ಗಾಂಧಿ ಬಜಾರ್‌ನಲ್ಲಿ ತಲೆಸುತ್ತು ಬಂದು ಕೂತವನನ್ನ ಮನೆಯಲ್ಲಿ ಕೂಡಿಹಾಕಿ ಹಲ್ಲೆ! ಮಾರಿ ಜಾತ್ರೆ ವೇಳೆ ಕೈ ಕೈ ಮಿಲಾಯಿಸಿದ್ದಕ್ಕೆ ಸುಮುಟೋ ಕೇಸ್‌!

Attacked in the house of a young man in Gandhi Bazaar! Sumuto case for fighting during mari jatre! Kote Police Station, Doddpet Police Station

ಗಾಂಧಿ ಬಜಾರ್‌ನಲ್ಲಿ ತಲೆಸುತ್ತು ಬಂದು ಕೂತವನನ್ನ ಮನೆಯಲ್ಲಿ ಕೂಡಿಹಾಕಿ ಹಲ್ಲೆ! ಮಾರಿ ಜಾತ್ರೆ ವೇಳೆ ಕೈ ಕೈ ಮಿಲಾಯಿಸಿದ್ದಕ್ಕೆ ಸುಮುಟೋ ಕೇಸ್‌!
Kote Police Station, Doddpet Police Station

shivamogga Mar 16, 2024   ಶಿವಮೊಗ್ಗ ನಗರದ  ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ನಲ್ಲಿ ಯುವಕನೊಬ್ಬನನ್ನ ಮನೆಯೊಳಗೆ ಕೂಡಿ ಹಾಕಿ ಹಲ್ಲೆ ಮಾಡಿದ ಬಗ್ಗೆ ದೂರು ದಾಖಲಾಗಿದ್ದು ಎಫ್‌ಐಆರ್‌ ದರ್ಜ್‌ ಆಗಿದೆ. ಐಪಿಸಿ ಸೆಕ್ಷನ್‌ : IPC 1860 (U/s-341,323,324,504,506,34) ಅಡಿಯಲ್ಲಿ ಕೇಸ್‌ ದಾಖಲಾಗಿದೆ. 

ಹದಿನಾಲ್ಕನೇ ತಾರೀಖು ರಾತ್ರಿ ಹನ್ನೊಂದು ಗಂಟೆಗೆ ಗಾಂಧಿ ಬಜಾರ್‌ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕರೊಬ್ಬರಿಗೆ ತಲೆಸುತ್ತು ಬಂದಿದೆ. ಹೀಗಾಗಿ ಅಲ್ಲಿಯೇ ಅಂಗಡಿಯೊಂದರ ಮೆಟ್ಟಿಲ ಮೇಲೆ ಕುಳಿತಿದ್ದಾರೆ. ಈ ವೇಳೆ ಪ್ರಕರಣದ ಆರೋಪಿ ಬಂದು ಯುವಕನನ್ನ ಹಿಡಿದುಕೊಂಡು ಆತನ ಮನೆಯೊಳಗೆ ಕರೆದೊಯ್ದಿದ್ದಾರೆ ಅಲ್ಲಿ ಆತನ ಸ್ನೇಹಿತ ಹಾಗೂ ತಂದೆ ಜೊತೆಗೂಡಿ ಹಲ್ಲೆ ಮಾಡಿದ್ದಾರೆ ಎಂದು ಯುವಕ ಆರೋಪಿಸಿದ್ದು, ಇದೇ ಆರೋಪದಡಿ ಕೇಸ್‌ ದಾಖಲಾಗಿದೆ. ವಿನಾಕಾರಣ ಹಲ್ಲೆ ಮಾಡಿದ್ದಾರೆ ಆರೋಪಿಸಿರುವ ಸಂತ್ರಸ್ತ ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ದೂರು ದಾಖಲಿಸಿದ್ದಾರೆ.

ಎಸ್‌ಪಿಎಂ ರೋಡ್‌ನಲ್ಲಿ ಸುಮುಟೋ ಕೇಸ್‌ 

ಇನ್ನೊಂದೆ ಕೋಟೆ  ಮಾರಿಕಾಂಬೆ ಜಾತ್ರೆ ಸಂದರ್ಭದಲ್ಲಿ ಬುದ್ದಿವಾದ ಹೇಳಿದರೂ ಪರಸ್ಪರ ಹೊಡೆದಾಡಿಕೊಂಡ ಕಾರಣ ಮೂವರ ವಿರುದ್ಧ ಕೋಟೆ ಪೊಲೀಸ್‌ ಸ್ಟೇಷನ್ ನಲ್ಲಿ ಸುಮುಟೋ ಕೇಸ್‌ ದಾಖಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿದ ಹಾಗೂ ಆ ಮೂಲಕ ಸಾಮಾಜಿಕ ಶಾಂತಿಗೆ ಭಂಗತಂದ ಆರೋಪದಡಿಯಲ್ಲಿ ಐಪಿಸಿ ಸೆಕ್ಷನ್‌ 160 ಅಡಿಯಲ್ಲಿ ಕೇಸ್‌ ದಾಖಲಿಸಲಾಗಿದೆ. 

ಕೋಟೆ ಪೊಲೀಸರು ಮಾರಿಕಾಂಬಾ ಜಾತ್ರೆಯ ಬಂದೋಬಸ್ತ್‌ನಲ್ಲಿದ್ದರು. ಈ ವೇಳೆ ಎಸ್‌ಪಿಎಂ ರೋಡ್‌ನಲ್ಲಿ ಮೂವರು ಪರಸ್ಪರ ಬೈದಾಡಿಕೊಂಡು ಹೊಡೆದಾಡಿದ್ದಾರೆ. ಅವರನ್ನ ತಡೆದ ಪೊಲೀಸರು ಬುದ್ದಿವಾದ ಹೇಳಿದ್ದಾರೆ. ಆದಾಗ್ಯು ಪೊಲೀಸರ ಮಾತು ಕೇಳದ ಆರೋಪಿಗಳು, ಸಮವಸ್ತ್ರದಾರಿ ಪೊಲೀಸರ ಎದುರೇ  ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡಿದ್ಧಾರೆ. ಹೀಗಾಗಿ ಮೂವರನ್ನ ವಶಕ್ಕೆ ಪಡೆದು ಪೊಲೀಸರು ಸುಮುಟೋ ಕೇಸ್‌ ದಾಖಲಿಸಿದ್ದಾರೆ.