ನ್ಯೂ ಮಂಡ್ಲಿಯಲ್ಲಿ ಮಾವ, ಅಳಿಯನನ್ನ ಅಡ್ಡಗಟ್ಟಿ ಭರ್ಚಿ ತೋರಿಸಿ ಬೆದರಿಕೆ | ಬೈಕ್‌ನಲ್ಲಿ ಮಾರಕಾಸ್ತ್ರ ಹಿಡಿದು ಓಡಾಟ

A young man brandished a machete and threatened to kill people in the New Mandli area near Shivamogga Doddapete police station limits.

ನ್ಯೂ ಮಂಡ್ಲಿಯಲ್ಲಿ ಮಾವ, ಅಳಿಯನನ್ನ ಅಡ್ಡಗಟ್ಟಿ ಭರ್ಚಿ ತೋರಿಸಿ ಬೆದರಿಕೆ |  ಬೈಕ್‌ನಲ್ಲಿ ಮಾರಕಾಸ್ತ್ರ ಹಿಡಿದು ಓಡಾಟ
Doddapete police station limits , New Mandli

SHIVAMOGGA | MALENADUTODAY NEWS | May 29, 2024  ಮಲೆನಾಡು ಟುಡೆ 

ಶಿವಮೊಗ್ಗದಲ್ಲಿ ಮತ್ತೊಂದು ಪುಂಡ ಹಾವಳಿ ಬಗ್ಗೆ ಕೇಸ್‌ವೊಂದು ದಾಖಲಾಗಿದೆ. ಇಂತಹ ಪ್ರಕರಣಗಳಲ್ಲಿ ಪೊಲೀಸರು ತಕ್ಷಣವೇ ಆಕ್ಷನ್‌ ತೆಗೆದುಕೊಂಡರೇ ದೂರುದಾರರಿಗೆ ಆತಂಕ ಕಡಿಮೆ ಮಾಡಬಹುದು. ಏಕೆಂದರೆ ಪ್ರಸ್ತುತ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಕೇಸ್‌ನಲ್ಲಿ ದೂರುದಾರರ ಜೀವ ಬೆದರಿಕೆಯನ್ನ ಎದುರಿಸುತ್ತಿರುವುದಾಗಿ  ಹೇಳಿದ್ಧಾರೆ. 

ಪ್ರಕರಣದ ವಿವರ ನೋಡುವುದಾದರೆ, ನ್ಯೂ ಮಂಡ್ಲಿಯ ನಿವಾಸಿಯೊಬ್ಬರು ತಮ್ಮ ಅಕ್ಕನ ಮಗನನ್ನ ಆತನ ಪುಟ್ಟ ಮಗು ಜೊತೆ ಅತ್ತೆ ಮನೆಗೆ ಬಿಟ್ಟು ಬರುವ ಸಂದರ್ಭದಲ್ಲಿ ಯುವಕನೊಬ್ಬ ಆತನಿಗೆ ಬೆದರಿಕೆ ಹಾಕಿದ್ದಾನೆ. ತನ್ನ ಕಾಲು ಹಿಡಿ ಎಂದು ದಾರಿಯಲ್ಲಿ ಅಡ್ಡ ಹಾಕಿದ ಯುವಕ ಆತನಿಗೆ ಭರ್ಚಿ ತೋರಿಸಿ ಕೊಲೆ ಬೆದರಿಕೆ ಹಾಕಿದ್ಧಾನೆ. ಆ ಯುವಕನ ಕೈಯಲ್ಲಿ ಪುಟ್ಟ ಮಗು ಇದೆ ಎಂದು ಸಹ ಕನಿಕರ ತೋರದ ಆರೋಪಿ ಜೀವ ಬೆದರಿಕೆ ಹಾಕಿದ್ದಾನೆ. ಈ ಘಟನೆ ಬಳಿಕ ಸಂತ್ರಸ್ತ ಯುವಕ ದೂರುದಾರರಿಗೆ ತನಗಾದ ಅನುಭವವನ್ನ ಹೇಳಿಕೊಂಡಿದ್ದಾನೆ. ಹೀಗಾಗಿ ಅದೇ ಏರಿಯಾದಲ್ಲಿರುವ ಆರೋಪಿಯನ್ನು ದೂರುದಾರರು ಕರೆದು ವಿಚಾರಿಸಿದ್ದಾರೆ. ಈ ವೇಳೆ ನಿನ್ಯಾರು ನನ್ನ ಹೆಸರಿಟ್ಟು ಕರೆಯೋಕೆ ಎಂದ ಆರೋಪಿ ಭರ್ಚಿಯಿಂದ ಚುಚ್ಚಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಅಲ್ಲಿದ್ದವರು ಆತನ ಕೈಯಲ್ಲಿದ್ದ ಮಾರಕಾಸ್ತ್ರ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಆಗ ಪರಾರಿಯಾದ ಆರೋಪಿ ಮತ್ತೆ ಪುನಃ ಬೈಕ್‌ನಲ್ಲಿ ದೂರುದಾರರ ಮನೆಯ ಸಮೀಪ ಬಂದು ಯಾರನ್ನು ಉಳಿಸಲ್ಲ ಎಂದು ಜೀವ ಬೆದರಿಕೆ ಹಾಕಿ ಎಸ್ಕೇಪ್‌ ಆಗಿದ್ಧಾನೆ. ವಿಷಯ ಅಂದರೆ ಬೈಕ್‌ನಲ್ಲಿ ಭರ್ಚಿ ಹಿಡಿದು ತಿರುಗಾಡುವ ಮಟ್ಟಕ್ಕೆ ಶಿವಮೊಗ್ಗ ಸಿಟಿಯ ಸನ್ನಿವೇಶ ಬದಲಾಗಿರುವುದು.