ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಸಭ್ಯತೆ​ ! ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಲ್ಲಿ ಅಪ್ತಾಪ್ತನ ಜೊತೆ ಯುವತಿ ಅಶ್ಲೀಲ ಕುಣಿತ!?

A video of a young woman dancing with a boy at a Kannada Rajyotsava function in Sagar taluk of Shivamogga district has gone viral

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಸಭ್ಯತೆ​ ! ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಲ್ಲಿ ಅಪ್ತಾಪ್ತನ ಜೊತೆ ಯುವತಿ ಅಶ್ಲೀಲ ಕುಣಿತ!?

SHIVAMOGGA NEWS / Malenadu today/ Nov 28, 2023 | Malenadutoday.com  

SHIVAMOGGA | ಕಾರ್ಯಕ್ರಮಗಳಲ್ಲಿ ಬಹಿರಂಗವಾಗಿ ಅಶ್ಲೀಲ ನೃತ್ಯಗಳನ್ನ ಆಯೋಜಿಸುವಂತಹ ಪ್ರವೃತ್ತಿಯು ಇದೀಗ ಶಿವಮೊಗ್ಗದಲ್ಲಿಯು ಕಾಣತೊಡಗಿದೆಯೇ? ಹೀಗೊಂದು ಪ್ರಶ್ನೆ ಎದುರಾಗಲು ಕಾರಣ ಸದ್ಯ ಹೊರಬಿದ್ದಿರುವ ವೈರಲ್ ವಿಡಿಯೋ!

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು

ಶಿವಮೊಗ್ಗ ಜಿಲ್ಲೆಯ  ಸಾಗರ ತಾಲ್ಲೂಕು ಹಳ್ಳಿಯೊಂದರಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಡೆದಿದೆ ಎನ್ನಲಾದ ಅಶ್ಲೀಲ ನೃತ್ಯದ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ. 

ಕನ್ನಡ ರಾಜ್ಯೋತ್ಸವ 

ಮುಖ್ಯವಾಗಿ ಸಭ್ಯ ಕಾರ್ಯಕ್ರಮವಾಗಬೇಕಿದ್ದ ಕನ್ನಡ ರಾಜ್ಯೋತ್ಸವ ದಲ್ಲಿ ಅರೆಬರೆ ಬಟ್ಟೆ ತೊಟ್ಟ ಯುವತಿಯನ್ನು ಕುಣಿಸಿದ್ದು ವಿರೋಧಕ್ಕೆ ಕಾರಣವಾಗಿದೆ. ಇದಕ್ಕಿಂತ ಹೆಚ್ಚಾಗಿ ಒಬ್ಬ ಅಪ್ರಾಪ್ತ ಬಾಲಕನನ್ನ ಬಳಸಿಕೊಂಡು ಅಶ್ಲೀಲ ಭಂಗಿಗಳಲ್ಲಿ ಯುವತಿ ಕುಣಿದಿದ್ದಾಳೆ. ಇದು ಆಕ್ರೋಶಕ್ಕೆ ಗುರಿಯಾಗಿದೆ.

READ : ಬಿ.ಹೆಚ್​.ರೋಡ್​ನಲ್ಲಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳಿಂದ ರಸ್ತೆ ತಡೆ! ಕಾರಣ?

ಭದ್ರಾವತಿ ಮೂಲದ ಆರ್ಕೆಸ್ಟ್ರಾ?

ಎರಡುವರ ನಿಮಿಷದ ಮೊಬೈಲ್ ದೃಶ್ಯಾವಳಿಯಲ್ಲಿ ಯುವತಿಯು ಬಾಲಕನನ್ನ ಒಬ್ಬ ಪುರುಷನ ರೀತಿಯಲ್ಲಿ ಬಳಸಿಕೊಂಡು ಆತನ ಜೊತೆಗೆ ಸೆಕ್ಸ್​​ ಓರಿಯೆಂಟೆಡ್​ ಸ್ಟೆಪ್​ಗಳನ್ನು ಹಾಕುತ್ತಿದ್ದಾಳೆ. ಇನ್ನೂ ದೃಶ್ಯದ ಹಿಂದೆ ಕಾಣುವ ಬ್ಯಾನರ್​ ನಲ್ಲಿ ಶಿವಮೊಗ್ಗ ಜಿಲ್ಲೆ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಭದ್ರಾವತಿ  ಮೂಲದ ಆರ್ಕೆಸ್ಟ್ರಾ ಎಂಬ ಬರಹ ಕೂಡ ಕಾಣುತ್ತಿದೆ. 

ವಿಡಿಯೋ ವೈರಲ್​

ಮೂಲಗಳ ಪ್ರಕಾರ, ಕನ್ನಡ ಸಂಘಟನೆಯೊಂದರ ಕಾರ್ಯಕ್ರಮ ಇದಾಗಿತ್ತು ಎನ್ನಲಾಗಿದ್ದು ಸದ್ಯ ವಿಡಿಯೋ ವೈರಲ್ ಆಗುತ್ತಿದ್ದು, ಬಾಲಕನೊಬ್ಬನನ್ನ ಅಸಭ್ಯ ರೀತಿಯಲ್ಲಿ ಕುಣಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಪೊಲೀಸ್​ ಇಲಾಖೆಗೆ ಮಾಹಿತಿ ಇದೆಯಾ ಅಥವಾ ಇದುವರೆಗೂ ಇಲ್ಲವಾ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ. 

READ : ಕುಂದಾಪುರದ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿಯೇ ಯಾಕೆ ನಡೆಯಿತು ಗೊತ್ತಾ ಕಾಂತಾರಾ 1 ಮಹೂರ್ತ!? ರಿಷಬ್ ಹೇಳಿದ್ದೇನು?

ಮಕ್ಕಳ ಕಲ್ಯಾಣ ಇಲಾಖೆ

ಮಕ್ಕಳನ್ನು ಅಶ್ಲೀಲತೆಗೆ ಸಂಬಂಧಿಸಿದ ಯಾವುದೆ ವಿಚಾರದಲ್ಲಿಯು ಬಳಸಿಕೊಳ್ಳುವುದು ಅಪರಾಧವಾಗುತ್ತದೆ. ಪೋಕ್ಸೋ ಕಾಯಿದೆಯಡಿಯಲ್ಲಿ ಇಂತಹ ಕೃತ್ಯಗಳು ಶಿಕ್ಷಾರ್ಹ. ಸದ್ಯ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಅಪ್ರಾಪ್ತನನ್ನು ಯುವತಿ ಅಸಭ್ಯ ಕುಣಿತಕ್ಕಾಗಿ ಬಳಸಿಕೊಂಡಿರುವುದು ಕಾಣುತ್ತಿದೆ. ಈ ಬಗ್ಗೆ ಮಕ್ಕಳ ಕಲ್ಯಾಣ ಇಲಾಖೆಯು ಸಹ ಗಮನಹರಿಸಬೇಕಿದೆ.