಹಿತಿಯನ್ನ ಆದರಿಸಿ ಸಾಗರ ಗ್ರಾಮಾಂತರ ಪೊಲೀಸರು ರೇಡ್​ ನಡೆಸಿದ್ದಾರೆ. ಅಲ್ಲದೆ ಈ ಸಂಬಂಧ ಕೆಪಿ ಆ್ಯಕ್ಟ್​  (U/s-87) ಕೇಸ್​ ದಾಖಲಿಸಿದ್ದಾರೆ 

ದೇವರ ಹುಂಡಿಯಲ್ಲಿ ಕಳ್ಳತನ

 

2) Shikaripura Town PS Cr NO:0031/2024 U/s-380,457 IPC

ಇತ್ತ ಶಿಕಾರಿಪುರ ಪೇಟೆಯ ದೊಡ್ಡಪೇಟೆಯಲ್ಲಿರುವ ವಿಠ್ಠಲ ರುಕುಮಾಯಿ ದೇವಸ್ಥಾನದ ಒಳಗಿನ ಸ್ಟೀಲಿನ ಕಾಣಿಕೆ ಡಬ್ಬಿಯ ಬೀಗ ಮುರಿದು ಸುಮಾರು10 ರಿಂದ 15 ಸಾವಿರ ರೂ ಕಾಣಿಕೆ ಹಣವನ್ನು ಕಳ್ಳತನ  ಮಾಡಲಾಗಿದೆ. ಈ ಸಂಬಂಧ ಶಿಕಾರಿಪುರ ಟೌನ್ ಪೊಲೀಸ್ ಸ್ಟೇಷನ್​ನಲ್ಲಿ ಪ್ರಕರಣ ಸಹ ದಾಖಲಾಗಿದೆ.  

ಆಯನೂರು ಬಸ್​ಸ್ಟ್ಯಾಂಡ್ ಬಳಿ ಅಪಘಾತ

 

3) Kumsi PS Cr NO:0037/2024 U/s-279,337 IPC

ಇನ್ನೂ ಕುಂಸಿ ಪೊಲೀಸ್ ಸ್ಠೇಷನ್​ ವ್ಯಾಪ್ತಿಯಲ್ಲಿ  ಆಯನೂರು ಬಸ್ಟಾಂಡ್ ಹತ್ತಿರ ಬೈಕ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಬೈಕ್ ಸವಾರ ಗಾಯಗೊಂಡಿದ್ದು ಅವರಿಗೆ  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಘಟನೆ ಸಂಬಂಧ  ಕಾರ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೇಸ್ ನೀಡಲಾಗಿದೆ. 

ಓಸಿ ಜೂಜಾಟ ಆಡಿಸ್ತಿದ್ದವರು ಅರೆಸ್ಟ್ 

 

4) Tunga Nagar PS  Cr NO:0056/2024  KARNATAKA POLICE ACT, 1963 (U/s-78(3))

ತುಂಗಾನಗರ ಪೊಲೀಸ್ ಸ್ಟೇಷನ್  ಪಿಎಸ್​ಐ ನೇತೃತ್ವದಲ್ಲಿ ದಾಳಿ ನಡೆಸಿ ಶಿವಮೊಗ್ಗ ನಗರ ಗೋಪಾಲಗೌಡ ಬಡಾವಣೆ  ಬಿಎಸ್ಎನ್ಎಲ್  ಕಛೇರಿ ಬಳಿ  ಖಾಲಿ ಸಾರ್ವಜನಿಕ ಸ್ಥಳದಲ್ಲಿ  ಓಸಿ ಜೂಜಾಟ ಆಡಿಸ್ತಿದ್ದವರನ್ನ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ  ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿದ್ದಾರೆ. 

ದೊಡ್ಡಪೇಟೆ ಪೊಲೀಸ್ ಸ್ಟೇಷನ್

 

5) Doddapete PS  Cr NO:0060/2024  KARNATAKA POLICE ACT, 1963 (U/s-78(3))

ಇತ್ತ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಲ್ಲಿ ಬಿ ಹೆಚ್ ರಸ್ತೆ, ಪಂಚವಟಿ ಕಾಲೋನಿ ಕ್ರಾಸ್ ನಲ್ಲಿರುವ ಲಾರಿ ಆಪೀಸ್ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣವನ್ನು ಕಟ್ಟಿಸಿಕೊಳ್ಳುತ್ತ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿ ಆದರೆ ಪಿಎಸ್​ಐ ನೇತೃತ್ವದಲ್ಲಿ ರೇಡ್​ ನಡೆಸಲಾಗಿದೆ. ಈ ಸಂಬಂಧ ಪ್ರಕರಣವೂ ದಾಖಲಾಗಿದೆ.