ಖಾಸಗಿ ಬಸ್‌ ನಿಲ್ದಾಣ | ಟಿಕೆಟ್‌ ಬುಕ್ಕಿಂಗ್‌ ಮುಗಿಸಿ ಪ್ಲಾಟ್‌ ಫಾರಂ 10 ಕ್ಕೆ ಬಂದ ವ್ಯಕ್ತಿಗೆ ಕಾದಿತ್ತು ಶಾಕ್‌

 A bike was stolen near the private bus stand in Shivamogga. The bike belonged to a ticket booking agent who had parked it at platform 10. A case has been registered at Doddapet police station. This incident is another example of the increasing number of bike thefts in the city.

ಖಾಸಗಿ ಬಸ್‌ ನಿಲ್ದಾಣ | ಟಿಕೆಟ್‌ ಬುಕ್ಕಿಂಗ್‌ ಮುಗಿಸಿ ಪ್ಲಾಟ್‌ ಫಾರಂ 10 ಕ್ಕೆ ಬಂದ ವ್ಯಕ್ತಿಗೆ ಕಾದಿತ್ತು ಶಾಕ್‌
private bus stand in Shivamogga.

SHIVAMOGGA | MALENADUTODAY NEWS | May 29, 2024  ಮಲೆನಾಡು ಟುಡೆ 

ಖಾಸಗಿ ಬಸ್‌ ನಿಲ್ದಾಣದ ಸಮೀಪ ನಿಲ್ಲಿಸಿದ್ದ ಬೈಕ್‌ವೊಂದು ಕಳ್ಳತನವಾಗಿದೆ. ಶಿವಮೊಗ್ಗ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಎಫ್‌ಐಆರ್‌ ದಾಖಲಾಗಿದೆ. 

ನಗರದಲ್ಲಿ ಬೈಕ್‌ ಕಳ್ಳತನ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಇದಕ್ಕೆ ಮತ್ತೊಂದು ಸಾಕ್ಷಿಯಾಗಿ ದೊಡ್ಡಪೇಟೆ ಪೊಲೀಸ್‌ ಠಾಣೆಯ ಲಿಮಿಟ್ಸ್‌ನಲ್ಲಿ ನಡೆದ ಈ ಘಟನೆ ನಡೆದಿದೆ. ಖಾಸಗಿ ಬಸ್‌ ನಿಲ್ದಾಣದಲ್ಲಿ ಟಿಕೆಟ್‌ ಬುಕ್‌ ಮಾಡುವ ಕೆಲಸ ಮಾಡುವ ಒಬ್ಬರು ತಮ್ಮ  ಹಿರೋ ಸ್ಟೆಂಡರ್ ಪ್ರೋ ಬೈಕ್ ನ್ನು  ಶಿವಮೊಗ್ಗ, ಖಾಸಗಿ ಬಸ್ ಸ್ಟ್ಯಾಂಡ್ ಪ್ಲಾಟ್ ಫಾರಂ-10 ರ ಬಳಿ ಲಾಕ್ ಮಾಡಿ ನಿಲ್ಲಿಸಿದ್ದರು. ಆ ಬಳಿಕ  ಟಿಕೇಟ್ ಬುಕಿಂಗ್ ಕೆಲಸಕ್ಕೆ ಹೋಗಿದ್ದರು. ಆದರೆ, ವಾಪಾಸ್ ಬಂದು ನೋಡುವಾಗ ಅಲ್ಲಿ ಬೈಕ್‌ ಇರಲಿಲ್ಲ. ಸುತ್ತಮುತ್ತಲು ಹುಡುಕಾಡಿ, ಎಲ್ಲರನ್ನು ವಿಚಾರಿಸಿದ ಅವರು ನಂತರ ಪೊಲೀಸರ ಮೊರೆಹೋಗಿದ್ದಾರೆ. ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. 