BREAKING / ಶರಾವತಿ ಮು.ಳುಗಡೆ ಸಂತ್ರಸ್ತರಿಗೆ ರಿಲೀಫ್ ಕೊಟ್ಟ ಹೈಕೋರ್ಟ್

BREAKING/ HC grants relief to Sharavathi victims

BREAKING / ಶರಾವತಿ ಮು.ಳುಗಡೆ ಸಂತ್ರಸ್ತರಿಗೆ ರಿಲೀಫ್ ಕೊಟ್ಟ ಹೈಕೋರ್ಟ್

KARNATAKA NEWS/ ONLINE / Malenadu today/ Apr 26, 2023 GOOGLE NEWS


ಸಾಗರ/ಶಿವಮೊಗ್ಗ   ಶರಾವತಿ ಹಿನ್ನೀರ ಮುಳುಗಡೆ ಸಂತ್ರಸ್ತರನ್ನು ಒಕ್ಕಲೆಬ್ಬಿಸಿದಂತೆ, ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದರಿಂದಾಗಿ  305  ಸಂತ್ರಸ್ತ ರೈತರು ನಿಟ್ಟುಸಿರು ಬಿಡುವಂತಾಗಿದೆ. ಮಧ್ಯಂತರ ತಡೆಯಾಜ್ಞೆ ಇದಾಗಿದ್ದು, ಹೈಕೋರ್ಟ್​ನಲ್ಲಿ ಈ ಸಂಬಂಧ ವಿಚಾರಣೆ ಮುಂದುವರಿಯಲಿದೆ. 

ಏನಿದು ಪ್ರಕರಣ

ಈ ವಿಚಾರವಾಗಿ ಸುದ್ದಿಗೋಷ್ಟಿಯೊಂದರಲ್ಲಿ ಸಿಗಂದೂರು ಚೌಡೇಶ್ವರಿ ದೇವಸ್ಥಾನದ  (siganduru sri chowdeshwari temple) ಧರ್ಮದರ್ಶಿ ಡಾ.ರಾಮಪ್ಪ ಸರ್ಕಾರದ ಡಿನೋಟಿಫಿಕೇಶನ್ ರದ್ದತಿ ಆದೇಶವನ್ನು ಪ್ರಶ್ನಿಸಿ 305 ರೈತ ಕುಟುಂಬಗಳು ಹೈಕೋರ್ಟ್ ಮೆಟ್ಟಿಲೇರಿದ್ದವು.  ಇದೀಗ ಕೋರ್ಟ್​ ರೈತರಿಗೆ ತೊಂದರೆ ಕೊಡದಂತೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿದೆ ಎಂದರು. 



ಓದಿ / ಶಿವಮೊಗ್ಗದ ರಸ್ತೆಗಳಲ್ಲಿ ಯುವಕನ ಬೈಕ್​ ಸ್ಟಂಟ್/  ಸೈಲೆಂಟ್ ಆಗಿ  ಪುಂಡರಿಗೆ ವಾರ್ನಿಂಗ್​ ಕೊಟ್ಟ ಪೊಲೀಸ್ 

ಸಮಸ್ಯೆ ಏನಾಗಿತ್ತು

ಶರಾವತಿ ಸಂತ್ರಸ್ತರಿಗೆ  ಶಿವಮೊಗ್ಗ  ಜಿಲ್ಲೆಯ ಬೇರೆಬೇರೆ ಭಾಗಗಳಲ್ಲಿ ಜಮೀನು ನೀಡಲಾಗಿದೆ. ಆದರೆ, ಈ ಭೂಮಿಯ ಹಕ್ಕನ್ನು ಸಂತ್ರಸ್ತರ ಹೆಸರಿಗೆ ಮಾಡಿಕೊಡಲಿಲ್ಲ. ಇದರಿಂದಾಗಿ ಒಂದಿಲ್ಲ ಒಂದು ಸಮಸ್ಯೆ ಎದುರಾಗುತ್ತಲೆ ಬಂದಿದೆ.

ಓದಿ / ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ 

ಡಿನೋಟಿಫಿಕೇಶನ್​ ರದ್ದು ಮಾಡಿದ್ದ ಸರ್ಕಾರ

ಈ ಮಧ್ಯೆ  ಸರ್ಕಾರ  ಇತ್ತೀಚೆಗೆ ಶರಾವತಿ ಸಂತಸ್ತ್ರರಿಗೆ ನೀಡಿರುವ ಭೂಮಿಯ ಡಿನೋಟಿಫಿಕೇಶನ್ ಆದೇಶವನ್ನು ರದ್ದುಗೊಳಿಸಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿತ್ತು. ರಾಜ್ಯಪತ್ರದಲ್ಲಿ  ಭೂಮಿ ಮಂಜೂರು ಮಾಡಿದ ಪ್ರಕ್ರಿಯೆ ಕಾನೂನು ಬಾಹಿರ ಎಂದು ತಿಳಿಸಿತ್ತು. 



ಓದಿ / ಡಿಪ್ಲೋಮೋ ಕೋರ್ಸ್​ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 %  ಉದ್ಯೋಗಾವಕಾಶ/ ವಿವರ ಇಲ್ಲಿದೆ 

ಹೈಕೋರ್ಟ್ ಮೆಟ್ಟಿಲೇರಿದ್ದ ಸಂತ್ರಸ್ತರು

ಇದನ್ನ ಪ್ರಶ್ನಿಸಿ 305 ರೈತರು ರಾಮಪ್ಪರವರ ನೇತ್ರತ್ವದಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು, ಇದೀಗ ಸಂತ್ರಸ್ತರ ಅಹವಾಲಿನಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಸಂತ್ರಸ್ತರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.  

ಓದಿ / ಡಿಪ್ಲೋಮೋ ಕೋರ್ಸ್​ಗೆ ಅರ್ಜಿ ಆಹ್ವಾನ/ ತರಬೇತಿ ಬಳಿಕ 100 %  ಉದ್ಯೋಗಾವಕಾಶ/ ವಿವರ ಇಲ್ಲಿದೆ 



Malenadutoday.com Social media