KARNATAKA NEWS/ ONLINE / Malenadu today/ Aug 4, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಾಳೂರು ಠಾಣಾ ವ್ಯಾಪ್ತಿಯಲ್ಲಿ ಇತ್ತಿಚೆಗೆ ಕಾಡಿನ ಪರಿಸರದಲ್ಲಿ ಅಂಕದ ಕೋಳಿಯ ಜೂಜು ನಡೆಯುತ್ತಿತ್ತು. ಈ ಜೂಜು ಅಡ್ಡೆ ಮೇಲೆ ಮಾಹಿತಿದಾರ ನೀಡಿದ್ದ ಮಾಹಿತಿ ಆಧರಿಸಿ ಪೊಲೀಸರು ರೇಡ್ ಮಾಡಿದ್ದರು. ಆದರೆ ರೇಡ್ನ ನಂತರ ಅಂಕದ ಕೋಳಿ ಲೆಕ್ಕದ ಬಗ್ಗೆ ಜನರಲ್ಲಿ ಜೋರು ಚರ್ಚೆ ನಡೆಯುತ್ತಿದೆ.
ಪೊಲೀಸರು ನಡೆಸಿದ್ರು ರೇಡ್!
ಆಗಸ್ಟ್ 1 ರಂದು ಗುತ್ತಿಯಡೆಹಳ್ಳಿ ಸಮೀಪದ ಹಳ್ಳಿಬೈಲ್ ಪ್ಲಾಂಟೇಷನ್ ಬಳಿಯಲ್ಲಿ ಕೋಳಿಪಡೆ ನಡೆಯುತ್ತಿದೆ ಎಂಬ ಮಾಹಿತಿ ಮಾಳೂರು ಪೊಲೀಸರಿಗೆ ಸಿಕ್ಕಿತ್ತು. ತಕ್ಷಣ ದಾಳಿ ನಡೆಸಿದ್ದ ಪೊಲೀಸರು, : ನಾಲ್ಕು ಕೋಳಿ, ಅದರ ಕಾಲಿನ ಕತ್ತಿ ಹಾಗೂ 12020 ಕ್ಯಾಶ್ ಜಪ್ತಿ ಮಾಡಿ, KARNATAKA POLICE ACT, 1963 (U/s-87) ಅಡಿಯಲ್ಲಿ 9 ಮಂದಿ ವಿರುದ್ಧ ಎಫ್ಐಆರ್ ಮಾಡಿದ್ದಾರೆ.
ಅಂಕದ ಕೋಳಿಯ ಲೆಕ್ಕ-ಪಕ್ಕ?
ಆದರೆ, ಕೋಳಿ ಅಂಕದಲ್ಲಿದ್ದವರು ಹೇಳುವ ಪ್ರಕಾರ, ಅಂದು ಜೂಜಿನಲ್ಲಿ ಹತ್ತರಿಂದ ಹದಿನೈದು ಸಾವಿರ ಬೆಲೆ ಬಾಳುವ ಅಂಕದ ಕೋಳಿಗಳನ್ನು ಸ್ಪರ್ದೆಗಿಳಿಸಲಾಗಿತ್ತು. ಮೇಲಾಗಿ ಲಕ್ಷಗಟ್ಟಲೇ ಹಣವನ್ನು ಬಾಜಿಗೆ ಇಡಲಾಗಿತ್ತು. ಪೊಲೀಸ್ ರೇಡ್ನಲ್ಲಿ ಸುಮಾರು 25 ಕ್ಕೂ ಹೆಚ್ಚು ಕೋಳಿಗಳು ಕೂಡ ಠಾಣೆಯ ಮೆಟ್ಟಲೇರಿದವು. ಅಲ್ಲದೆ ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ಕೂಡ ಪೊಲೀಸರು ಜಪ್ತು ಮಾಡಿ ಸ್ಟೇಷನ್ಗೆ ತೆಗೆದುಕೊಂಡು ಹೋಗಿದ್ದರಂತೆ. ಸದ್ಯ ದಾಖಲಾಗಿರುವ ಕೇಸಿನ ಲೆಕ್ಕಕ್ಕೂ, ಅಂಕದ ಲೆಕ್ಕಕ್ಕೂ ಸಮ ಸಮ ಆಗದೆ, ದುಬಾರಿ ಕೋಳಿ ಹಾಗೂ ದುಡ್ಡು ಎಲ್ಲಿ ಹೋಯಿತು ಎಂದು ತೀರ್ಥಹಳ್ಳಿ ಭಾಗದಲ್ಲಿ ಚರ್ಚೆ ನಡೆಯುತ್ತಿದೆ.
ಕೋಳಿ ಪಡೆ
ಅಂದು ಅಂಕದಲ್ಲಿ ಪಾಲ್ಗೊಂಡವರನ್ನು ಬಿಡಿಸಲು ಪಕ್ಷಾತೀತವಾಗಿ ಒಂದಿಷ್ಟು ಮುಖಂಡರು ಪೊಲೀಸ್ ಠಾಣೆಗೆ ಎಡತಾಕಿದ್ರು. ಹೀಗೆ ಬಂದವರು ಸ್ಟೇಷನ್ನಲ್ಲಿದ್ದ ಅಂಕದ ಕೋಳಿಗಳನ್ನ ಕೊಂಡೊಯ್ದ್ರಾ ಎಂಬ ಅನುಮಾನ ಸ್ಥಳಿಯರದ್ದು. ಜೊತೆಯಲ್ಲಿ ಅಂಕದಲ್ಲಿ ಬಾಜಿಗಿಟ್ಟಿದ್ದ ದುಡ್ಡು ಎಲ್ಲಿ ಹೋಯ್ತು ಎಂಬ ಪ್ರಶ್ನೆಯು ಲೋಕಲ್ ಮಂದಿಯನ್ನ ಕಾಡುತ್ತಿದೆ. ಒಟ್ಟಾರೆ, ಮಾಳೂರು ಸುತ್ತಮುತ್ತಲಿನ ಕಟ್ಟೆ ಪಂಚಾಯ್ತಿಯಲ್ಲಿ ನಡೆವ ಸಾಯಂಕಾಲದ ಚರ್ಚೆಯಲ್ಲಿ ಅಂಕದ ಕೋಳಿ ಪೊಲೀಸ್ ದಾಳಿ ವಿಚಾರ ಸಮಾ ಸದ್ದು ಮಾಡುತ್ತಿದೆ
ಇನ್ನಷ್ಟು ಸುದ್ದಿಗಳು
ಶರಾವತಿ ಹಿನ್ನೀರಿನಲ್ಲಿ ಮುಳುಗಿತು ಲಾರಿ! ಲಾಂಚ್ ಹತ್ತಿಸುವಾಗ ನಡೆದ ಘಟನೆ!
ಬಾಯಿ ತಪ್ಪಿ ಆಡಿದ ಮಾತು! ಖರ್ಗೆ, ಖಂಡ್ರೆ ಬಗ್ಗೆ ಅಪಾರ ಗೌರವವಿದೆ ಎಂದರು ಮಾಜಿ ಗೃಹಸಚಿವ!
ಪ್ರತಿಭಟನೆ ಸಂದರ್ಭದಲ್ಲಿ ಆರಗ ಜ್ಞಾನೇಂದ್ರರವರು ಆಡಿದ ಮಾತು ವಿವಾದಕ್ಕೆ ಕಾರಣವಾಯ್ತಾ?
ಮಹಿಳೆಯ ಕೈ ಹಿಡಿದು ಎಳೆದಾಡಿದ್ದಕ್ಕೆ ಕೋರ್ಟ್ ಕೊಟ್ಟ ಶಿಕ್ಷೆ ಏನು ಗೊತ್ತಾ?
