ಪಂಚಾಯ್ತಿ ಸ್ಪೇಷಲ್​ ! ಈ ಗ್ರಾಮ ಪಂಚಾಯತ್ ಮಗಳು ಅಧ್ಯಕ್ಷೆ -ಅಮ್ಮ ಉಪಾಧ್ಯಕ್ಷೆ !

The daughter has been elected as the president and the mother as the vice-president of the Garje gram panchayat in Chikkamagaluru district. ಚಿಕ್ಕಮಗಳೂರು ಜಿಲ್ಲೆಯ ಗರ್ಜೆ ಗ್ರಾಮ ಪಂಚಾಯಿತಿಗೆ ಮಗಳು ಅಧ್ಯಕ್ಷೆಯಾಗಿ, ತಾಯಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಪಂಚಾಯ್ತಿ ಸ್ಪೇಷಲ್​ ! ಈ ಗ್ರಾಮ ಪಂಚಾಯತ್ ಮಗಳು ಅಧ್ಯಕ್ಷೆ -ಅಮ್ಮ ಉಪಾಧ್ಯಕ್ಷೆ !

KARNATAKA NEWS/ ONLINE / Malenadu today/ Aug 12, 2023 SHIVAMOGGA NEWS 

ಸದ್ಯ ಎಲ್ಲೆಡೆ ಗ್ರಾಮ ಪಂಚಾಯಿತಿ ಅದ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯುತ್ತಿದ್ದು ರಾಜಕೀಯ ಪಕ್ಷಗಳ ಬಲಾಬಲ ಶಕ್ತಿಪ್ರದರ್ಶನ ನಡೆಯುತ್ತಿದೆ. ಇದರ ನಡುವೆ ಕೆಲವೊಂದು ಗ್ರಾಮ ಪಂಚಾಯಿತಿಗಳಲ್ಲಿ ಅಚ್ಚರಿ ಮೂಡುವಂತ ಸಂಗತಿಗಳು ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ,  ಅಮ್ಮ-ಮಗಳು (mother, daughter) ಒಂದೇ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ-ಉಪಾಧ್ಯಕ್ಷೆಯಾದ ಬಗ್ಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ವರದಿಯಾಗಿದೆ. 

ಚಿಕ್ಕಮಗಳೂರು (Chikkamagaluru) ಜಿಲ್ಲೆ ಕಡೂರು ತಾಲೂಕಿನ  ಗರ್ಜೆ ಗ್ರಾಮ ಪಂಚಾಯಿತಿಗೆ (Garje Gram Panchayat) ಸ್ನೇಹ ಎಂಬವರು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಇವರ  ತಾಯಿ ನೇತ್ರಾವತಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.  ಜನರಲ್ ಲೇಡಿಗೆ ಬಂದಿದ್ದ ಮೀಸಲಾತಿ ಅನ್ವಯ ಅಧ್ಯಕ್ಷೆಯಾಗಿ  ಮಗಳು ಆಯ್ಕೆಯಾದರೆ,  ಬಿಸಿಎಂ ಲೇಡಿಗೆ ಬಂದಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ತಾಯಿ ಆಯ್ಕೆಯಾಗಿದ್ದಾರೆ.   

ಭದ್ರಾವತಿ ಶಾಸಕರಿಗೆ ಹೊಸ ಜವಾಬ್ದಾರಿ! ಮಿಸ್​ ಆಯ್ತಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ!?

ಶಿವಮೊಗ್ಗ ಜಿಲ್ಲೆ ಭದ್ರಾವತಿ ವಿಧಾನಸಭಾ ಕ್ಷೇತ್ರದ (Bhadravati Assembly Constituency) ಶಾಸಕ  ಬಿ.ಕೆ ಸಂಗಮೇಶ್ವರ್‌ (BK Sangameshwar) ರವರನ್ನು ವಿಧಾನಸಭೆ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರನ್ನಾಗಿ ಸಭಾಧ್ಯಕ್ಷ ಯು.ಟಿ ಖಾದರ್‌ ನೇಮಕಗೊಳಿಸಿದ್ದಾರೆ ಎಂದು ವರದಿಯಾಗಿದೆ. ಈ  ಸಮಿತಿಯಲ್ಲಿ ಒಟ್ಟು  15 ಸದಸ್ಯರಿರಲಿದ್ದಾರೆ.   ಸದನದಲ್ಲಿ ಸದಸ್ಯರುಗಳು ಕೇಳುವ ಪ್ರಶ್ನೆಗಳು, ಗಮನ ಸೆಳೆಯುವ ಸೂಚನೆ, ಶೂನ್ಯ ವೇಳೆ ಚರ್ಚೆ, ಅಧ್ಯಕ್ಷರ ಅಪ್ಪಣೆ ಮೇರೆಗೆ ಚರ್ಚಿಸುವ ಸಂದರ್ಭದಲ್ಲಿ ಸಚಿವರುಗಳು ನೀಡುವ ಭರವಸೆಗಳನ್ನು ಪರಿಶೀಲಿಸುವುದು, ಗರಿಷ್ಠ 2  ತಿಂಗಳ ಅವಧಿಯಲ್ಲಿ ಕಾರ್ಯಗತಗೊಳಿಸಲಾಗಿದೆಯೇ ಇಲ್ಲವೇ ಎಂಬುದನ್ನು ವರದಿ ಮಾಡುವುದು ಈ ಸಮಿತಿಯ ಕೆಲಸವಾಗಿದೆ. 

ನಿಗಮ ಮಂಡಳಿ ಅಧ್ಯಕ್ಷ ಸ್ಥಾನವೂ ಇಲ್ಲವಾ?

ಶಾಸಕ ಸಂಗಮೇಶ್​ ಸಚಿವ ಸ್ಥಾನ ಮಿಸ್ ಆಗಿತ್ತು. ಇದೀಗ ಅವರನ್ನು ಸಮಿತಿ ಅಧ್ಯಕ್ಷ ಮಾಡಿರುವುದನ್ನ ಗಮನಿಸಿದರೆ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಗಾಧಿಯು ಸಿಗುವುದು ಅನುಮಾನ ಎನ್ನಲಾಗುತ್ತಿದೆ. 

ಶಿವಮೊಗ್ಗ ನಗರ ಶಾಸಕರಿಂದ ಉದ್ಘಾಟನೆಗೊಂಡ TS ಸರ್ಕಲ್! ಇಲ್ಲಿರೋ ವಿಶೇಷ ಏನು ಗೊತ್ತಾ?

ಶಿವಮೊಗ್ಗ ನಗರದ ಗೋಪಿವೃತ್ತದ ಅಧಿಕೃತ ಹೆಸರು ಸರ್ಕಲ್​ನಲ್ಲಿ ಆಕರ್ಷಕ ರೂಪದಲ್ಲಿ ಸ್ಥಾಪನೆಗೊಂಡಿದೆ. ನಿನ್ನೆ ಟಿ.ಸೀನಪ್ಪ ಶೆಟ್ಟಿ ವೃತ್ತ ಎಂದು ಬರೆದಿರುವ ಕಲ್ಲಿನ  ನಾಮಫಲಕವನ್ನು ಶಾಸಕ ಎಸ್.ಎನ್‌.ಚನ್ನಬಸಪ್ಪ  (SN Channabasappa)  ಉದ್ಘಾಟಿಸಿದ್ದಾರೆ. ಇದೇ ವೇಳೆ ಮಾತನಾಡಿದ  ಶಾಸಕರು ಈ ಮೊದಲು ಗೋಪಿವೃತ್ತ ಎಂದು ಸರ್ಕಲ್ ನ್ ಕರೆಯಲಾಗ್ತಿತ್ತು. ಆದರೆ, ಬಹಳಷ್ಟು ಮಂದಿಗೆ ಮಾಹಿತಿಯಿಲ್ಲ. 1956 ರಲ್ಲಿಯೇ ಈ ವೃತ್ತಕ್ಕೆ ಟಿ. ಸೀನಪ್ಪ ಶೆಟ್ಟಿ ವೃತ್ತಕ್ಕೆ ಎಂದು ಹೆಸರಿಡಲು ಅಂದಿನ ಪುರಸಭೆ ಒಪ್ಪಿಗೆ ನೀಡಿತ್ತು. ಸೀನಪ್ಪ ಶೆಟ್ಟಿ ಕುಟುಂಬದವರು ಈ ವೃತ್ತಕ್ಕಾಗಿಯೇ ಆಗಿನ ಕಾಲದಲ್ಲಿ 25 ಸಾವಿರ ರೂಪಾಯಿ ಕೊಟ್ಟಿದ್ದರು ಎಂದರು. ಅಂದಿನ ಕಾಲದಲ್ಲಿ ಇದು ಕಡಿಮೆ ಹಣವೇನಲ್ಲ , ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಇಲ್ಲಿನ ಕಾರಂಜಿ ಯನ್ನು ಸ್ಥಳಾಂತರ ಮಾಡಲಾಗಿತ್ತು. ಇನ್ನೂ  ಮುಂದೆ ಈ ವೃತ್ತವನ್ನು ಗೋಪಿ ವೃತ್ತ ಎಂದು ಕರೆಯದೇ ಸೀನಪ್ಪ ಶೆಟ್ಟಿ ವೃತ್ತ ಎಂದೇ ಕರೆಯಬೇಕು ಎಂದರು.  


ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು