ಬೇಟೆ ಪಾಲು ಮಾಡುವಾಗ ಎದುರಾಯ್ತು ಶಾಕ್!‌ ಶಿಕಾರಿ ಮಾಡುವ ಮುನ್ನ ಹುಷಾರ್!‌

Forest officials' raid shikari while hunting and sharing deer on the banks of Sharavathi. Be careful before you do!

ಬೇಟೆ ಪಾಲು ಮಾಡುವಾಗ ಎದುರಾಯ್ತು ಶಾಕ್!‌ ಶಿಕಾರಿ ಮಾಡುವ ಮುನ್ನ ಹುಷಾರ್!‌
Sharavathi,shikari

Shivamogga  Apr 5, 2024   ವನ್ಯಜೀವಿಗಳ ಶಿಕಾರಿಗೆ ನಿಷೇಧವಿದೆ. ಆದರೂ ಕೆಲವರು ಕಾಡು ಪ್ರಾಣಿಗಳನ್ನ ಬೇಟೆಯಾಡುತ್ತಿದ್ದಾರೆ. ಅದರಲ್ಲಿಯು ಇದರ ಹಿಂದಿರೋ ದೊಡ್ಡ ಮಾಫಿಯಾ ಕಾನೂನಿನ ಜೊತೆಗೆ ಇಂದಿಗೂ ಕಣ್ಣಾಮುಚ್ಚಾಲೆಯಾಡುತ್ತಿದೆ. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಾರ್ಗಲ್‌ ನಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಪಾಲು ಮಾಡುವ ವೇಳೇ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ. 

ಶರಾವತಿ ಸಿಂಗಳೀಕ ಅಭಯಾರ‍ಣ್ಯ ವ್ಯಾಪ್ತಿಯಲ್ಲಿ  ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ  ಅಂಬಾರಗೋಡ್ಲು ಹಿನ್ನೀರ ತೀರದಲ್ಲಿ ಜಿಂಕೆಯನ್ನು ಬೇಟೆಯಾಡಲಾಗಿದೆ ಎಂಬ ಮಾಹಿತಿ ಅರಣ್ಯ ಇಲಾಖೆಗೆ ಲಭ್ಯವಾಗಿದೆ. ಅದರಂತೆ ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಸಂಧ್ಯಾ, ಉಪ ವಲಯ ಅರಣ್ಯಾಧಿಕಾರಿ ಜಿ.ಕೆ. ಸುಧಾಕರ್, ವನಪಾಲಕರಾದ ಮಹೇಶ್ ಬಮ್ಮನಹಳ್ಳಿ ಅವರ ತಂಡ ದಾಳಿ ನಡೆಸಿದೆ. 

ಈ ದಾಳಿಯಲ್ಲಿ  ಗೆಣಸಿನಕುಣಿ ಸಾಕಳಲು ಗ್ರಾಮದ ಬಾಳೆಕೊಪ್ಪ ನಿವಾಸಿ ಸತೀಶ, ಆನಂದಪುರ ಯಡೇಹಳ್ಳಿ ಗ್ರಾಮದ ನಾಗರಾಜ ಮತ್ತು ಪ್ರಜ್ವಲ್ ಸಿಕ್ಕಿಬಿದ್ದಿದು, ಮೂವರು ಆರೋಪಿಗಳ ವಿರುದ್ಧ ವನ್ಯಜೀವಿ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಅಲ್ಲದೆ ಜಿಂಕೆಯ ಚರ್ಮ, ತಲೆ ಮತ್ತು ನಾಡ ಬಂದೂಕು ವಶಪಡಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಸಂಧ್ಯಾ ಮಾಹಿತಿ ನೀಡಿದ್ದಾರೆ.