RIP : ಎರಡು ರೂಪಾಯಿಯ ವೈದ್ಯ ಬಡವರ ಡಾಕ್ಟರ್​ ಮಂಜಪ್ಪ !

Dr. Manjappa, a renowned doctor from Sagar taluk, passed away.

RIP : ಎರಡು ರೂಪಾಯಿಯ ವೈದ್ಯ ಬಡವರ ಡಾಕ್ಟರ್​ ಮಂಜಪ್ಪ !
RIP : ಎರಡು ರೂಪಾಯಿಯ ವೈದ್ಯ ಬಡವರ ಡಾಕ್ಟರ್​ ಮಂಜಪ್ಪ !

ಶಿವಮೊಗ್ಗ  ಜಿಲ್ಲೆ ಸಾಗರ ತಾಲ್ಲೂಕಿನ ಜೋಸೆಫ್ ನಗರದ ನಿವಾಸಿ, ಬಡವರ ವೈದ್ಯರೆಂದೇ ಖ್ಯಾತರಾಗಿದ್ದ ಡಾ|| ಮಂಜಪ್ಪ ನಿಧನರಾಗಿದ್ದಾರೆ.ಅವರಿಗೆ 85 ವರ್ಷವಾಗಿತ್ತು.

ಕಳೆದ 6 ದಶಕಗಳಿಂದ ಖಾಸಗಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಜೆ. ಸಿ. ರಸ್ತೆಯಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ನಗರ ಮತ್ತು ಗ್ರಾಮೀಣ ಪ್ರದೇಶದ ರೋಗಿಗಳು ಇವರ ಕೈಗುಣವನ್ನು ಮೆಚ್ಚಿ ತಪಾಸಣೆಗೆ ಇಲ್ಲಿಗೆ ಬರುತ್ತಿದ್ದರು. ವಿಶೇಷವೆಂದರೆ ಡಾ|| ಮಂಜಪ್ಪ ಸಾಗರ ಪ್ರಾಂತ್ಯದಲ್ಲಿ ಎರಡು ರೂಪಾಯಿ ಪಡೆಯುವ ವೈದ್ಯರೆಂದೇ ಖ್ಯಾತಿವೆತ್ತರಾಗಿದ್ದರು.

ತಪಾಸಣೆಗೆ ಬರುವವರಿಗೆ ಇಂತಿಷ್ಟೇ ಹಣ ಕೊಡಿ ಎಂದು ಯಾವತ್ತೂ ಕೇಳಿದವರಲ್ಲ, ಯಾವುದೇ ಫಲಾಪೇಕ್ಷೆ ಇಲ್ಲದೆ ವೈದ್ಯಕೀಯ ಸೇವೆ ಸಲ್ಲಿಸಿದವರು. ಯಾರೇ ಆಗಲಿ ಅವರನ್ನು ಸನ್ಮಾನಿಸುವುದಾಗಿ ಬಂದರೆ ನಯವಾಗಿ ತಿರಸ್ಕರಿಸಿ ಕಳುಹಿಸುತ್ತಿದ್ದರು.

ಸೈಕಲ್ ತುಳಿದುಕೊಂಡು ಹೋಗಿ ಹಳ್ಳಿಗಳಲ್ಲಿ ಚಿಕಿತ್ಸೆ ನೀಡುತ್ತಿದ್ದುದು ಇವರ ವಿಶೇಷ ವಾಗಿತ್ತು. ತೀರ ಬಡವರಾಗಿದ್ದಲ್ಲಿ ಅಂತಹ ರೋಗಿಗಳಿಂದ ಹಣವನ್ನು ಪಡೆಯದೆ ಕೊಟ್ಟುಕಳುಹಿಸುತ್ತಿದ್ದರು. ಔಷಧವನ್ನೂ ಸಹ ಉಚಿತವಾಗಿ ಕೊಟ್ಟು ಕಳುಹಿಸುತ್ತಿದ್ದರು. 

ಎರಡು ರೂಪಾಯಿಯ ವೈದ್ಯರು ಎಂದೇ ಪ್ರಖ್ಯಾತಿಯಾಗಿದ್ದ, ಮಂಜಪ್ಪ ಡಾಕ್ಟರ್ ಬಗ್ಗೆ ಸಾಗರದಲ್ಲಿ ಹಲವಾರು ವಿಶೇಷತೆಗಳು ಕೇಳಿಬರುತ್ತವೆ. ಸದ್ಯ ಅವರ ನಿಧನಕ್ಕೆ ಸಾಗರದ ನಾಗರಿಕರು ಸಂತಾಪ ಸೂಚಿಸಿದ್ದಾರೆ.  ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿರವರ ಇಆಡಳಿತ ಸಲಹೆಗಾರರು ಆದ ಬೇಳೂರು ಸುದರ್ಶನರವರು ತಮ್ಮ ಫೇಸ್​ಬುಕ್​ನಲ್ಲಿ ಬರೆದಿರುವ ಅಭಿಪ್ರಾಯ ಇಲ್ಲಿದೆ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com